ಪಣಜಿ: ಹೋಳಿ ಹಬ್ಬದಲ್ಲಿ ರಾಸಾಯನಿಕ ಮಿಶ್ರಿತ ಬಣ್ಣವನ್ನು ಬಳಸದೆಯೇ ಕೇವಲ ನೈಸರ್ಗಿಕ ಬಣ್ಣಗಳನ್ನು ಆಡುವುದರಿಂದ ಯಾವುದೇ ತೊಂದರೆಯಿಲ್ಲ. ಆದ್ದರಿಂದ ಬಣ್ಣ ಆಡುವ ಸಂದರ್ಭದಲ್ಲಿ ಮತ್ತೊಬ್ಬರಿಗೆ ಹಾನಿಯಾಗದಂತೆ ನಾವೆಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಹೋಳಿಯನ್ನು ಆಚರಿಸಬೇಕು ಎಂದು ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹಾಗೂ ಕರ್ಮಭೂಮಿ ಕನ್ನಡ ಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ ನುಡಿದರು.
ಹೋಳಿ ಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ಗೋವಾದ ಬಿಚೋಲಿಯಲ್ಲಿ ಆಯೋಜಿಸಿದ್ದ "ಹೋಳಿ ಸಂಭ್ರಮ" ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು. ಹೋಳಿ ಹಬ್ಬವು ನಮ್ಮ ಸಂಸ್ಕøತಿಯ ಪ್ರತೀಕವಾಗಿದ್ದು ನಾವೆಲ್ಲರೂ ಈ ಬಣ್ಣದ ಹಬ್ಬವನ್ನು ಒಟ್ಟಾಗಿ ಆಚರಿಸಬೇಕು. ಹೊರನಾಡ ಗೋವೆಯಲ್ಲಿ ಹೀಗೆ ವಿವಿಧ ಹಬ್ಬಗಳನ್ನು ಆಚರಿಸುವ ಮೂಲಕ ನಾವೆಲ್ಲ ಕನ್ನಡಿಗರು ಒಂದೆಡೆ ಸೇರಲು ಸಾಧ್ಯವಾಗುತ್ತದೆ ಎಂದು ಹನುಮಂತಪ್ಪ ಶಿರೂರ್ ರೆಡ್ಡಿ ನುಡಿದರು.
ಬೆಳಿಗ್ಗೆಯಿಂದಲೇ ಬಣ್ಣದಾಟ ಆರಂಭಗೊಂಡಿತು. ಕನ್ನಡಿಗರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. ಗೋವಾದ ಬಿಚೋಲಿ ಕರ್ಮಭೂಮಿ ಕನ್ನಡ ಸಂಘದ ವತಿಯಿಂದ ಹೋಳಿ ಹಬ್ಬದ ಪ್ರಯುಕ್ತ ಬಣ್ಣ ಹಚ್ಚಿ ಸಂಭ್ರಮಿಸಲಾಯಿತು. ಕನ್ನಡದ ಹೊಸ ಡಿಜೆ ಹಾಡುಗಳಿಗೆ ಕನ್ನಡಿಗರು ಬಣ್ಣ ಹಚ್ಚಿ ಕುಣಿದು ಕುಪ್ಪಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಾಗೇಶ್ ಮೊಟೆಬೆನ್ನೂರ್, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹೊಸ್ಮನಿ, ಖಜಾಂಚಿ ಸುರೇಶ್ ರಕ್ಷಿ, ರಾಮದುರ್ಗದ ಉದ್ಯಮಿ ಮುತ್ತು ಮುರಡಿ, ಭಗವಾನ್ ಹರಮಲಕರ್, ಮೆಹಬೂಬ್ ಮಕಂದರ್, ಕನ್ನಡ ಸಂಘದ ಪದಾಧಿಕಾರಿಗಳು, ಸದಸ್ಯರು, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು ಮತ್ತಿತರರು ಉಪಸ್ಥಿತರಿದ್ದರು.
ಗೋವಾದಲ್ಲಿ ಗಲ್ಲಿ ಗಲ್ಲಿಯಲ್ಲಿ ಸಂಭ್ರಮ...
ಹೋಳಿ ಹಬ್ಬದ ಅಂಗವಾಗಿ ಗೋವಾದ ಗಲ್ಲಿ ಗಲ್ಲಿಗಳಲ್ಲಿ ಸೋಮವಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಥಳೀಯ ಜನರು ಒಂದೆಡೆ ಸೇರಿ ಹಾಡು, ನೃತ್ಯದ ಮೂಲಕ ಬಣ್ಣ ಹಚ್ಚಿ ಸಂಭ್ರವಿಸಿದರು. ಪ್ರತಿ ವರ್ಷದಂತೆಯೇ ಗೋವಾ ರಾಜಧಾನಿ ಪಣಜಿಯ ಆಜಾದ ಮೈದಾನದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೋವಾದ ಮೂಲೆ ಮೂಲೆಯಿಂದ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಸಂಭ್ರಮಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ