ಗೋವಿಂದ ದಾಸ ಕಾಲೇಜಿನಲ್ಲಿ ಪುಸ್ತಕ ಪ್ರೀತಿ ಪರಿಚಯ ಸರಣಿ ಕಾರ್ಯಕ್ರಮ

Upayuktha
0



ಸುರತ್ಕಲ್:  ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗವು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಪುಸ್ತಕ ಪ್ರೀತಿ ಪರಿಚಯ ಸರಣಿ ಕಾರ್ಯಕ್ರಮದಲ್ಲಿ, ಅಂತಿಮ ಬಿ.ಬಿ.ಎ ವಿದ್ಯಾರ್ಥಿನಿ ಪೂರ್ವಿ ಅಶೋಕ ಕುಮಾರವರು ಖಾಲಿದ್ ಹುಸೇನಿ ಬರೆದ ದಿ ಕೈಟ್ ರನ್ನರ್ ಎಂಬ ಪುಸ್ತಕವನ್ನು ಪರಿಚಯಿಸಿ ಸಾಮಾಜಿಕ ಸ್ಥಿತ್ಯಂತರಗಳ ನಡುವೆ ಮಾನವೀಯ ಸಂಬಂಧಗಳ ಚರ್ಚೆಯನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ ಎಂದರು.   


ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪಿ.ಕೃಷ್ಣಮೂರ್ತಿಯವರು , ಪೂರ್ವಿ ಅಶೋಕಕುಮಾರ ರವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶ್ರೀದೇವಿ, ಪ್ರಾದ್ಯಾಪಕರುಗಳಾದ  ಡಾ.ಆಶಾಲತಾ.ಪಿ, ಡಾ.ಸಂತೋಷ ಆಳ್ವ, ಪುನಿತಾ, ಶಿಲ್ಪಾರಾಣಿ, ಪ್ರತಿಕ್ಷಾ,  ದಯಾ ಸುವರ್ಣ, ಗ್ರಂಥಪಾಲಕಿ ಡಾ.ಸುಜಾತಾ ಬಿ, ಗ್ರಂಥಾಲಯದ ಸಿಬ್ಬಂದಿಗಳು  ಉಪಸ್ಥಿತರಿದ್ದರು. ಅಂತಿಮ ಬಿ.ಬಿ.ಎ ವಿದ್ಯಾರ್ಥಿನಿ ರಿಯಾ ಸ್ವಾಗತಿಸಿದರು.          



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top