ಮಂಗಳೂರು: ಮಂಗಳೂರಿನ ಇತಿಹಾಸ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಮಂಗಳಾದೇವಿಯ ಐತಾಳ ಮನೆತನದ ಅರುಣ್ ಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ.
ಶ್ರೀ ಮಂಗಳಾದೇವಿ ದೇವಸ್ಥಾನವು ನಾಲ್ವರು ಅನುವಂಶಿಕ ಮೊಕ್ತೇಸರರಿಂದ ಆಡಳಿತ ನಿರ್ವಹಣೆಯಾಗುತ್ತಿದ್ದು, ಖಾಲಿ ಇದ್ದ ಅನುವಂಶಿಕ ಮೊಕ್ತೇಸರ ಹುದ್ದೆಗೆ ಐತಾಳ ಮನೆತನದ ಹರೀಶ್ ಕುಮಾರ್ ಐತಾಳ್ ಹಾಗೂ ಅರುಣ್ ಕುಮಾರ್ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿತ್ತು. ದೇವಳದಲ್ಲಿ ಈಗಾಗಲೇ ರಘುರಾಮ ಉಪಾಧ್ಯಾಯ ಅವರು ಅನುವಂಶಿಕ ಮೊಕ್ತೇಸರರಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ. ದೇವಳದ ಅನುವಂಶಿಕ ಮೊಕ್ತೇಸರರ ನಾಲ್ಕು ಹುದ್ದೆಯಲ್ಲಿ ಒಂದು ಸ್ಥಾನ ನೇಮಕ ಪ್ರಕ್ರೀಯೆ ಇಲಾಖಾ ಮಟ್ಟದಲ್ಲಿ ನಡೆಯುತ್ತಿದೆ ಎಂದು ಇಲಾಖಾ ಕಾರ್ಯದರ್ಶಿ ತಿಳಿಸಿದ್ದಾರೆ.
ಶ್ರೀ ಮಂಗಳಾದೇವಿ ದೇವಸ್ಥಾನವು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ಅಧಿನಿಯಮ 2011 ಕಲಂ 25 ಎ ರನ್ವಯ ಅನುವಂಶಿಕ ಮೊಕ್ತೇಸರರು ಆಡಳಿತ ನಿರ್ವಹಿಸುತ್ತಿರುವ ಅಧಿಸೂಚಿತ ದೇವಾಲಯವಾಗಿದೆ. ಈ ಹಿನ್ನೆಲೆಯಲ್ಲಿ ಅನುವಂಶಿಕವಲ್ಲದ ಮೊಕ್ತೇಸರರ ಹೊಸದಾಗಿ ನೇಮಕ ಮತ್ತು ಈ ಹಿಂದೆ ಇದ್ದ ಮೊಕ್ತೇಸರರ ಮುಂದುವರಿಸಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ ಎಂದು ಇಲಾಖಾ ಕಾರ್ಯದರ್ಶಿ ನೀಡಿರುವ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ನೂತನ ಸಮಿತಿಯು ಬುಧವಾರ ಅಧಿಕಾರ ಸ್ವೀಕರಿಸಿಕೊಂಡಿದ್ದು, ದೇವಳದ ಹಿರಿಯ ಅರ್ಚಕರಾದ ಶ್ರೀನಿವಾಸ ಐತಾಳ್, ಹರೀಶ್ ಐತಾಳ್, ರಂಜಿತ್ ಗುಜರನ್ ದೇವಳದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ