ಆಯೋಧ್ಯೆಯ ಬಾಲರಾಮನಿಗೆ ನಿತ್ಯ ಕರ್ನಾಟಕದ ಪುಷ್ಪಾಲಂಕಾರ; ಅರ್ಚಕರೂ ಫುಲ್ ಖುಷ್ !!

Upayuktha
0


ಅಯೋಧ್ಯೆ: ಬಹಳ ಉಲ್ಲೇಖನೀಯ ವಿಷಯವೆಂದರೆ ಅಯೋಧ್ಯೆಯಲ್ಲಿ ಒಳ್ಳೆಯ ಹೂಗಳು ಸಿಗೋದು ವಿರಳ. ಶ್ರೀರಾಮನ ಪ್ರತಿಷ್ಠಾಪನೆಯ ನಂತರ ಈ ದಿನದ ವರೆಗೂ ಬಾಲರಾಮನ ದಿವ್ಯಾಲಂಕಾರಕ್ಕೆ ಬಹುತೇಕ ಕರ್ನಾಟಕ ಉಡುಪಿಯ ಶಂಕರಪುರದ ಮಲ್ಲಿಗೆ, ಸಿಂಗಾರ, ತುಳಸಿಮಾಲೆಗಳು ಸೇರಿದಂತೆ ಸೇವಂತಿಗೆ, ಕಾಕಡ, ಜೀನಿಯಾ ಗುಲಾಬಿ, ಸುಗಂಧ ಪುಷ್ಪ, ರೆಂಜ ಮೊದಲಾದ ವಿವಿಧ ಜಾತಿಯ ಬೃಹತ್ ಗಾತ್ರದ ಆಕರ್ಷಕ ಹೂಮಾಲೆಗಳು ಬೆಂಗಳೂರು ಮೈಸೂರು ಮೊದಲಾದೆಡೆಗಳಿಂದ ಆಗಮಿಸುವ ಭಕ್ತರ ಮೂಲಕವೇ ಶ್ರೀ ಪೇಜಾವರ ಶ್ರೀಗಳು ತರಿಸಿ ಅರ್ಚಕರ ಮೂಲಕ ಸುಂದರ ಅಲಂಕಾರವನ್ನು ಮಾಡಿಸುತ್ತಿದ್ದಾರೆ.


ಈ ಆಕರ್ಷಕ ಹೂವಿನ ಮಾಲೆಗಳನ್ನು ಕಂಡು ಮಂದಿರದ ಅರ್ಚಕರು ಭದ್ರತಾ ಅಧಿಕಾರಿಗಳು ಸಿಬಂದಿಗಳೂ ಆಶ್ಚರ್ಯ ಮತ್ತು ಸಂತಸವನ್ನು ವ್ಯಕ್ತಪಡಿಸುತ್ತಿದ್ದು ಕರ್ನಾಟಕದ ಭಕ್ತರ ಈ ಪುಷ್ಪ ಮಾಲೆಗಳ ಅರ್ಪಣೆಯಿಂದ ಮಾಡಲಾಗುವ ಹಾಗೂ ಇತರೆ  ಸುರ್ವಣಾಭರಣಗಳ ಭರ್ಜರಿ  ಅಲಂಕಾರದಿಂದಲೇ ಶ್ರೀ ರಾಮ ದೇವರು ಅತ್ಯಂತ ಸುಂದರವಾಗಿ ಕಂಗೊಳಿಸುತ್ತಿದ್ಧಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಂತೂ ಅಯೋಧ್ಯೆಯ ನಿತ್ಯೋತ್ಸವದಲ್ಲಿ ಕರ್ನಾಟಕದ ಪಾತ್ರ ಎಲ್ಲೆಲ್ಲೂ ಕಾಣಿಸುತ್ತಿದ್ದು ವ್ಯಾಪಕ ಪ್ರಶಂಸೆಗೆ ಪಾತ್ರವಾಗುತ್ತಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top