ಪ್ರಕೃತಿಯಲ್ಲೇ ದೇವರ ಸ್ವರೂಪ ಕಂಡು ಆರಾಧಿಸುವ ಪರಂಪರೆ ಭಾರತೀಯರದ್ದು: ಡಿ. ವೀರೇಂದ್ರ ಹೆಗ್ಗಡೆ

Upayuktha
0

 ಶ್ರದ್ಧಾಕೇಂದ್ರಗಳಲ್ಲಿದೇವವೃಕ್ಷನೆಡುವ ಅಭಿಯಾನಕ್ಕೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ



ಉಜಿರೆ: ನದಿ, ಗಿಡ, ಬೆಟ್ಟ, ಗುಡ್ಡ - ಹೀಗೆ ಪ್ರಕೃತಿಯಲ್ಲೇ ದೇವರ ಸ್ವರೂಪ ಕಂಡು ಆರಾಧಿಸುವ ಪರಂಪರೆ ಭಾರತೀಯರದ್ದಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.



ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಉದ್ಯಾನದಲ್ಲಿ ರುದ್ರಾಕ್ಷಿ ಗಿಡವನ್ನು ನೆಟ್ಟು ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಮೂಲಕ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಅರಳಿ, ರುದ್ರಾಕ್ಷಿ, ಪಾರಿಜಾತ, ಬಿಲ್ವಪತ್ರೆ, ಶಮಿ ಮೊದಲಾದ ದೇವವೃಕ್ಷಗಳ ಗಿಡಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.



ಜನಸೇವಾ ಟ್ರಸ್ಟ್ನ ಯೋಜನೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು. ಎಲ್ಲರೂ ಆಸಕ್ತಿಯಿಂದ ಅಭಿಯಾನಕ್ಕೆ ಪ್ರೋತ್ಸಾಹಿಸಿ ಸಹಕರಿಸಬೇಕೆಂದು ಸಲಹೆ ನೀಡಿದ ಅವರು ತನ್ಮೂಲಕ ಪ್ರಕೃತಿ-ಪರಿಸರ ಸಂರಕ್ಷಣೆ ಮಾಡಿದಂತೆಯೂ ಆಗುತ್ತದೆ ಎಂದು ಹೇಳಿದರು.



ಜನಸೇವಾಟ್ರಸ್ಟ್ ಅಧ್ಯಕ್ಷ ವಸಂತ ಗಿಳಿಯಾರು, ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ, ಧನಕೀರ್ತಿ ಆರಿಗಾ, ಸಂದೀಪ್ ರೈ, ರಾಘವೇಂದ್ರ ರಾಜ್, ಜೀವನ್ ಶೆಟ್ಟಿ ಅಯೋಧ್ಯಾ, ಶರತ್ ಶೆಟ್ಟಿ, ನಿಖಿಲ್ ನಾಯಕ್  ಮತ್ತು ಸಂದೀಪ್ ದೇವ್ ಉಪಶ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top