ಉಜಿರೆ: ಆರೋಗ್ಯಯುತ ಜೀವನ ಶೈಲಿ ಉತ್ತಮ ಆಹಾರ ಪದ್ಧತಿ ರೂಡಿಸಿಕೊಳ್ಳುವುದು ಮತ್ತು ಸಮತೋಲನ ಆಹಾರ ವಿಧಾನ ರೋಗಗಳಿಂದ ದೂರವಿಡುತ್ತದೆ . ಆರೋಗ್ಯವಾಗಿದ್ದಾಗ ಅಗಾಧವಾದ ನೆಮ್ಮದಿ ನಮ್ಮದಾಗುತ್ತದೆ ಎಂದು ಉಜಿರೆ, ಎಸ್.ಡಿ.ಎಂ ಕಾಲೇಜಿನ ಆಡಳಿತ ಕುಲ ಸಚಿವೆ ಡಾ. ಶಲೀಪ್ ಎ ಪಿ ಹೇಳಿದರು.
ಉಜಿರೆ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ರಾಸಾಯನ ಶಾಸ್ತ್ರ ಅಧ್ಯಯನ ವಿಭಾಗವು ಸೋಮವಾರ ಏರ್ಪಡಿಸಿದ ಫುಡ್ ಕಾರ್ನಿವಲ್ ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಆಹಾರ ಕ್ರಮ ಮತ್ತು ಪೌಷ್ಟಿಕತೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗ್ರತಿ ಮೂಡುತ್ತದೆ. ಆಹಾರ ತಯಾರಿಕೆ ದೈಹಿಕ ಅರೋಗ್ಯ ಮಾತ್ರವಲ್ಲದೆ ಮನಸ್ಸಿಗೂ ಖುಷಿ ಕೊಡುತ್ತದೆ. ಅಡುಗೆ ಮನೆ ಹೆಂಗಸರಿಗೆ ಮಾತ್ರ ಸೀಮಿತವಲ್ಲ . ಗಂಡು, ಹೆಣ್ಣು ಎಂಬ ತಾರತಮ್ಯವಿಲ್ಲದೆ ಆರೋಗ್ಯದ ದೃಷ್ಟಿಯಿಂದ ಕನಿಷ್ಠ ಪಕ್ಷ ಮೂಲಭೂತ ಆಹಾರ ಸಿದ್ದಪಡಿಸುವುದನ್ನು ಕಲಿತಿರಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ. , ಕಾರ್ಯಕ್ರಮದ ಸಂಯೋಜಕ ಡಾ. ಸುಜಯ್ ಯಂ ಯಂ, ವಿದ್ಯಾರ್ಥಿ ಸಂಯೋಜಕರಾದ ಅಂಜು ಜಯನ್ ಮತ್ತು ಪ್ರತೀಕ್ಷಾ ಮತ್ತಿತರರು ಉಪಸ್ಥಿತರಿದ್ದರು.
ಫುಡ್ ಕರ್ನಿವಲ್ ಅಲ್ಲಿ ವಿದ್ಯಾರ್ಥಿಗಳು ವಿಭಿನ್ನ ರೀತಿಯ ಹಲುವು ಪೌಷ್ಟಿಕ ಭಕ್ಷ್ಯಗಳನ್ನು ತಯಾರಿಸಿದ್ದರು. ವರ್ಣರಂಜಿತ ಖಾದ್ಯಗಳು ಬಾಯಲ್ಲಿ ನೀರುಣಿಸುತ್ತಿದ್ದವು. ವಿದ್ಯಾರ್ಥಿಗಳು, ಅಧ್ಯಾಪಕರು ರುಚಿಕರ ತಿಂಡಿ ತಿನಿಸುಗಳನ್ನು ಸವಿಯುತ್ತ ವಿದ್ಯಾರ್ಥಿಗಳ ಪರಿಶ್ರಮವನ್ನು ಪ್ರಶಂಸಿಸುತ್ತಿದ್ದರು.
ದ್ವಿತೀಯ ರಸಾಯನ ಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಬಿಂಧ್ಯ ಎಂ ಜಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ