ಕಣಚೂರು ಆಯುರ್ವೇದ ಕಾಲೇಜು ಆಸ್ಪತ್ರೆ ಸಹಯೋಗ
ಮಂಗಳೂರು: ಇಲ್ಲಿನ ನಂತೂರಿನಲ್ಲಿರುವ ಭಾರತೀ ವಿದ್ಯಾಸಂಸ್ಥೆಯಲ್ಲಿ ಹವ್ಯಕ ಸಭಾ ಪ್ರಾಯೋಜಿತ ಉಚಿತ ಆರೋಗ್ಯ ತಪಾಸಣಾ ಶಿಬಿರವು ಇಂದು (ಮಾ.3) ಯಶಸ್ವಿಯಾಗಿ ನೆರವೇರಿತು.
ಡಾ ರಾಜೇಂದ್ರ ಪ್ರಸಾದ, ಡಾ ಮುರಳೀ ಮೋಹನ ಚೂಂತಾರು ಸಾರಥ್ಯದ ಈ ಕಾರ್ಯಕ್ರಮವನ್ನು ಅಧ್ಯಕ್ಷೆ ಗೀತಾ ಅವರು ಉದ್ಘಾಟಿಸಿದರು.
ಭಾರತೀಯ ವೈದ್ಯ ಪದ್ಧತಿಯ ಆಯುಷ್ ವಿಭಾಗವನ್ನು ಕಣಚೂರು ಆಯುರ್ವೇದ ಕಾಲೇಜು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಸುರೇಶ ನೆಗಳಗುಳಿ ದೀಪ ಬೆಳಗಿಸಿ ಚಾಲನೆಗೊಳಿಸಿದರು.
ಮಂಗಳಾ ಆಸ್ಪತ್ರೆ, ಕೆ.ಎಂಸಿ, ಎ.ಜೆ ಆಸ್ಪತ್ರೆ, ಮತ್ತಿತರ ಆಸ್ಪತ್ರೆಗಳ ಆಯಾಯ ಪ್ರಕಾರದ ಡಾ ಮುರಳೀ ಕೇಶವ ಮತ್ತಿತರ ಹಲವಾರು ವಿಭಾಗ ತಜ್ಞರಿಂದ ಹಲವಾರು ಅಪೇಕ್ಷಿಗಳು ರೋಗ ತಪಾಸಣೆ ಮಾಡಿಸಿಕೊಂಡರು. ಕಿವಿ ಮೂಗು ಗಂಟಲು ಕಣ್ಣು ಸ್ತ್ರೀರೋಗ ಮೂಳೆರೋಗ, ಕ್ಯಾನ್ಸರ್ ಪತ್ತೆ ಹಾಗೂ ಮಕ್ಕಳ ಚಿಕಿತ್ಸಾ ವಿಭಾಗಗಳ ತಜ್ಞರು ತಪಾಸಣೆ ಮಾಡಿದರು.
ಇದೇ ವೇಳೆ ಆಯುರ್ವೇದ ಚಿಕಿತ್ಸಕರಾಗಿ ವೇದಂ ಆಸ್ಪತ್ರೆಯ ಮುಖ್ಯಸ್ಥ ಡಾ ಕೇಶವ ರಾಜ್, ಡಾ. ನಿಶ್ಚಿತ, ಕಣಚೂರು ಆಯುರ್ವೇದ ಕಾಲೇಜಿನ ಮುಖ್ಯ ವೈದ್ಯಾಧಿಕಾರಿ ಡಾ ಸುರೇಶ ನೆಗಳಗುಳಿ, ಡಾ ಸೌಮ್ಯಾ ಅಶೋಕ, ಡಾ ಕಾರ್ತಿಕ್ ಮತ್ತಿತರ ವೈದ್ಯರೂ ಸಹಕರಿಸಿದರು. ಯೋಗರತ್ನ ಡಾ ಗೋಪಾಲಕೃಷ್ಣ ದೇಲಂಪಾಡಿಯವರು ಯೋಗ ಮಾಹಿತಿಗಳನ್ನು ನೀಡಿದರು.
ಶಿಬಿರದಲ್ಲಿ ಮೂಳೆ ಸಾಂದ್ರತೆ, ರಕ್ತ ತಪಾಸಣೆ ಹಾಗೂ ರಕ್ತದಾನ ನೆರವೇರಿತು. ಸುಮಾರು ಮುನ್ನೂರು ಮಂದಿಗಳು ಈ ಶಿಬಿರದ ಸದುಪಯೋಗ ಪಡೆದರು.
ವರದಿ: ಡಾ ಸುರೇಶ ನೆಗಳಗುಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ