ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ
ಮಂಗಳೂರು: ಇಂದು ಹೊಸದಾಗಿ ನೋಂದಾಯಿತ ಗೃಹರಕ್ಷಕರಿಗೆ ಅಪರಾಹ್ನ 2 ರಿಂದ 4 ಗಂಟೆಯವರೆಗೆ ದ ಕ ಜಿಲ್ಲಾ ಗ್ರಹ ರಕ್ಷಕ ಕಛೇರಿಯಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ಡಾ| ರಾಮಚಂದ್ರ ಭಟ್‍ರವರು ತರಬೇತಿಯನ್ನು ನೀಡಿದರು. ಗಾಯಗೊಂಡು ರಕ್ತಸ್ರಾವವಾದಾಗ ಯಾವ ರೀತಿ ರಕ್ತ ಸೋರಿಹೋಗುವುದನ್ನು ತಡೆಗಟ್ಟಬಹುದು ಮತ್ತು ಎಲುಬ ಮುರಿದಾಗ ಯಾವ ರೀತಿ ಪ್ರಾಥಮಿಕ ಪ್ರಥಮ ಚಿಕಿತ್ಸೆ ನೀಡಬಹುದು ಎಂಬುದರ ಬಗ್ಗೆ ತಿಳಿಸಿದರು.
ಅದೇ ರೀತಿ ಹಾವು ಕಚ್ಚಿದಾಗ, ಅಪಸ್ಮಾರ ಉಂಟಾದಾಗ ರೋಗಿಗಳಿಗೆ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಅಪಘಾತವಾದ ತಕ್ಷಣ ಜೀವ ಉಳಿಯಲು ಯಾವ ರೀತಿ ಪ್ರಥಮ ಚಿಕಿತ್ಸೆ ಕೊಡಬೇಕು ಮತ್ತು ಗಾಯಗೊಂಡ ರೋಗಿಯನ್ನು ಯಾವ ರೀತಿ ಆಸ್ಪತ್ರೆಗೆ ಸಾಗಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು, ಹಿರಿಯ ಗೃಹರಕ್ಷಕರಾದ ಸುನಿಲ್, ಆಶಾಲತಾ,ಜ್ಞಾನೇಶ್, ದಿವಾಕರ್,ಸಂಜಯ್ ಹಾಗೂ 45 ಮಂದಿ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ