ವಿಶ್ವಭಾರತಿ ಫ್ರೆಂಡ್ಸ್ ಸರ್ಕಲ್‌ನ 36ನೇ ವಾರ್ಷಿಕೋತ್ಸವ ಕಾರ್ಯಕ್ರಮ
ಮಂಗಳೂರು: ಕೋಡಿಕಲ್‌ನ ವಿಶ್ವಭಾರತಿ ಫ್ರೆಂಡ್ಸ್ ಸರ್ಕಲ್ ವತಿಯಿಂದ ನಿವೃತ್ತ ಯೋಧರಿಗೆ ಇತ್ತೀಚೆಗೆ ಸನ್ಮಾನ ಕಾರ್ಯಕ್ರಮ ಕೋಡಿಕಲ್ ಆಲಗುಡ್ಡದಲ್ಲಿ ನಡೆಯಿತು.
ಕೋಡಿಕಲ್ ವಿಶ್ವಭಾರತಿ ಫ್ರೆಂಡ್ಸ್ ಸರ್ಕಲ್‌ನ 36ನೇ ವಾರ್ಷಿಕೋತ್ಸವ ಸಂದರ್ಭ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಲೀಲಾಧರ್ ಕಡಂಬೋಡಿ, ಕೆ. ಗೋಪಿನಾಥ್ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶೋಕ್ ಕುಮಾರ್ ಕಲ್ಪನೆ ವಹಿಸಿದ್ದರು.
ಇದೇ ಸಂದರ್ಭ ಪ್ರತಿಭಾ ಪುರಸ್ಕಾಾರ ಮತ್ತು ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಬಿ. ಕೆ. ಶ್ರೀನಿವಾಸ್ ಸಾಲಿಯಾನ್ ಉದ್ಘಾಾಟಿಸಿದರು. ಮುಖ್ಯ ಅತಿಥಿಗಳಾಗಿ ಮನಪಾ ಸದಸ್ಯರಾದ ಇನಾಯತ್ ಆಲಿ, ಕಿರಣ್ ಕುಮಾರ್ ಕೋಡಿಕಲ್, ಮಾಜಿ ಮಹಾ ಪೌರರಾದ ಶಶಿಧರ್ ಹೆಗ್ಡೆ, ಉದ್ಯಮಿ ನೀತಾ ಪ್ರವೀಣ್, ರಮೇಶ್ ಬಾಳಿಗ, ಮಂಗಳೂರು ಮಹಾ ನಗರ ಪಾಲಿಕೆಯ ನಗರ ಯೋಜನಾಧಿಕಾರಿ ಬಾಲಕೃಷ್ಣ ಗೌಡ ಭಾಗವಹಿಸಿದ್ದ್ದರು.
ಮಂಗಳೂರು ಶ್ರೀನಿವಾಸ ಪಾಠ ಶಾಲೆ ಓರಿಯೆಂಟಲ್ ಹೈಸ್ಕೂಲ್‌ನ ಸಂಸ್ಕೃತ ಅಧ್ಯಾಪಕರಾದ ವಿ. ಅನಂತ್ ರಾಮ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಕೇಶ್ ಶೆಟ್ಟಿ ನಿರೂಪಿಸಿದರು. ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಅಶೋಕ್ ಕುಮಾರ್ ಕಲ್ಪನೆ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ