ತೆಕ್ಕಟ್ಟೆ: ಜನ ಔಷಧಿ ಪರಿಯೋಜನಾ ಬಗ್ಗೆ ಜಾಗೃತಿ

Upayuktha
0



ಕುಂದಾಪುರ:  ಭಾರತೀಯ ಜನ ಔಷಧಿ ಕೇಂದ್ರ ತೆಕ್ಕಟ್ಟೆ, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ , ಗ್ರಾ.ಪಂ ಪಂಚಾಯತ್ ತೆಕ್ಕಟ್ಟೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕುಂಭಾಶಿ, ವಾಣಿಜ್ಯ ವಿಭಾಗ ಮಾಹೆ ವಿಶ್ವವಿದ್ಯಾನಿಲಯ ಮಣಿಪಾಲ ಮತ್ತು ಕೆಎಂಸಿ ಆಸ್ಪತ್ರೆ ಮಣಿಪಾಲ ಇದರ ಜಂಟಿ ಆಶ್ರಯದಲ್ಲಿ ಜನ ಔಷಧಿ ಪರಿಯೋಜನಾ  ಬಗ್ಗೆ ಜಾಗೃತಿ ಮತ್ತು ಸ್ತನ ಹಾಗೂ ಗರ್ಭಗಂಠದ ಕ್ಯಾನ್ಸರ್ ಸ್ಕ್ರೀನಿಂಗ್ ತಪಾಸಣಾ ಶಿಬಿರ ತೆಕ್ಕಟ್ಟೆ ಜನ ಔಷಧಿ ಕೇಂದ್ರದ ಆವರಣದಲ್ಲಿ ಇತ್ತೀಚೆಗೆ ನಡೆಯಿತು.



ಕಾರ್ಯಕ್ರಮವನ್ನು ಗ್ರಾ.ಪಂ ಅಧ್ಯಕ್ಷೆ ಶೋಭನಾ  ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಮಾಹೆ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ| ಸಂದೀಪ್ ಶೆಣ್ಯ, ಡಾ. ಸವಿತಾ ಬಾಸ್ರಿ,ಪಿಡಿಒ ಸುನಿಲ್, ಜಯಂಟ್ಸ್ ಗ್ರೂಪ್ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ, ಮಿಲ್ಟನ್‌ ಒಲಿವರ್, ಶ್ರೀನಾಥ್ ಕೋಟ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿತಿನ್  ಶೆಟ್ಟಿ, ಡಾ. ಆದಿತ್ಯ ಶೆಟ್ಟಿ, ಡಾ || ಅಖಿಲಾ ಮುಂತಾದವರಿದ್ದರು. ಸುಮಾರು 100 ಜನ ಶಿಬಿರದ ಪ್ರಯೋಜನ ಪಡೆದುಕೊಂಡರು. ಎಲ್ಲರಿಗೂ ಹೆಲ್ತ್ ಕಿಟ್ ವಿತರಿಸಲಾಯಿತು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top