ಭಾರತವು ತಮ್ಮ ಒಂದೊಂದು ವಸ್ತುವಿನಲ್ಲಿ ತನ್ನ ಸಂಸ್ಕೃತಿ ಆಚಾರ ವಿಚಾರಗಳನ್ನು ಒಳಗೊಂಡಿದೆ. ಅದರಲ್ಲಿ ಒಂದಾದ ವೀಳ್ಯದೆಲೆಯು ಪಾಚಿ ಹಸಿರಿನ ತೆಳುವಾಗಿ ಇರುವ ಒಂದು ಎಲೆ. ಇದನ್ನು ಅಡಿಕೆ ಮತ್ತು ಸುಣ್ಣದ ಸಾಂಗತ್ಯದಿಂದ ತಾಂಬೂಲವೆಂದು ಕರೆಯುತ್ತಾರೆ. ಅಲ್ಲದೇ ಇದನ್ನು ತುಳು ಭಾಷೆಯಲ್ಲಿ ಬಚ್ಚಿರೆ ಎಂದು ಕರೆಯುತ್ತಾರೆ. ಈ ವೀಳ್ಯದೆಲೆಯನ್ನು ಹಲವಾರು ಜನ ಬೆಳೆಸಿ ತನ್ನ ಕಸುಬಾಗಿ ತಮ್ಮ ಜೀವನಾದರದ ಆದಾಯದಂತೆ ಉಪಯೋಗಿಸುತ್ತಿದ್ದಾರೆ. ವೀಳ್ಯದ ಬಳ್ಳಿ ಹಬ್ಬಲು ಆಸರೆ ನೀಡಿದರೆ ಸಾಕು ಈ ಬಳ್ಳಿ ಮೇಲೆ ಮೇಲಕ್ಕೆ ಹಬ್ಬುತ್ತ ಹೋಗುತ್ತದೆ.
ಹಳ್ಳಿಗಳ ಕಡೆಗಳಲ್ಲಿ ಎಲೆ ಅಡಿಕೆಯನ್ನು ಊಟದ ನಂತರ ವೀಳ್ಯದೆಲೆಗೆ ಅಡಿಕೆ ಮತ್ತು ಸುಣ್ಣವನ್ನು ಬೆರೆಸಿ ತಿನ್ನುತ್ತಾರೆ. ಆದರೆ ಇದರ ಜೊತೆಗೆ ತಂಬಾಕು ಸೇವನೆಯನ್ನು ಶುರು ಮಾಡಿದರೋ ಅಲ್ಲಿಂದ ಇದು ಒಳ್ಳೆಯದಕ್ಕಿಂತ ಕೆಟ್ಟದ್ದನ್ನೇ ಮಾಡಿದೆ. ಆದರೆ ಇದನ್ನು ಪ್ರತ್ಯೇಕವಾಗಿ ಪರಿಗಣಿಸಿದರೆ ಎಲೆ ಅಡಿಕೆ ಎಂಬುದು ಔಷಧಿ ಗುಣವುಳ್ಳದು ಎನ್ನಬಹುದು.ಅಲ್ಲದೆ ಇದನ್ನು ಆಯುರ್ವೇಗಳಲ್ಲಿ ಔಷಧೀಯ ತಯಾರಿಗೆ ಬಳಸುತ್ತಾರೆ ಹಾಗೂ ಈ ವೀಳ್ಯದೆಲೆ ಗರ್ಭಿಣಿಯರು ತಿಂದರೆ ಪೌಷ್ಟಿಕಾಂಶವು ದೊರಕುತ್ತದೆ ಹಾಗೆಯೇ ಬಾಣಂತಿಯರು ಎಲೆಯನ್ನು ಸೇವಿಸಿದರೆ ಎದೆ ಹಾಲಿನ ಉತ್ಪತ್ತಿಯನ್ನು ಹೆಚ್ಚಿಸಿಕೊಳ್ಳಬಹುದು.ಬಾಯಲ್ಲಿ ಇರುವಂತಹ ಬ್ಯಾಕ್ಟೀರಿಯಗಳನ್ನು ಕೊಲ್ಲುವ ಮೂಲಕ ಬಾಯಿಯ ದುರ್ವಾಸನೆಯಿಂದ ಮುಕ್ತಿಯನ್ನು ನೀಡುತ್ತದೆ .ಇಷ್ಟು ಮಾತ್ರವಲ್ಲದೆ ಇನ್ನೂ ಹಲವಾರು ಪ್ರಯೋಜನವಿದೆ. ಈ ಎಲೆಯು ಆಕ್ಸಿಡೆಂಟ್ ಮೈಕ್ರೋ ಬಿಯಲ್ ಗುಣಗಳನ್ನು ಹೊಂದಿರುವುದರಿಂದ ಇದರೊಂದಿಗೆ ಏನನ್ನು ಬೆರೆಸದೆ ತಿನ್ನುವುದು ಉತ್ತಮವಾಗಿದ್ದು ಆರೋಗ್ಯಕರವಾಗಿರುತ್ತದೆ.
ಇದನ್ನು ಹೆಚ್ಚಾಗಿ ಕರಾವಳಿ ಹಾಗೂ ಮಲೆನಾಡಿನ ಎಲ್ಲಾ ಜನರು ಶುಭ ಕಾರ್ಯಕ್ರಮದಲ್ಲಿ ಬಳಸುತ್ತಾರೆ ಇಲ್ಲಿ ಎಲೆ ಅಡಿಕೆ ಮುಖ್ಯವಾಗಿರುತ್ತದೆ.ಈ ಎಲೆ ಅಡಿಕೆಯನ್ನು ಹಿಂದೂ ಸಂಪ್ರದಾಯದಲ್ಲಿ ತಾಂಬುಲವಾಗಿ ಉಪಯೋಗಿಸುತ್ತಾರೆ.ಇದು ಮಾತ್ರವಲ್ಲದೆ ತಾಂಬೂಲದಲ್ಲಿ ಫಲಕೊಡುವಂತಹ ತೆಂಗಿನಕಾಯಿಯ ಜೊತೆಗೆ ವೀಳ್ಯದೆಲೆ ಅಡಿಕೆ ಇಟ್ಟು ಕೊಡುತ್ತಾರೆ .ಪ್ರತಿಯೊಂದು ದೇವರ ಪೂಜೆಯಂತಹ ಕಾರ್ಯಕ್ರಮದಲ್ಲಿ ಹಾಗೂ ಯಕ್ಷಗಾನ ಕಲಾವಿದರಿಗೆ ಬಣ್ಣಹಚ್ಚುವ ಮೊದಲು ವೀಳ್ಯದೆಲೆ ಮತ್ತು ಅಡಿಕೆ ಪೂಜೆಗಾಗಿ ಬಳಸುತ್ತಾರೆ. ವೀಳ್ಯದೆಲೆ ಎನ್ನುವಂತದ್ದು ಎಲ್ಲಾ ಕಾರ್ಯಕ್ರಮಕ್ಕೂ ಮುಖ್ಯವಾಗಿರುವ ಕಾರಣ ವೀಳ್ಯದೆಲೆ ಇಲ್ಲದಿದ್ದರೆ ಶೂನ್ಯ ಎನ್ನಬಹುದು.
-ಪೂರ್ಣಿಮಾ ಕೆ ಮುಂಡುಗಾರು.
ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ ಪುತ್ತೂರು
ಪತ್ರಿಕೋದ್ಯಮ ವಿದ್ಯಾರ್ಥಿನಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ