ಸೈನಿಕರನ್ನು ಗೌರವಿಸುವುದು ನಮ್ಮೆಲ್ಲರ ಅದ್ಯ ಕರ್ತವ್ಯ: ಶಾಸಕ ಡಾ. ಭರತ್ ಶೆಟ್ಟಿ

Upayuktha
0


ಮಂಗಳೂರು: ನಮ್ಮ ದೇಶದ ಸೈನಿಕರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಚಳಿ, ಗಾಳಿಯೆನ್ನದೆ ದೇಶಕ್ಕಾಗಿ ಪ್ರಾಣವನ್ನೇ ಒತ್ತೆೆ ಇಟ್ಟು  ದೇಶವನ್ನು ರಕ್ಷಣೆ ಮಾಡಿ ನಿವೃತ್ತಿ ಪಡೆದು ತವರಿಗೆ ಹಿಂತಿರುಗುವಾಗ ನಾವೆಲ್ಲರೂ ಅವರನ್ನು ಗೌರವದಿಂದ ಸ್ವಾಗತಿಸಿ ಸನ್ಮಾನಿಸುವುದು ನಮ್ಮೆಲ್ಲರ ಭಾಗ್ಯ ಎಂದು ಮಂಗಳೂರು ನಗರದ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಹೇಳಿದರು.


ಭಾರತದ ಗಡಿ ಭದ್ರತಾ ಪಡೆಯಲ್ಲಿ ಕಳೆದ 40 ವರ್ಷ 7 ದಿವಸಗಳ ಸುಧೀರ್ಘ ಅವಧಿಯಲ್ಲಿ ದೇಶದ ಬೇರೆ ಬೇರೆ ರಾಜ್ಯಗಳ ಗಡಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಪಡೆದು ಪಶ್ಚಿಮ ಬಂಗಾಳದಿಂದ ಮಂಗಳೂರಿಗೆ ಆಗಮಿಸಿದ ಬಿಎಸ್ಸೆೆಫ್‌ ಇನ್ಸ್‌ಪೆಕ್ಟರ್ ಎಂ. ಸಂಜೀವ ಕುಲಾಲ್‌ರವರ ಸನ್ಮಾಾನ ಕಾರ್ಯಕ್ರಮದಲ್ಲಿ ಅವರು ಯೋಧರ ಕುರಿತು ಮಾತನಾಡಿದರು.


ಯೋಧರನ್ನು ಮಂಗಳೂರು ವಿಮಾನ ನಿಲ್ದಾಾಣದಿಂದ ತೆರೆದ ವಾಹನದೊಂದಿಗೆ ಮೇರಿಹಿಲ್ ಗುರುನಗರದ ನಾರಾಯಣ ಗುರು ಸಭಾಭವನಕ್ಕೆೆ ಮೆರವಣಿಗೆಯಲ್ಲಿ ಕರೆದುಕೊಂಡು ಬರಲಾಯಿತು. ಯೋಧರಾದ ಎಂ. ಸಂಜೀವ ಕುಲಾಲ್ ಹಾಗೂ ಅವರ ಧರ್ಮಪತ್ನಿ ರೇಖಾಸಂಜೀವ ಇಬ್ಬರನ್ನೂ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಮೂಲತಃ ಯೋಧರಾದ ಸಂಜೀವ್ ಕುಲಾಲ್‌ರವರು ಪುತ್ತೂರಿನ ಬಲ್ನಾಡಿನವರಾಗಿದ್ದು ಪ್ರಸ್ತುತ ನಗರದ ಮೇರಿಹಿಲ್ ಗುರುನಗರದ ನಿವಾಸಿಯಾಗಿದ್ದಾರೆ.


ವೇದಿಕೆಯಲ್ಲಿ ಸ್ಥಳೀಯ ಮನಪಾ ಸದಸ್ಯರು, ಮಾಜಿ ಮೇಯರ್ ಜಯಾನಂದ ಅಂಚನ್, ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್, ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾಾನದ ಸೇವಾ ಸಮಿತಿಯ ಅಧ್ಯಕ್ಷರಾದ ಸುಂದರ್ ಕುಲಾಲ್, ಸಾಮಾಜಿಕ ಕಾರ್ಯಕರ್ತರಾದ ಪರಮೇಶ್ವರ್ ಮೂಲ್ಯ ಸಜಿಪ, ಈ ಕಾರ್ಯಕ್ರಮದಲ್ಲಿ  ದಿನೇಶ್ ಕುಲಾಲ್, ಚನ್ನಕೇಶವ ಬೆಂಗಳೂರು, ಲಕ್ಷಣ್ ಕುಂದರ್, ಪ್ರಧಾನ ಕಾರ್ಯದರ್ಶಿ ಸದಾಶಿವ ಕುಲಾಲ್, ಕೋಶಾಧಿಕಾರಿ ಕುಶಾಲಪ್ಪ ಕುಲಾಲ್, ಸೇವಾದಳಪತಿ ಕಿರಣ್ ಅಟ್ಲೂರು, ಪ್ರದೀಪ್ ಅತ್ತಾವರ, ಶ್ರೀ ವೀರನಾರಾಯಣ ದೇವಸ್ಥಾನದ ಪ್ರೇಮಾನಂದ ಕುಲಾಲ್, ಗಿರಿಧರ್.ಜೆ.ಮೂಲ್ಯ, ಮಾತೃ ಮಂಡಳಿ ಅಧ್ಯಕ್ಷರಾದ ಜಲಾಜಾಕ್ಷಿ ಕುಲಾಲ್, ಪ್ರಭಾ ಸದಾಶಿವ, ಮುಂಬಯಿ ಮಹಿಳಾ ಮಂಡಳಿಯ ಅಧ್ಯಕ್ಷರಾದ  ಮಮತ ಗುಜಾರನ್, ದೇವಿ ದೇವಸ್ಥಾನದ ಅಧ್ಯಕ್ಷ ಪ್ರಸಾದ್ ಕುಲಾಲ್, ಭವಾನಿಶಂಕರ್, ಪ್ರಕಾಶ್ ಸದಾಶಿವ ಬಿಜೈ, ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.


ಕುಮಾರಿ ದಿಶಾ ಪ್ರಾರ್ಥಿಸಿದರು. ರೂಪಾ ಡಿ. ಬಂಗೇರ ಸ್ವಾಗತಿಸಿ, ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top