ಜೇಸಿಐ ಉಡುಪಿ ಸಿಟಿ : ಪರೀಕ್ಷೆ ಎದುರಿಸುವಿಕೆ ತರಬೇತಿ ಕಾಯ೯ಕ್ರಮ

Upayuktha
0

 



ಉಡುಪಿ : ಪರೀಕ್ಷೆ ಎಂಬುದು ನಮ್ಮ ಬದುಕಿನ ಅವಿಭಾಜ್ಯ ಅಂಗ ಈ ವಿದ್ಯಾರ್ಥಿ ಜೀವನದ ಪರೀಕ್ಷೆ ಎಂಬ ಹಬ್ಬವನ್ನು ನಾವೆಲ್ಲರೂ ಆನಂದಿಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬೇಕು ಎಂದು ವ್ಯಕ್ತಿತ್ವ ವಿಕಸನ ತರಬೇತಿದಾರ  ರಾಘವೇಂದ್ರ ಪ್ರಭು ಕವಾ೯ಲು ಹೇಳಿದರು.



 ಅವರು ಮಾ. 8ರಂದು ಮಹಿಳಾ ದಿನಾಚರಣೆಯ ಅಂಗವಾಗಿ ಉಡುಪಿ ಸಿ ಎಸ್ ಐ ಬಾಯ್ಸ್ ಬೋರ್ಡಿಂಗ್ ಹೋಮ್ ನಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರೀಕ್ಷಾ ಸಮಯದಲ್ಲಿ ವೇಳಾಪಟ್ಟಿಯನ್ನು ತಯಾರಿಸಿ ಅದರಂತೆ ಪರೀಕ್ಷೆ ತಯಾರಿ ನಡೆಸಿದರೆ ಉತ್ತಮ ಕಷ್ಟ ಪಟ್ಟು ಓದದೆ ಇಷ್ಟ ಪಟ್ಟು ಅಧ್ಯಯನ ಮಾಡಬೇಕು  ಎಂದು ಅವರು ಕರೆ ನೀಡಿದರು.




 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಉಡುಪಿ ಸಿಟಿ ಅಧ್ಯಕ್ಷರಾದ ಡಾ||  ಹರಿಣಾಕ್ಷಿ ಕರ್ಕೇರ ವಹಿಸಿ ಪ್ರಸ್ತಾವನೆಗೈದರು. ಮುಖ್ಯ ಅತಿಥಿಯಾಗಿ ಪೂರ್ವ ಅಧ್ಯಕ್ಷ ಜಗದೀಶ್ ಶೆಟ್ಟಿ ,ಉದಯ ನಾಯ್ಕ್, ಸಂಸ್ಥೆಯ ಮುಖ್ಯಸ್ಥರಾದ ಜಾನ್ ಸುದರ್ಶನ್ ಮುಂತಾದವರು ಉಪಸ್ಥಿತರಿದ್ದರು. ಮಹಿಳಾಜೆಸಿ ಸಂಯೋಜಕರಾದ ನಯನ ಉದಯ್ ನಾಯ್ಕ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top