ಸಾಹಿತ್ಯ ನಿಂತ ನೀರಾಗಬಾರದು: ಸತ್ಯವತಿ ಭಟ್

Upayuktha
0



ಮಂಗಳೂರು: ಸಾಹಿತ್ಯವೆಂಬ ಸತ್ಯ ನಿತ್ಯ ನಿರಂತರ ಓದುಗರನ್ನು ತಟ್ಟುತ್ತಲೇ ಇರಬೇಕು, ಅದಕ್ಕಾಗಿ ಸಾಹಿತಿಗಳು ಹೊಸ ಹೊಸ ದೃಷ್ಟಿ ಮತ್ತು ಸೃಷ್ಟಿಯೊಂದಿಗೆ ತಮ್ಮ ಕೊಡುಗೆಗಳನ್ನು ನೀಡುತ್ತಲೇ ಇರಬೇಕು ಎಂದು ಹಿರಿಯ ಕವಯಿತ್ರಿ ಬಿ. ಸತ್ಯವತಿ ಎಸ್. ಭಟ್ ಕೊಳಚಪ್ಪು ಹೇಳಿದರು. 




ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಏರ್ಪಡಿಸಿದ ಮಹಿಳಾ ದಿನಾಚರಣೆ ಮತ್ತು ಹಿರಿಯ ಸಾಹಿತಿ ಮನೆ ಭೇಟಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

 


ಕನ್ನಡ ಸಾಹಿತ್ಯ ಪರಿಷತ್ತು  ಈ ರೀತಿ ಮನೆಗೇ ಬಂದು ಆತ್ಮೀಯವಾಗಿ ಮಾತನಾಡಿಸಿದ್ದು ನನ್ನ ಜೀವನದ ಅತ್ಯಂತ ಮಧುರ ಕ್ಷಣ , ಇದರಿಂದ ನನಗಷ್ಟೇ ಅಲ್ಲ , ಸಾಹಿತ್ಯ ಕ್ಷೇತ್ರದ ಎಲ್ಲರಿಗೂ ಸ್ನೇಹ ಸದ್ಭಾವನೆಯೊಂದಿಗೆ ಸ್ಫೂರ್ತಿ ಸಿಗುತ್ತದೆ ಎಂದು ಅವರು ನುಡಿದರು.





 ಕ ಸಾ ಪ ಕೇಂದ್ರ ಪರಿಷತ್ತಿನ ಮಾರ್ಗದರ್ಶಿ ಸಮಿತಿ ಸದಸ್ಯ ಡಾ. ಮುರಲೀಮೋಹನ್ ಚೂಂತಾರು , ಅಭಿನಂದನೆಯ ಮಾತುಗಳನ್ನಾಡಿದರು. ಘಟಕದ ಅಧ್ಯಕ್ಷ ಡಾ || ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆ ವಹಿಸಿ , ಸನ್ಮಾನಿಸಿದರು. ಮೂಡುಶೆಡ್ಡೆ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಭಾಸ್ಕರ ಹೊಸಮನೆ,  ವೇದಮಾಯು ಆಸ್ಪತ್ರೆಯ ಡಾ. ಕೇಶವರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.  ಹೇಮಲತಾ ರೇವಣ್ಕರ್ , ಡಾ. ಸೂರಜ್ , ಡಾ. ಸೌಜನ್ಯಾ , ವಿಘ್ನೇಶ್ ಎಮ್ , ಸತ್ಯವತಿ ಭಟ್ ಕುಟುಂಬಸ್ಥರು ಮತ್ತು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಘಟಕದ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ವಂದಿಸಿದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top