ಎಲೆಕ್ಷನ್‌ಗೆ ನಿಂತ ಉಮೇದುವಾರರುಗಳಿಗೆ ಎಲೆಕ್ಷನ್ ಹತ್ತಿರ ಬಂದಾಗ ಜನರ ಬಗ್ಗೆ ಕಾಳಜಿ, ಅಭಿಮಾನ, ಪ್ರೀತಿ, ಅದಮ್ಯ ಅನುಕಂಪಗಳು ಸಹಜ. ಆ ಭಾವಗಳಿಂದಲೇ ಮನೆಗೆ ಬರ್ತಾರೆ, ಕೈ ಮುಗಿಯುತ್ತಾರೆ, ಕಣ್ಣೀರು ಸುರಿಸುತ್ತಾರೆ. ಅವರುಗಳ ಅಂತಃಕರಣ ದೊಡ್ಡದು!, ಅಗಣಿತ ಅಭಿಮಾನವೂ ದೊಡ್ಡದು!!!
ಎಲೆಕ್ಷನ್ ದಿನಗಳು ಬಂದಾಗ, ಸತ್ಯನಾರಾಯಣ ಪೂಜೆ ಮಾಡಿಸಿ, ಸೀರೆ, ರವಿಕೆಗಳ ಬಾಗಿನ ಕೊಡ್ತಾರೆ!!! ಪಂಚೆ ಶಲ್ಯ ಕೈ ಮೇಲಿಟ್ಟು ಹಸ್ತ ಲಾಘವ ಮಾಡ್ತಾರೆ. ಭ್ರಷ್ಟ ಪಾಪದ ಹಣದಲ್ಲಿ ಕುಕ್ಕರ್ ಕೊಡ್ತಾರೆ, ಸ್ಟೌ ಹಂಚ್ತಾರೆ. ಬಾರ್ ಬಾಗಿಲು ಹಾಕುವ ಕಾನೂನಿದ್ದರೂ... ಹಿಂದಿನ ಬಾಗಿಲಿನಿಂದ ರೀ-ಚಾರ್ಜ್ ಆಗಿ ಅಂತ, ಮಧ್ಯ ರಾತ್ರಿ ಮದ್ಯ ತಂದು ಕೊಡ್ತಾರೆ!!!
ಆಮಿಷಗಳೊಂದಿಗೆ ಪ್ರಚಾರ ಮಾಡುತ್ತ ಓಲೈಸುವ ರಾಜಕಾರಣಿಗಳಿಂದ (ಎಲ್ಲರೂ ಅಲ್ಲ!!) ನಾವು, ಅಂದರೆ ಸಾಮಾನ್ಯ ಜನರು ಆಕರ್ಷಣೆಗೆ ಬೀಳ್ತಾ ಇದ್ದೀವಿ!!?
ಅದು ಹೋಗಲಿ, ವಿಷಯ ಅದಲ್ಲ, ಹ್ಯಾಗೂ ಈ ಬಿಟ್ಟಿ ಸೀರೆ, ಪಂಚೆ, ಎಣ್ಣೆ, ಕುಕ್ಕರ್ 'ಕರಿಮನಿ' (ಬ್ಲಾಕ್ ಮನಿ) ಆಸೆಗಳಿಗೆ ಜನ ಆಕರ್ಷಿತರಾಗುತ್ತಾರೆ ಎಂದು ರಾಜಕಾರಣಿಗಳು ಮಾತ್ರ ಭಾವಿಸುವುದಲ್ಲ. ಅಂತರ್ಜಾಲದಲ್ಲಿ ಕುಳಿತು ಮೊಬಲ್ ಮೂಲಕ ಕನ್ನ ಹಾಕುವ ಹ್ಯಾಕರ್ ಕಳ್ಳಕಾರಣಿಗಳು ಇದ್ದಾರೆ. ಅವರೂ ತಮ್ಮ ಭಾವನೆಗಳನ್ನು ನಮ್ಮ ಆಸೆಯ ಭಾವಗಳೊಂದಿಗೆ ಲಿಂಕ್ ಸೀಡಿಂಗ್ ಮಾಡಿ ಬ್ಯಾಂಕ್ ಅಕೌಂಟಿಗೆ ಕನ್ನ ಹಾಕುವ ಪ್ರಯತ್ನ ಪ್ರಾರಂಭಿಸಿದ್ದಾರೆ!!
ಒಂದು ಡೇಂಜರ್ ಲಿಂಕ್‌ನ್ನು ಪಕ್ಷಗಳ ಹೆಸರು ಬಳಸಿ ಕಳಿಸುತ್ತಾರೆ. ನಿಮ್ಮ ಹೆಬ್ಬೆಟ್‌ನ್ನು, ನಿಮ್ಮದೇ ಮೊಬೈಲ್ ಸ್ಕ್ರೀನ್ ಮೇಲೆ ನೀವೇ 'ಓಟ್' ಒತ್ತಿದಂತೆ ನಿಮ್ಮಿಂದಲೇ ಒತ್ತಿಸಿ ಹಣ ಕದಿಯವವರಿದ್ದಾರೆ!!
ಆಸೆಗೆ ಬಿದ್ದು, ಅದನ್ನು ಒತ್ತಿ, ಅದು ಫೇಕ್ ಮೆಸೇಜ್ ಅಂತ ಗೊತ್ತಾಗುವಷ್ಟರಲ್ಲಿ ನಮ್ಮ ಬ್ಯಾಂಕಿನಿಂದ ನಮ್ಮ ಹಣ ಕಡಿತ ಆದ ಮೆಸೇಜ್ ಬರಬಹುದು!!.
ಇಂತಹ ಮೆಸೇಜ್‌ಗಳ ಬಗ್ಗೆ ನಾವು ಜಾಗೃತರಾಗಿರಬೇಕು.
ಇಂತಹ ಪೇಕ್ ಮೆಸೇಜ್‌ಗಳಿಂದ ಮೊಬೈಲ್ ಚಾರ್ಜ್ ಆಗುವುದಿಲ್ಲ. ಮೊಬೈಲ್, ಬ್ಯಾಂಕ್, ಆಧಾರ್, ಪಾನ್, ಎಲೆಕ್ಷನ್ ಕಾರ್ಡ್‌ಗಳು ಒಂದಕ್ಕೊಂದು ಲಿಂಕ್ ಆಗಿರುವುದರಿಂದ, ಮೆಸೇಜಿನಲ್ಲಿರುವ ಲಿಂಕ್‌ನ ಮೇಲಿನ ಒಂದು ಸಣ್ಣ ಕ್ಲಿಕ್ ಅನಾಹುತ ಮಾಡಬಹುದು!!
ಫೇಕ್ ಮೆಸೇಜ್‌ಗಳನ್ನು ಖಂಡಿತವಾಗಿಯೂ ಫಾರ್ವರ್ಡ್ ಮಾಡಬೇಡಿ. ಜನರಿಗೆ ಈಗಾಗಲೆ ಅನೇಕ ವೈರಸ್ ಗಳು ಬಾಧೆಗಳನ್ನು ಕೊಟ್ಟಿವೆ, ಕೊಡುತ್ತಿವೆ. ಕೊರೋನಾ, ಮಂಗನ ಖಾಯಿಲೆ ವೈರಸ್, ಮಲೇರಿಯ, ಕೃಷಿಯ ಬೆಳೆಯನ್ನು ಹಾಳುಮಾಡುವ ವೈರಸ್‌ಗಳು, ಜನರ ಆರೋಗ್ಯ-ಬದುಕು-ಅರ್ಥ ವ್ಯವಸ್ಥೆ-ದೇಶಗಳನ್ನೇ ಹಾಳು ಮಾಡುವ ಭಯೋತ್ಪಾದನೆಯ ವೈರಸ್‌ಗಳು ಭೂಮಿಯನ್ನು ಆವರಿಸಿ'ಕೊಂಡಿ'ವೆ.
ಇದಿಷ್ಟು ಸಾಲದು ಅಂತ, ಈಗೀಗ ಡಿಜಿಟಲ್ ವೈರಸ್ ಇರುವ ಮೆಸೇಜ್‌ಗಳು ನಮ್ಮ ಕೈ ಸೇರುತ್ತಿವೆ.
ಮೊಬೈನಲ್ಲಿ ಹರಿದಾಡುತ್ತಿರುವ ಒಂದು ವೈರಸ್ ಮೆಸೇಜ್ ರಾಜಕೀಯ ಪಾರ್ಟಿಯ ಹೆಸರಲ್ಲಿ ಬರ್ತಾ ಇದೆ!!
ಬಹುಶಃ ಇದು ಆ ಪಕ್ಷಕ್ಕೆ ಕೆಟ್ಟ ಹೆಸರು ತರಲು ಮಾಡಿದ್ದಾ? ಅಥವಾ ನಮ್ಮ ಮೊಬೈಲ್‌ನ್ನು ಮೋಸಗೊಳಿಸಿ, ನಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಲು ಮಾಡಿದ್ದಾ? ಗೊತ್ತಿಲ್ಲ.
ನಾಳೆ ಇದೇ ರೀತಿ ಬೇರೆ ಬೇರೆ ಪಕ್ಷಗಳ ಹೆಸರಲ್ಲೂ ಫೇಕ್ ಮೆಸೇಜ್ ಬರಬಹುದು, ಅಪಾಯಕಾರಿ ಮೆಸೇಜ್ ಬರಬಹುದು.
ಇತ್ತೀಚೆಗೆ ಪದೇ ಪದೇ ಗ್ರೂಪ್‌ಗಳಲ್ಲಿ ಬರುತ್ತಿರುವ, ಪಕ್ಷದ ಹೆಸರನ್ನು ಬಳಸಿಕೊಂಡಿರುವ ಫೇಕ್ ಮೆಸೇಜ್ ಒಂದು ಹೀಗಿದೆ:
BJP Free Recharge Yojana,Prime Minister Narendra Modi is giving 3 months free recharge to all Indian users so that more and more people can vote for BJP in the 2024 elections.Can vote for and form*BJP government again
Now click on the link given below and get 3 months*Free Recharge*(Last Date - 15 OCTOBER 2024)*👇👇👇
ಲಿಂಕ್:
http://.. (ಡಿಲೀಟ್ ಮಾಡಲಾಗಿದೆ)
ಈ ಲಿಂಕ್ ಅಪಾಯಕಾರಿಯಾದ ಕಾರಣ ಅದರ ಕೊಂಡಿಯನ್ನು ಮುರಿದು ಇಲ್ಲಿ ಸಾಂಕೇತಿಕವಾಗಿ ಪ್ರಕಟಿಸಲಾಗಿದೆ.
ಇಂತಹ ಲಿಂಕ್‌ಗಳ ಬಗ್ಗೆ ಸದಾ ಎಚ್ಚರ ಇರಲಿ.
ಪರಿಚಯದ ಎಲ್ಲ ಮೊಬೈಲ್ ಬಳಕೆದಾರರಿಗೂ ಈ ಮಾಹಿತಿ ತಿಳಿಸಿ.
ಉಚಿತ ರೀ ಚಾರ್ಜ್ ಲಿಂಕ್ ಒತ್ತಿದರೆ ಲಾಭವಾಗುವುದು ಎಲ್ಲೋ ಅಡಗಿ ಕುಳಿತ ಕಳ್ಳ ಹ್ಯಾಕರ್‌ಗಳಿಗೆ.
ಅಂತಹ ಮೆಸೇಜ್‌ಗಳನ್ನು ತಿರಸ್ಕರಿಸಿ.
ಬಿ ಕೇರ್ ಫುಲ್.
ಅದೇ ರೀತಿ, ಬಿಟ್ಟಿ ಎಲೆಕ್ಷನ್ ಬಾಗಿನ ಸೀರೆ, ಪಂಚೆ, ಕುಕ್ಕರ್, ಸ್ಟೌವು, 'ಎಣ್ಣೆ' 'ಕರಿಮನಿ' ವೈರಸ್ ಕೊಡುವ ರಾಜಕಾರಣಿಗಳ ಬಗ್ಗೆಯೂ ನಮ್ಮ ಎಚ್ಚರ ಇರಲಿ!! ಎಲ್ಲ ರಾಜಕಾರಣಿಗಳು ಹಾಗಲ್ಲ. ಆದರೆ, ವೈರಸ್ ರಾಜಕಾರಣಿಗಳೂ ನಮ್ಮ ನಡುವೆ ಇರುವುದಂತೂ ಸತ್ಯ. ನಾವು ನಮ್ಮ ಪವಿತ್ರ ಮತವನ್ನು ಮಾರಿಕೊಂಡು ಭ್ರಷ್ಟರಾಗುವುದು ಬೇಡ.
ಪ್ರಜಾಪ್ರಭುತ್ವದ ಹಬ್ಬ, ಜಾತ್ರೆ ಶುರುವಾಗಿದೆ. ಭಗವಂತ ಮೆಚ್ಚುವಂತೆ ಪವಿತ್ರ ಮತದಾನ ಮಾಡೋಣ.
ಅಟ್ ದಿ ಸೇಮ್ ಟೈಮ್, ಎಲ್ಲಾ ರೀತಿಯ ಅಪಾಯಕಾರಿ ವೈರಸ್‌ಗಳ ಬಗ್ಗೆ ನಮ್ಮದೊಂದು ಜಾಗ್ರತಿ ಇರಲಿ.
- ಅರವಿಂದ ಸಿಗದಾಳ್, ಮೇಲುಕೊಪ್ಪ.
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ