ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ: 9ನೇ ಸ್ಥಾಪನಾ ದಿನಾಚರಣೆ

Upayuktha
0


ಬ್ರಹ್ಮಾವರ: ಕನ್ನಡ ಜಾನಪದ ಪರಿಷತ್, ಬೆಂಗಳೂರು ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಹಾಗೂ ಬಿ. ಡಿ. ಶೆಟ್ಟಿ ಕಾಲೇಜ್ ಆಫ್ ಬಿಸ್ನೆಸ್ ಮ್ಯಾನೇಜ್ ಮೆಂಟ್ ಮಾಬುಕಳ ಬ್ರಹ್ಮಾವರ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ 9ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಇಂದು (ಮಾ.6 ಬುಧವಾರ) ಜರುಗಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್, ಮಾಬುಕಳ ಮುಖ್ಯಸ್ಥರಾದ ತಾರಾನಾಥ್ ಶೆಟ್ಟಿ ವಹಿಸಿದ್ದರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ ಪ್ರಾಸ್ತಾವಿಕ ಮಾತಾಡಿ, ನಮ್ಮ ಕರಾವಳಿ ಜಿಲ್ಲೆಗಳ ಜಾನಪದ ಕಲೆ ಸಂಸ್ಕೃತಿಯ ವಿಶಿಷ್ಟವಾದದ್ದು ಇಲ್ಲಿಯ ಯಕ್ಷಗಾನ, ಜಾನಪದ ಕುಣಿತಗಳು, ಜಾನಪದ ಆಟಗಳು, ಇವೆಲ್ಲವನ್ನೂ ನಮ್ಮ ಹಿರಿಯರು ಕಟ್ಟಿ ಕೊಟ್ಟಿದ್ದಾರೆ. ಇಂದು ಇಂತಹ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.


ಈ ಸಂದರ್ಭದಲ್ಲಿ ಹೋಳಿ ಕುಣಿತದ ಹಿರಿಯ ಜಾನಪದ ಕಲಾವಿದರಾದ ಮರಿಯ ನಾಯ್ಕ್ ಪೇತ್ರಿ ಅವರನ್ನು ಹಾಗೂ ಉಡುಪಿ ಜಿಲ್ಲೆಯ ಬೈಂದೂರು  ತಾಲೂಕು ಶಿರೂರಿಂದ ಬ್ರಹ್ಮಾವರ ತಾಲೂಕಿನ ವರೆಗೆ ಕಂಡು ಬರುವ, ನಶಿಸಿ ಹೋಗುತ್ತಿರುವ ಈಹೌಂದರಾಯನ ವಾಲಗ ಕುಣಿತದ ಹಿರಿಯ ಕಲಾವಿದರಾದ ಗುಂಡು ಪೂಜಾರಿ ಸಾಲಿಗ್ರಾಮ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಂಗಾರಕಟ್ಟೆ ಚೇತನ ಪ್ರೌಡಶಾಲೆಯ ಕು. ಅಮೂಲ್ಯ, ಕು. ಪಾರ್ವತಿ ಅವರನ್ನು ನಗದು ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.


ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ ಸ್ಮಿತಾ ಮೌಲ್, ಪ್ರಾಂಶುಪಾಲರು ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಮಾಬುಕಳ ಹಾಗೂ ಚೇತನ ಪ್ರೌಡ ಶಾಲೆ ಮುಖ್ಯೋಪಾಧ್ಯಾಯರಾದ ಕಲ್ಪನಾ, ಪ್ರ. ಕಾರ್ಯದರ್ಶಿ ಪ್ರಕಾಶ್ ಸುವರ್ಣ ಕಟಪಾಡಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು, ಕರ್ವಾಲು ಉಪಸ್ಥಿತರಿದ್ದರು. ಪರಿಷತ್ ಖಜಾಂಚಿ ಹಾಗೂ ಶಿಕ್ಷಕರು ಆದ ಚಂದ್ರ ಹಂಗಾರ ಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದಭ೯ದಲ್ಲಿ ಕಲಾವಿದರಾದ ಮಾಯಾ ಕಾಮತ್ ಮತ್ತು ಕುಸುಮಾ ಕಾಮತ್ ಉಪಸ್ಥಿತರಿದ್ದರು. ಕಾಲೇಜು ಮತ್ತು ಪ್ರೌಡ ಶಾಲೆಯ ಶಿಕ್ಷಕ ವೃಂದದವರು ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top