ಮಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭಾದ ಸಂಸ್ಥಾಪನೋತ್ಸವ, 2023-24ನೇ ಸಾಲಿನ ಹವ್ಯಕ ವಿಶೇಷ ಪ್ರಶಸ್ತಿ ಹಾಗೂ ಪಲ್ಲವ ಪ್ರಶಸ್ತಿ ಪ್ರದಾನ ಸಮಾರಂಭ ಮಾ.31ರಂದು ಬೆಂಗಳೂರಿನ ಮಲ್ಲೇಶ್ವರಂ ಹವ್ಯಕ ಭವನದಲ್ಲಿ ಸಂಜೆ 4:00 ಗಂಟೆಗೆ ನಡೆಯಲಿದೆ.
ಈ ಬಾರಿಯ ಹವ್ಯಕ ವಿಭೂಷಣ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಿಂದ ಹೆಚ್.ಎಂ ತಿಮ್ಮಪ್ಪ ಕಲಸಿ ಅವರನ್ನು ಆಯ್ಕೆ ಮಾಡಲಾಗಿದೆ. ಹವ್ಯಕ ಭೂಷಣ ಪ್ರಶಸ್ತಿಗೆ ಶಿಲ್ಪಶಾಸ್ತ್ರ ವಿಭಾಗದಿಂದ ಗಣೇಶ್ ಎಲ್ ಭಟ್, ಪರಿಸರ ವಿಭಾಗದಿಂದ ಶಿವಾನಂದ ಕಳವೆ ಹಾಗೂ ಯೋಗ ವಿಭಾಗದಿಂದ ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಹವ್ಯಕ ಶ್ರೀ ಪ್ರಶಸ್ತಿಗಳನ್ನು ಛಾಯಾಗ್ರಹಣ, ಸಂಗೀತ ನಿರ್ದೇಶನ ವಿಭಾಗದಲ್ಲಿ ಗಿರಿಧರ್ ದಿವಾನ್, ಸಂಗೀತ ವಿಭಾಗದಲ್ಲಿ ಗಣೇಶ್ ದೇಸಾಯಿ ಹಾಗೂ ಕಥಾ ಕೀರ್ತನಕಾರರ ವಿಭಾಗದಲ್ಲಿ ಮಂಗಳ ಬಾಲಚಂದ್ರ ಅವರಿಗೆ ನೀಡಲಾಗುತ್ತಿದೆ.
ಹವ್ಯಕ ಸೇವಾಶ್ರೀ ಪ್ರಶಸ್ತಿಯನ್ನು ಹವ್ಯಕ ಮಾಸಪತ್ರಿಕೆಯ ವಿಶ್ರಾಂತ ಸಂಪಾದಕ ಶ್ರೀಕಾಂತ್ ಹೆಗಡೆ ಅಂತ್ರವಳ್ಳಿ ಅವರಿಗೆ ನೀಡಿ ಗೌರವಿಸಲಾಗುತ್ತಿದೆ.
ಯುವ ಹವ್ಯಕ ಪ್ರತಿಭಾವಂತರಾದ ಡಾ. ಅಕ್ಷಯ್ ಕೃಷ್ಣ ದಂಬೆಮೂಲೆ, ಡಾ. ಸಿರಿ ಪಾರ್ವತಿ ಬೀಡುಬೈಲು, ಧನುಷ್ ರಾಮ್ ಎಂ, ಸುಮಂತ್ ಹೆಗಡೆ, ಗುರುದತ್ ಟಿ.ಎಂ., ಅನೀಶ ಜಿ, ಅನಿಕೇತ್ ಭಟ್ ಅರ್ನಾಡಿ, ಪವನ್, ಅಭಿಜಿತ್ ಕೆ.ಆರ್, ಪ್ರಣವ್ ಕಾಡೂರು, ಕು. ಸಿಂಚನಾ ತಿಮ್ಮಣ್ಣ ಭಟ್ ಅವರಿಗೆ ಹವ್ಯಕ ಪಲ್ಲವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ