ಫೇಸ್ ಬುಕ್, ಇನ್ ಸ್ಟಾಗ್ರಾಮ್ ಸೇರಿ ಮೆಟಾ ಆ್ಯಪ್ ಗಳು ಏಕಾಏಕಿ ಲಾಗೌಟ್; ಸೇವೆಯಲ್ಲಿ ವ್ಯತ್ಯಯ

Upayuktha
0


ಬೆಂಗಳೂರು:  ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಮೆಟಾ ಸಂಸ್ಥೆಯ ಸರ್ವರ್ ಡೌನ್ ಆಗಿದ್ದು, ಜಗತಿನಾದ್ಯಂತ ಏಕಾಏಕಿ ಖಾತೆಗಳು ಲಾಗೌಟ್ ಆಗಿವೆ. ಇದರಿಂದ ಬಳಕೆದಾರರ ಕಂಗಲಾಗಿದ್ದು, ತಮ್ಮ ಖಾತೆ ಹ್ಯಾಕ್ ಆಗಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ.


ಹೌದು.. ಇಂದು (ಮಂಗಳವಾರ) ರಾತ್ರಿ 9 ಗಂಟೆ ಸುಮಾರಿನಲ್ಲಿ ಮೆಟಾ ಸಂಸ್ಥೆಯ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಖಾತೆಗಳು ಏಕಾಏಕಿ ಲಾಗೌಟ್ ಆಗಿದ್ದು, ಖಾತೆದಾರರು ಮತ್ತೆ ಲಾಗಿನ್ ಆಗಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಪಾಸ್ ವರ್ಡ್ ಬದಲಾವಣೆ ಮತ್ತು ತಪ್ಪು ಪಾಸ್ವರ್ಡ್ ನ ಸಂದೇಶಗಳು ಕಾಣಿಸುತ್ತಿದ್ದು, ಇದು ಗ್ರಾಹಕರು ತಮ್ಮ ಖಾತೆ ಹ್ಯಾಕ್ ಆಗಿದೆಯೇ ಎಂದು ಆತಂಕಗೊಂಡು ಪದೇ ಪದೇ ಪರಿಶೀಲಿಸುವಂತೆ ಮಾಡಿದೆ.

ಮತ್ತೊಂದೆಡೆ ರಾತ್ರಿ 9ರ ಸುಮಾರಿಗೆ ಏಕಾಏಕಿ ಫೇಸ್​ಬುಕ್​ ಹಾಗೂ ಇನ್ಸ್ಟಾಗ್ರಾಮ್ ಏಕಾಏಕಿ ತನ್ನಷ್ಟಕ್ಕೆ ತಾನೇ ಲಾಗೌಟ್ ಆಗಿದ್ದು, ಫೇಸ್ಬುಕ್​ ಪಾಸ್​ವರ್ಡ್​ ಮರೆತವರು ಪುನಃ ಲಾಗಿನ್ ಆಗುವುದಕ್ಕೆ ಪರದಾಡುವಂತಾಗಿದೆ. ಆದರೆ ಈ ಘಟನೆ ಕುರಿತು ಈ ವರೆಗೂ ಫೇಸ್ ಬುಕ್ ಸಂಸ್ಥೆ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.


ಫೇಸ್ ಬುಕ್ ಡೌನ್ ಬೆನ್ನಲ್ಲೇ ಖಾತೆದಾರರು ಟ್ವಿಟರ್ ಗೆ ದೌಡಾಯಿಸುತ್ತಿದ್ದು, ಈ ಸಮಸ್ಯೆ ತಮಗೆ ಮಾತ್ರವೇ ಇಲ್ಲ ಎಲ್ಲ ಖಾತೆದಾರಿಗೂ ಆಗುತ್ತಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top