ಅಳಪೆ ವಾರ್ಡ್: ಪಡೀಲ್-ಬಜಾಲ್ ರಸ್ತೆ ಅಗಲೀಕರಣಕ್ಕೆ ಶಾಸಕ ಕಾಮತ್ ಭೂಮಿಪೂಜೆ

Chandrashekhara Kulamarva
0


ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 50ನೇ ಅಳಪೆ ದಕ್ಷಿಣ ವಾರ್ಡಿನಲ್ಲಿ 2 ಕೋಟಿ ರೂ ವಿಶೇಷ ಅನುದಾನದಲ್ಲಿ ಪಡೀಲ್ ನಿಂದ ಬಜಾಲ್ ವರೆಗಿನ ರಸ್ತೆ ಅಗಲೀಕರಣ ಹಾಗೂ ಪೂರಕ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ನೆರವೇರಿಸಿದರು.


ನಂತರ ಮಾತನಾಡಿದ ಶಾಸಕರು, ಸ್ಥಳೀಯ ಪಾಲಿಕೆ ಸದಸ್ಯೆ ಶ್ರೀಮತಿ ಶೋಭಾ ಪೂಜಾರಿಯವರ ಮನವಿಯ ಮೇರೆಗೆ ಸಾರ್ವಜನಿಕರಿಗೆ ಅತೀ ಅಗತ್ಯವಿರುವ ಈ ಯೋಜನೆಯನ್ನು ಪಾಲಿಕೆಯ ಪ್ರೀಮಿಯರ್ ಎಫ್.ಐ.ಆರ್ ನಿಂದ 2 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು ಪೆರ್ಜಿಲ ಹೋಗುವ ರಸ್ತೆಯಿಂದ ಬಜಾಲ್ ಚರ್ಚ್ ವರೆಗೆ ಅಭಿವೃದ್ಧಿಯಾಗಲಿರುವ ಈ ಕಾಮಗಾರಿ ಶೀಘ್ರದಲ್ಲಿ ಮುಗಿದು ಸಾರ್ವಜನಿಕರ ಬಳಕೆಗೆ ಲಭಿಸಲೆಂದು ಆಶಿಸುತ್ತೇನೆ ಎಂದರು.


ಈ ಸಂದರ್ಭದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮನಪಾ ಸದಸ್ಯರಾದ ಗಣೇಶ್ ಕುಲಾಲ್, ಬೂತ್ ಅಧ್ಯಕ್ಷರಾದ ಹರೀಶ್, ಅರುಣ್, ಪೆರ್ಜಿಲ ದೈವಸ್ಥಾನದ ಮುಖ್ಯಸ್ಥರು ಯತೀಶ್ ಪೆರ್ಜಿಲ, ರವೀಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಭರತ್ ಶೆಟ್ಟಿ, ಬೂತ್ ನ ಪದಾಧಿಕಾರಿಗಳು, ಮಹಿಳಾ ಸಮಿತಿಯ ಸದಸ್ಯರು ಮುಂತಾದ ಪ್ರಮುಖರು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


إرسال تعليق

0 تعليقات
إرسال تعليق (0)
To Top