ಗೋವಿಂದದಾಸ ಕಾಲೇಜ್‌ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

Upayuktha
0




ಸುರತ್ಕಲ್‌:  ಮೌಲ್ಯ ಪ್ರಜ್ಞೆ ಮತ್ತು ಮೌಲ್ಯ ನಿಷ್ಠೆ ವಿದ್ಯಾರ್ಥಿಗಳ ನೈತಿಕ ಜೀವನಕ್ಕೆ ಆಧಾರವಾಗಿದ್ದು, ವಿದ್ಯಾರ್ಥಿಗಳ ಕಲಿಕೆಗೆ ನೀಡುವ ವಿದ್ಯಾರ್ಥಿವೇತನದ ಕೊಡುಗೆಯನ್ನು ಸದುಪಯೋಗಪಡಿಸಿಕೊಳ್ಳಬೇಕು  ಎಂದು ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಅಧ್ಯಕ್ಷ ಜಯಚಂದ್ರ ಹತ್ವಾರ್ ಹೆಚ್. ನುಡಿದರು. ಅವರು ರಾಧಾ ದಯಾನಂದ ರಾವ್ ಟ್ರಸ್ಟ್‌ನ ವತಿಯಿಂದ ದಿ. ಪೇಜಾವರ ದಯಾನಂದ ರಾವ್ ಸ್ಮರಣಾರ್ಥ ನಡೆದ ಅರ್ಹ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ ಸತ್ಯ ಹಾಗೂ ಮೌಲ್ಯಗಳನ್ನು ಬಾಳಿನ ಆದರ್ಶವನ್ನಾಗಿಸಿಕೊಂಡ ನ್ಯಾಯವಾದಿ ದಯಾನಂದ ರಾವ್ ಅವರ ಜನ್ಮಶತಾಬ್ಧಿ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಆದರ್ಶ ಕಾರ್ಯವನ್ನು ಟ್ರಸ್ಟ್ ನಡೆಸಿದೆ. ಮಕ್ಕಳ ಶೈಕ್ಷಣಿಕ ಚಟುವಟಿಕೆಗಲ್ಲಿ ಪಾಲಕರೂ ಚಿಂತನಶೀಲ ಆಲೋಚನೆಗಳೊಂದಿಗೆ ಪ್ರೋತ್ಸಾಹ ನೀಡಬೇಕು ಎಂದರು.


ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ. ಮುರಳೀಧರ ರಾವ್ ಶುಭ ಹಾರೈಸಿದರು.


ಆಶಯ ನುಡಿಗಳನ್ನಾಡಿದ ರಾಧಾ ದಯಾನಂದ ರಾವ್ ಟ್ರಸ್ಟ್ನ ಟ್ರಸ್ಟಿ ಮತ್ತು ಇನ್‌ಫೊಸೀಸ್ ಲಿಮಿಟೆಡ್  ಮೈಸೂರು ಅಭಿವೃದ್ಧಿ ಕೇಂದ್ರದ ಸಹ ಉಪಾಧ್ಯಕ್ಷ ಪ್ರವೀಣ್ ರಾವ್ ಪೇಜಾವರ ಅವರು ವಿದ್ಯಾರ್ಥಿಗಳು ನೈತಿಕತೆ, ರಾಷ್ಟ್ರಪ್ರೇಮ, ಸೃಜನಶೀಲತೆ ಹಾಗೂ ಸಮಾಜಸೇವಾಸಕ್ತಿಗಳೊಂದಿಗೆ ಕಲಿಕೆಯಲ್ಲಿ ವಿಶಿಷ್ಟ ಸಾಧನೆ ಮಾಡಿ ಸತ್ಪ್ರೆಜೆಗಳಾಗಬೇಕೆಂದರು.


ರಾಧಾ ದಯಾನಂದ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ರಾಧಾ ರಾವ್ ವಿದ್ಯಾರ್ಥಿವೇತನ ವಿತರಿಸಿದರು. ಉಪಪ್ರಾಚಾರ್ಯ ಪ್ರೊ. ನೀಲಪ್ಪ ವಿ. ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ. ವಂದಿಸಿದರು. ಉಪನ್ಯಾಸಕ ಡಾ. ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಐಶೆ ಸಂಯೋಜಕ ಪ್ರೊ. ವಾಮನ ಕಾಮತ್ ಉಪಸ್ಥಿತರಿದ್ದರು. 31 ವಿದ್ಯಾರ್ಥಿಗಳಿಗೆ 2 ಲಕ್ಷ ಮೌಲ್ಯದ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top