ಮಂಗಳೂರು: ದ.ಕ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಹೆಸರಾಂತ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಅವರಿಗೆ ವಿಧ್ಯುಕ್ತವಾಗಿ ಅವರ ನಿವಾಸದಲ್ಲಿ ಆಮಂತ್ರಣ ನೀಡಿ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಅಧ್ಯಕ್ಷ ಡಾ| ಎಂ ಪಿ ಶ್ರೀನಾಥ್ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರುಗಲಿರುವ ಈ ಕನ್ನಡದ ಸಂಭ್ರಮವು ಎಲ್ಲ ಕನ್ನಡ ಮನಸ್ಸುಗಳಿಗೆ ತಂಪೆರೆಯಲಿದೆ. ಸರ್ವಾಧ್ಯಕ್ಷರು ಇಡೀ ಸಾಹಿತ್ಯದ ಹಬ್ಬದ ಕಿರೀಟದಂತೆ ಅದೂ ಭುವನೇಶ್ವರಿ ಹೆಗಡೆ ಅವರು ನಮ್ಮ ಕರಾವಳಿಯ ಹೆಮ್ಮೆ ಎಂದು ಅಭಿಪ್ರಾಯಪಟ್ಟರು.
ಭುವನೇಶ್ವರಿ ಹೆಗಡೆ ಅವರು ಮಾತನಾಡಿ ಸಮಯ ಪಾಲನೆಯ ಬಗ್ಗೆ ನಿಗಾವಹಿಸಿ ಶಿಸ್ತುಬದ್ಧವಾಗಿ ಸಮ್ಮೇಳನ ನೆರವೇರಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಾ. ಮುರಲೀಮೋಹನ್ ಚೂಂತಾರು,ಡಾ | ಮೀನಾಕ್ಷಿ ರಾಮಚಂದ್ರ, ಗಣೇಶ ಪ್ರಸಾದ್ ಜೀ ,ಮಂಜುನಾಥ ರೇವಣ್ಕರ್, ರೇಮಂಡ್ ಡಿಕೂನಾ ತಾಕೊಡೆ, ಎನ್. ಸುಬ್ರಾಯ ಭಟ್,ಅರುಣಾ ನಾಗರಾಜ್,ಪ್ರಸನ್ನ ಕುಮಾರ್, ಆಭಾ ಹೆಗಡೆ ಹಾಗೂ ಶಂಭು ಹೆಗಡೆ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ