ಮಣಿಪಾಲ: ಜೆಸಿಐ ಸಂಸ್ಥೆಯಿಂದ ರಕ್ತದಾನಿಗೆ ಸನ್ಮಾನ

Upayuktha
0



ಮಣಿಪಾಲ: ಜೆಸಿಐ ಉಡುಪಿ ಸಿಟಿ ಇದರ ವತಿಯಿಂದ "Salute the Silent Star" ಕಾರ್ಯಕ್ರಮವನ್ನು ಸರಕಾರಿ ಪಾಲಿಟೆಕ್ನಿಕ್ ಕಾಲೇಜ್, ಅನಂತನಗರ, ಮಣಿಪಾಲದಲ್ಲಿ ಇತ್ತೀಚೆಗೆ ನಡೆಯಿತು. ಸ್ವಯಂ ಪ್ರೇರಿತ ರಕ್ತದಾನಿ, ಕಾಲೇಜಿನ ಪ್ರಾಧ್ಯಾಪಕ ಶಿವಪ್ರಸಾದ್ ರವರನ್ನು ಸನ್ಮಾನಿಸಲಾಯಿತು.



ಬಳಿಕ ಅವರು ಮಾತನಾಡಿ ರಕ್ತದಾನದ ಮಹತ್ವದ ಬಗ್ಗೆ, ಯುವಜನತೆ ರಕ್ತದಾನ ನೀಡಲು ಸ್ವಯಂಪ್ರೇರಿತರಾಗುವಂತೆ ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಜೆಸಿಐ ಉಡುಪಿ ಸಿಟಿಯ ಪೂರ್ವಾಧ್ಯಕ್ಷರಾದ ಜೆಸಿ ಪೂರ್ಣಿಮಾ ಸುರೇಶ್ ರವರು ಭಾಗವಹಿಸಿ ಜೆಸಿಐ ಸಂಸ್ಥೆಯ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಈ ಸಂದರ್ಭದಲ್ಲಿ ತಿಳಿಸಿದರು.



ಕಾಲೇಜಿನ ಪ್ರಾಂಶುಪಾಲ ಜಯ ಎಲ್ ಮೊಯ್ಲಿರವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೆಸಿಐ ಉಡುಪಿ ಸಿಟಿಯ ಅಧ್ಯಕ್ಷೆ ಜೆಸಿ ಡಾ. ಹರಿಣಾಕ್ಷಿ ಕರ್ಕೇರರವರು ಸಭಾಧ್ಯಕ್ಷತೆ ವಹಿಸಿದರು. ಜೆಸಿಐ ಉಡುಪಿ ಸಿಟಿಯ ಲೇಡಿ ಜೇಸಿ ಸಂಯೋಜಕಿ ಜೆ.ಸಿ ನಯನ ಉದಯ್ ನಾಯ್ಕ್ ಹಾಗೂ ನಿಕಟಪೂರ್ವ ಅಧ್ಯಕ್ಷರು ಜೆಸಿ ಕಿರಣ್ ಭಟ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.



ಕಾರ್ಯಕ್ರಮದಲ್ಲಿ ಜೆಸಿಐ   ಭಾರತದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಜೆಸಿ ಸಂದೀಪ್ ಕುಮಾರ್ ಮಂಜ, ಜೆಸಿಐ ಉಡುಪಿ ಸಿಟಿಯ ಪೂರ್ವಾಧ್ಯಕ್ಷರುಗಳಾದ ಜೆಸಿ ರಾಘವೇಂದ್ರ ಪ್ರಭು ಕರ್ವಾಲು, ಜೆಸಿ ಉದಯ ನಾಯ್ಕ್, ಕಾರ್ಯದರ್ಶಿ ಜೆಸಿ ಸಂಧ್ಯಾ ವಿ ಕುಂದರ್, Rtn. ಗುರುಪ್ರಸಾದ್, Rtn. ಸುನಿಲ್, ಜೆಸಿ ನಿಶಾ ದೇವಾಡಿಗ, ಜೆಸಿ ಉಷಾ ಕುಮಾರಿ, ಜೆಸಿ ಅವಿನಾಶ್, ಜೆಸಿ ಅಭಿಷೇಕ್, ಕಾಲೇಜಿನ ಪ್ರಾಧ್ಯಾಪಕ ವೃಂದದವರು, ಸಿಬ್ಬಂದಿ ವರ್ಗದವರು, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top