ಮಾ.11-16: ಬೆಂಗಳೂರು ಶೇಷಾದ್ರಿಪುರಂ ರಾಯರ ಮಠದಲ್ಲಿ ಗುರುಗಳ ಪಟ್ಟಾಭಿಷೇಕ ಮಹೋತ್ಸವ

Upayuktha
0



ಬೆಂಗಳೂರು : ಶೇಷಾದ್ರಿಪುರದ ಪ್ಲಾಟ್ ಫಾರಂ ರಸ್ತೆಯಲ್ಲಿರುವ (ಮಂತ್ರಿ ಮಾಲ್ ಮೆಟ್ರೋ ರೈಲ್ವೆ ನಿಲ್ದಾಣದ ಎದುರು) ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ  ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಮಾರ್ಚ್ 11 ರಿಂದ 16ರ ವರೆಗೆ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪಟ್ಟಾಭಿಷೇಕ ಮತ್ತು ವರ್ಧಂತ್ಯೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ. 



"ಶ್ರೀಮದ್ಭಾಗವತ "ಪ್ರವಚನ : ಮಾರ್ಚ್ 11 ರಿಂದ 16 ಪ್ರತಿದಿನ ಸಂಜೆ 6-00 ಗಂಟೆಗೆ ಮ||ಶಾ||ಸಂ|| ಶ್ರೀ ಉಡುಪಿ ಕೃಷ್ಣಾಚಾರ್ಯರಿಂದ "ಶ್ರೀಮದ್ಭಾಗವತ" ಪ್ರವಚನ ನಡೆಯಲಿದೆ.



 ಭಜನಾಮೃತ : ಪ್ರತಿದಿನ ಸಂಜೆ 5-00 ರಿಂದ 6-00 ಗಂಟೆಯ ವರೆಗೆ ನಡೆಯಲಿದೆ. 

 ಮಾರ್ಚ್ 11ರಂದು ಶ್ರೀ ವಿಜಯ ವಿಠಲ ಭಜನಾ ಮಂಡಳಿ (ವಿದ್ಯಾರಣ್ಯಪುರ), ಮಾರ್ಚ್ 12 ರಂದು ಅಂಭ್ರಣಿ ಭಜನಾ ಮಂಡಳಿ (ರಾಜಾಜಿನಗರ), ಮಾರ್ಚ್ 13 ರಂದು ಅಲಕನಂದ ಭಜನಾ ಮಂಡಳಿ (ಬಸವೇಶ್ವರನಗರ), ಮಾರ್ಚ್ 14 ರಂದು ರುಕ್ಮಿಣಿ ಮಹಿಳಾ ಸಂಘ  (ರಾಜಾಜಿನಗರ), ಮಾರ್ಚ್ 15 ರಂದು ಶ್ರೀ ವಿಜಯ ವಿಠಲ ಭಜನಾ ಮಂಡಳಿ (ಈಜುಕೊಳದ ಬಡಾವಣೆ).



"ಹರಿನಾಮ ಸಂಕೀರ್ತನೆ" : ಮಾರ್ಚ್ 16, ಶನಿವಾರ ಸಂಜೆ 7-00ಕ್ಕೆ "ಹರಿನಾಮ ಸಂಕೀರ್ತನೆ"ಕಾರ್ಯಕ್ರಮ ನಡೆಯಲಿದೆ.   ಗಾಯನ : ಸುಷ್ಮಾ ಶ್ರೇಯಸ್, ಕೀ-ಬೋರ್ಡ್ :  ಅಮಿತ್ ಶರ್ಮಾ, ತಬಲಾ :  ಸರ್ವೋತ್ತಮ.



ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಹಾಗೂ ಹರಿವಾಯುಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಮಠದ ಪದಾಧಿಕಾರಿಗಳು ವಿನಂತಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top