ಪಣಜಿ: ಕರೋನಾ ಅವಧಿಯಲ್ಲಿ ಗೋವಾದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಆರೋಪಿಸಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಲಿಕ್ ಅವರು ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಮಲಿಕ್ ಸಂದರ್ಶನದ ವಿಡಿಯೋವನ್ನು ಗೋವಾ ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಬಂಧನಕ್ಕೆ ಒತ್ತಾಯಿಸಲಾಗಿದೆ.
ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್ ಕೋವಿಡ್ ಸಮಯದಲ್ಲಿ ಪ್ರಮೋದ್ ಸಾವಂತ್ ಎಲ್ಲದರಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಮೇಘಾಲಯ ಮತ್ತು ಗೋವಾದ ಮಾಜಿ ಗವರ್ನರ್ ಮಲಿಕ್ ಬಹಿರಂಗಪಡಿಸಿದ್ದಾರೆ. ಈ ವಿಚಾರದಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು, ಆದರೆ ಪ್ರಧಾನಿ ನರೇಂದ್ರ ಮೋದಿ ಆಗ ಏನೂ ಮಾಡಲಿಲ್ಲ. ಈಗ ನಮ್ಮ ಸವಾಲನ್ನು ಸ್ವೀಕರಿಸಿ ಮತ್ತು ಅತ್ಯಂತ ಭ್ರಷ್ಟ ಡಾ. ಪ್ರಮೋದ್ ಸಾವಂತ್ ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಗೋವಾದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಗೋವಾ ಮುಖ್ಯಮಂತ್ರಿಯನ್ನು ಬಂಧಿಸುವಂತೆ ಕಾಂಗ್ರೇಸ್ ಒತ್ತಾಯಿಸಿದೆ.
ಗೋವಾದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದೇನು?
ಗೋವಾದಲ್ಲಿ ಕೊರೊನಾ ಅವಧಿಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಭೃಷ್ಠಾಚಾರವೆಸಗಿದ್ದಾರೆ. ಈ ಕುರಿತು ಇಬ್ಬರು ಕೊಂಕಣಿ ಗಾಯಕರು ಹಾಡನ್ನೂ ಹಾಡಿದ್ದಾರೆ. ಈ ಸಂದರ್ಶನದಲ್ಲಿ ಮಲಿಕ್ ಅವರು ರಾಜ್ಯದ ಎಲ್ಲಾ ವ್ಯವಹಾರಗಳಲ್ಲಿ ಭ್ರಷ್ಟಾಚಾರವಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಮುಖ್ಯಮಂತ್ರಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಕ್ಕೆ ನನ್ನನ್ನು ತೆಗೆದು ಹಾಕಲಾಗಿತ್ತು. ನಾನು ಲೋಹಿಯಾ ಸಿದ್ಧಾಂತಕ್ಕೆ ಸೇರಿದವನಾಗಿರುವುದರಿಂದ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದೂ ಮಲಿಕ್ ಹೇಳಿದ್ದಾರೆ.
ಗಣಿಗಾರಿಕೆ ದಟ್ಟಣೆ ಮುಂದುವರೆದಂತೆ ಕರೋನಾ ಹರಡಿತು
ಕರೋನಾ ಸಮಯದಲ್ಲಿ ಗೋವಾದಲ್ಲಿ ಗಣಿ ಸಾಗಣೆಯ ಮುಂದುವರಿಕೆಯಿಂದಾಗಿ ಕರೋನಾ ಹರಡಿತು ಎಂದು ಮಲಿಕ್ ಆರೋಪಿಸಿದರು. ಭ್ರಷ್ಟಾಚಾರ ಪ್ರಕರಣದಲ್ಲಿ ಪ್ರಧಾನಿ ಮೋದಿ ಏಕೆ ಕ್ರಮ ಕೈಗೊಳ್ಳಲಿಲ್ಲ? ಎಂದು ಸತ್ಯಪಾಲ್ ಮಲಿಕ್ ರವರಿಗೆ ಪ್ರಶ್ನೆಯನ್ನು ಕೇಳಿದಾಗ- ಪ್ರಧಾನಿಗೆ ತಪ್ಪು ಮಾಹಿತಿ ನೀಡಬಹುದು, ಏಕೆಂದರೆ ಮೋದಿಗೆ ಮಾಹಿತಿ ನೀಡುವವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಮಲಿಕ್ ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ