ಕಣ್ಣಿದ್ದು, ಕುರುಡಳಾದ ಕಥೆ

Upayuktha
0



 ನನ್ನ ಹೆಸರು ನಯನ...

ರಾಮುಹಳ್ಳಿ ಎಂಬ ಊರಿನಲ್ಲಿ ತಂದೆ ತಾಯಿ ಹಾಗೂ ಅವರಿಬ್ಬರ ಮಕ್ಕಳು ಸೇರಿದ ಒಂದು ಬಡ ಕುಟುಂಬ ವಾಸವಾಗಿತ್ತು. ಮನೆಯಲ್ಲಿ ಬಡತನವಿದ್ದು, ಹೃದಯ ಶ್ರೀಮಂತಿಕೆಯಿಂದಿದ್ದರೆ ಅಂತಹ ಮನೆಯಲ್ಲಿ ಎಂದೂ ವೈಮನಸ್ಸು ಬರಲಾರದು. ಆದರೆ ನಯನಾಳ ಕುಟುಂಬದಲ್ಲಿ ಒಂದೆಡೆ ಅಪ್ಪ ಕುಡುಕನಾದರೆ, ಅಮ್ಮ ಜಗಳಗಂಟಿ. ದಿನೇ ದಿನೇ ತನ್ನ ಗಂಡನನ್ನು ಹೊಡೆದು ಬಡಿದು ಮಾಡುತ್ತಿದ್ದಳು. ಸುಖ ಸಂಸಾರವಾಗಬೇಕಿದ್ದ ಇವರ ಕುಟುಂಬ "ಮನೆಯೊಂದು ಮೂರು ಬಾಗಿಲು" ಎಂಬಂತೆ ಬಿರುಕು ಬಿಟ್ಟಿತು. ಪ್ರತಿನಿತ್ಯ ಮನೆಯವರನ್ನು ನೋಡುತ್ತಾ ಬೆಳೆದ ನಯನಾಳ ಅಣ್ಣ ಬೇಸತ್ತು ಓದುವುದನ್ನು ನಿಲ್ಲಿಸಿ ಪುಂಡಪೋಕರಿಗಳೊಟ್ಟಿಗೆ ಸೇರಿರುತ್ತಾನೆ. ಮನೆಯ ಪರಿಸ್ಥಿತಿಯನ್ನು ನೋಡಿ ನಯನಾಳು ಕೂಡ ಬೇಸತ್ತು ಹೋಗಿದ್ದಳು.


ನಯನ, ಹೆಸರಿಗೆ ತಕ್ಕ ಅಂದ – ಚಂದ. ಆದರೆ ಒಂದು ದಿನವೂ ಕಾಣಲಿಲ್ಲ ನೆಮ್ಮದಿಯ ಸಂಗಡರ ಬಂಧ. ತನ್ನ ಶಾಲೆಯ ವಾತಾವರಣವಾದರೂ ಉತ್ತಮವೆಂದುಕೊಂಡಿದ್ದ ನಯನಾಳ ಯೋಚನೆಗೆ ಒಮ್ಮೆಲೆ ಬೂದಿ ಎರಚಿದಂತಾಯಿತು. ಪ್ರತಿನಿತ್ಯ ಯಾವುದಾದರೂ ವಿಷಯದಲ್ಲಿ ನಯನಾಳನ್ನು ಟೀಕೆ ಮಾಡಿ ನಗುತಿದ್ದರು.  ಆಕೆಯನ್ನು ಹೀಯಾಳಿಸಿ ಅವಮಾನಿಸುತ್ತಿದ್ದರು. ಕಾರ್ಯಕ್ರಮಗಳಲ್ಲಿ ಭಾಗವಹಿಸಲೆಂದು ಮುಂದಾದರೆ ಹಲ್ಲುಕಿರಿಯವರು. "ಆಡಿ ನಗುವ ಜನರ ಎದುರು ಜಾರಿ ಬಿದ್ದಂತಿತು"  ನಯನಾಳ ಪರಿಸ್ಥಿತಿ. ಒಂದೆಡೆ ಮನೆಯಲ್ಲಿ ನೆಮ್ಮದಿ ಇಲ್ಲವಾದರೆ, ಇನ್ನೊಂದೆಡೆ ಶಾಲೆಯಲ್ಲಿ ಉಸಿರಾಡಲು ಕಷ್ಟವೆಂಬ ಪರಿಸ್ಥಿತಿ.  ಹೇಳಿಕೊಳ್ಳಲು ಆಗದ, ತನ್ನೊಳಗೆ ಇಟ್ಟುಕೊಳ್ಳಲು ಆಗದ ಪರಿಸ್ಥಿತಿ ನಯನಾಳದ್ದು.  ಒಟ್ಟಾರೆ ತನ್ನ ಎಳೆವಯಸ್ಸಿನಲ್ಲಿಯೇ  ಜೀವನದ ಮೇಲೆ ವ್ಯಸನ ಬಂದಂತಿತ್ತು.


ಒಂದು ದಿನ ನಯನ ತನ್ನ ಮನೆ ಹತ್ತಿರದ ಸ್ನೇಹಿತರೊಂದಿಗೆ ಆಟವಾಡುವಾಗ ಬೇಲಿಯಲ್ಲಿದ್ದ ಕಳ್ಳಿ ಹಾಲು ಕಣ್ಣಿಗೆ ಹಾರಿತು. ತನ್ನ ಜೀವವೇ ಹೋದಂತಾಯಿತು. ನಂತರ ಹತ್ತಿರದ ವೈದ್ಯರಲ್ಲಿ ಚಿಕಿತ್ಸೆ ಪಡೆದಳು. ಆದರೆ ನಯನಾಳ ತೀರ್ಮಾನವೇ ಬೇರೆ ಆಗಿತ್ತು.  ಒಂದೆಡೆ ಮನೆಯ ಹದಗೆಟ್ಟ ಪರಿಸ್ಥಿತಿಯಾದರೆ, ಇನ್ನೊಂದೆಡೆ ಹೀಯಾಳಿಸಿ ನಗುವ ಜನರಿಂದ ನೊಂದ ನಯನ "ಕಣ್ಣಿದ್ದು ಕುರುಡಂತೆ" ನಟಿಸಲು ನಿರ್ಧರಿಸಿದಳು. ಕಾಣುವ ಕಣ್ಣನ್ನು ಆಕೆ ತನ್ನ ಕಣ್ಣು ದೃಷ್ಟಿ ಕಳೆದುಕೊಂಡಿದೆ ಎಂದಳು. ಆಗ ಆಕೆಗೆ ಕೇವಲ 12 ವರ್ಷ. ಆ ಪುಟ್ಟ ವಯಸ್ಸಿನಲ್ಲಿಯೇ ಸುಳ್ಳಿನ ಸರಮಾಲೆ ಕಟ್ಟುತ್ತಾ ಜನರ ಬಾಯಿಗೆ ಹೆದರಿದಳು. ಅವಳು ಅಂದಿನಿಂದ ಪ್ರತಿ ನಿತ್ಯ ದಿನದ ಆಗು ಹೋಗುಗಳನ್ನು ಡೈರಿಯಲ್ಲಿ ಬರೆಯಲು ಪ್ರಾರಂಭಿಸಿದಳು. ಹಾಗೂ ಆಕೆಗೆ ಕಣ್ಣು ಕಾಣುವುದಿಲ್ಲವೆಂಬುದನ್ನು ಬರೆದಳು. ಒಂದು ದಿನ ನಯನಾಳ ಅಮ್ಮ ಇನ್ನೊಬ್ಬ ಗಂಡಸಿನೊಟ್ಟಿಗಿದ್ದ ದೃಶ್ಯ ಈಕೆಯ ಕಣ್ಣಿಗೆ ಬಿತ್ತು.  ಅಮ್ಮನನ್ನು ಪ್ರಶ್ನಿಸಿದರೆ ಅಪ್ಪನನ್ನು ಹೊಡೆಯುತ್ತಿದ್ದಳು. ಹೀಗೆ ದಿನದಿಂದ ದಿನಕ್ಕೆ ಮನೆಯ ಪರಿಸ್ಥಿತಿಯು ಹದಗೆಟ್ಟಿತು. ಹಾಗೆಯೇ ಈಕೆ ಕಣ್ಣಿನ ದೃಷ್ಟಿ ಇಲ್ಲ ಎಂದು ವಿದ್ಯಾಭ್ಯಾಸ ನಿಲ್ಲಿಸಿದಳು.


ನಂತರ ನಯನಾಳಿಗೆ  ಮದುವೆಯಾಯಿತು. ತನ್ನ ಕಷ್ಟ ನೋವುಗಳೆಲ್ಲ ತವರು ಮನೆಯಲ್ಲಿಯೇ ಉಳಿದಂತಾಯಿತು. ನಯನಾಳಿಗೆ ಕಣ್ಣು ಕಾಣುವುದಿಲ್ಲ ವೆಂದು ತಿಳಿದರೂ ಕೂಡ ತನ್ನ ಗಂಡ  ಸುಖವಾಗಿ ನೋಡಿಕೊಳ್ಳುತ್ತಿದ್ದನು. ಕೊನೆಗೆ ಎರಡು ಮಕ್ಕಳೊಂದಿಗೆ ಸುಖ ಸಂಸಾರದ ಜೀವನ ಸಾಗಿಸುತ್ತಿದ್ದಳು. ಆದರೂ ಕೂಡ ತನಗೆ ಕಣ್ಣು ಕಾಣುತ್ತದೆ ಎಂಬ ಸತ್ಯವನ್ನು ಎಲ್ಲೂ ಹೇಳಿಕೊಳ್ಳುವುದಿಲ್ಲ. ಎಲ್ಲಿ ಹೇಳಿದರೆ ತನ್ನ ಗಂಡನಿಗೆ ನನ್ನ ಮೇಲೆ ಕೆಟ್ಟ ಅಭಿಪ್ರಾಯ ಬರುವುದೆಂಬ ಭಯ ಆತಂಕ ತನ್ನಲ್ಲಿತ್ತು. ಹಾಗೆಯೇ ತನ್ನ 70ರ ವಯಸ್ಸಿನಲ್ಲಿ ನಯನ ಇಹಲೋಕ ತ್ಯಜಿಸಿದಳು.


ಅವಳ ಮರಣದ ನಂತರ ಆಕೆ ಬರೆದಿದ್ದ ಡೈರಿ ಮನೆಯವರಿಗೆ ಸಿಗುತ್ತದೆ. ಆಗ ಹಾಸಿಗೆ ಕಣ್ಣು ಕಾಣುತ್ತಿದ್ದರೂ ಕೂಡ  ಸಾಯುವವರೆಗೂ ಆಕೆ ಕುರುಡಿಯಂತಿದ್ದ ಕಾರಣ ತಿಳಿಯಿತು.  "ಬೆಳೆಯುವ ಸಿರಿ ಮೊಳಕೆಯಲ್ಲಿ"  ಎಂಬಂತೆ ತನ್ನ ಬಾಲ್ಯದಲ್ಲಿನ ವಾತಾವರಣ ನಯನಾಳಿನ ಜೀವನದ ಮೇಲೆ ಭಯ ಮೂಡಿಸುತ್ತದೆ. ಹಾಗೆಯೇ ಅವಳು ತನಗೆ ಕಣ್ಣು ಕಾಣಿಸುತ್ತದೆ ಎಂಬ ಸತ್ಯವನ್ನು ಹೇಳಲು ಎಂದು ಮುಂದಾಗಲಿಲ್ಲ. ಸ್ನೇಹಿತರೇ, ನಾ ಹೇಳುವುದಿಷ್ಟೇ "ಯಾರನ್ನು ಕೀಳಾಗಿ ನೋಡಬೇಡಿ, ಯಾರನ್ನು ಅವಮಾನಸಬೇಡಿ,  ನಿಮ್ಮ ಅಲ್ಪಕಾಲೀಕ ಸಂತೋಷಕ್ಕಾಗಿ ಇತರರ ಪೂರ್ಣವಧಿ ಜೀವನವನ್ನು ಹಾಳು ಮಾಡಬೇಡಿ". " ಮನೆಗೆ ಮೊದಲ ಪಾಠಶಾಲೆ"  ಎನ್ನುತ್ತಾರೆ. ಆದರೆ ನಯನಾಳ ಬಾಳಿಗೆ ತನ್ನ ಮನೆಯ ಜೈಲು ಎಂಬಂತೆ ಭಾಸವಾಗುತ್ತದೆ. ತಂದೆ ತಾಯಿಯರು ಮಕ್ಕಳಿಗೆ ಮಾದರಿಯಾಗಬೇಕೇ, ಹೊರತು ದೂಷಿಸುವಂತಾಗಬಾರದು. ಜೀವನದಲ್ಲಿ ಏನೇ ಕಷ್ಟ ಬಂದರೂ ಎದುರಿಸುವ ಧೈರ್ಯ ನಮ್ಮಲ್ಲಿದ್ದರೆ   'ಕಷ್ಟವೆಂಬುದು ತೃಣವೆಂಬಂತೆ' ಕೇವಲ ಆತ್ಮಹತ್ಯೆ ಮಾತ್ರ ನಮ್ಮ ದಾರಿಯಲ್ಲ. ಇಷ್ಟೆಲ್ಲಾ ಕಷ್ಟ ಅನುಭವಿಸಿದರು ನಯನಾಳು ಎಂದು ಆತ್ಮಹತ್ಯೆಗೆ ಮುಂದಾಗುವುದಿಲ್ಲ. ಇಂದಿನ ಯುವ ಪೀಳಿಗೆಗೆ ನಯನಾಳ ಜೀವನ ಚರಿತ್ರೆ ಮಾದರಿಯಿದ್ದಂತೆ. ಮುಂದೆ ನಯನಾಳ ಜೀವನ ಚರಿತ್ರೆ ಕಾದಂಬರಿಯಾಗಿ ಮಾರ್ಪಾಡಾಗುತ್ತದೆ.



-ಕೀರ್ತನ ಒಕ್ಕಲಿಗ ಬೆಂಬಳೂರು

ವಿವೇಕಾನಂದ ಕಾಲೇಜು ಪುತ್ತೂರು



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top