ಕದ್ರಿ: ಕಳೆದ ಐದು ದಶಕ ಗಳಿಂದ ತೆಂಕು ತಿಟ್ಟಿನ ಡೇರೆ ಹಾಗೂ ಬಯಲಾಟ ಮೇಳ ಗಳಲ್ಲಿ ಕಲಾ ಸೇವೆ ಗೈದಿರುವ, ಕಟೀಲು ಮೇಳದಲ್ಲಿ ಎರಡು ದಶಕ ಗಳಿಂದ ವೇಷಧಾರಿ ಯಾಗಿ ಹಾಗೂ ಪ್ರಬಂಧಕ ರಾಗಿ ದುಡಿಯುತ್ತಿರುವ ಖ್ಯಾತ ಯಕ್ಷಗಾನ ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ ಅವರಿಗೆ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ ನೀಡಲಾಯಿತು.
ಕದ್ರಿ ಕಂಬಳ ಗುತ್ತು ವಾಸವಿ ಬಾಲಕೃಷ್ಣ ಶೆಟ್ಟಿ ಮತ್ತು ಮಕ್ಕಳು ಸಂಯೋಜನೆ ಮಾಡಿದ್ದ ಶ್ರೀ ಕಟೀಲು ಮೇಳದ ಸೇವೆ ಆಟ ಸಂಧರ್ಭದಲ್ಲಿ ಕದ್ರಿ ಕಂಬಳ ಸಂಯೋಜಕರಾಗಿ, ಹವ್ಯಾಸಿ ತಾಳಮದ್ದಳೆ ಕಲಾವಿದರಾಗಿ, ಸಂಘ ಪರಿವಾರದ ಹಿರಿಯ ನಾಯಕ ನಾಗಿದ್ದ ಬಾಲಕೃಷ್ಣ ಶೆಟ್ಟಿ ಅವರ ನೆನಪಿನಲ್ಲಿ ಪ್ರಶಸ್ತಿ ನೀಡಲಾಯಿತು.
ಕಟೀಲು ಲಕ್ಷ್ಮೀ ನಾರಾಯಣ ಆಸ್ರಣ್ಣ ರು ಕದ್ರಿ ಕಂಬಳ ಗುತ್ತು ಪರಿವಾರದ ಕಲಾಪ್ರೀತಿ ಯನ್ನು ಶ್ಲಾಘಿಸಿದರು. ಹಿರಿಯ ವಿದ್ವಾಂಸ ಡಾ. ಎಮ್ ಪ್ರಭಾಕರ ಜೋಶಿ, ಕಲ್ಕೂರ ಪ್ರತಿಷ್ಟಾನದ ಪ್ರದೀಪ ಕುಮಾರ ಕಲ್ಕೂರ, ಡಾ. ಬಿ.ನಿಶಾಕಾಂತ್ ಶೆಟ್ಟಿ ಬೆಂಗಳೂರು, ಸುರೇಶ ಹೆಗ್ಡೆ ಅತಿಥಿ ಗಳಾಗಿ ಪಾಲ್ಗೊಂಡಿದ್ದರು.ಶಿವರಾಮ್ ಶೆಟ್ಟಿ ಇಂದ್ರಾಳಿ, ಸಿದ್ಧಾರ್ಥ್ ಶೆಟ್ಟಿ, ಅರ್ಜುನ್ ಹೆಗ್ಡೆ, ಸಾಕೇತ್ ಶೆಟ್ಟಿ ಉಪಸ್ಥಿತರಿದ್ದರು.
ಕದ್ರಿ ನವನೀತ ಶೆಟ್ಟಿ ಅವರು ನಿರೂಪಿಸಿ ಅಭಿನಂದಿಸಿದರು. ಕಟೀಲು ಮೇಳದವರಿಂದ "ವೀರ ನರೇಂದ್ರ ವಿಜಯ" ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ