ಬಸವೇಶ್ವರರ ಹೆಸರಿನಲ್ಲಿ‌ ಮತಯಾಚಿಸುವೆ: ಈಶ್ವರಪ್ಪ

Upayuktha
0

ಶಿವಮೊಗ್ಗ: ನಾನು ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುತ್ತೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಪುನರುಚ್ಚರಿಸಿಇದ್ದಾರೆ.


ಮಾಧ್ಯಮಗಳ ಜೊತೆ ಮಾತನಾಡಿ, ತಂದೆ ಮಕ್ಕಳ ಕೈಗೆ ಪಕ್ಷ ಸಿಕ್ಕಿದೆ. ಇದರಿಂದ ಕಾರ್ಯಕರ್ತರು ಪರದಾಡುತ್ತಿದ್ದಾರೆ. ಪಕ್ಷ ಉಳಿಸಲು ನನ್ನ ಈ ಹೋರಾಟ ನಿಶ್ಚಿತ ಆಗಿದೆ. ರಾಜ್ಯಾಧ್ಯಕ್ಷ ಸ್ಥಾನ ಲಿಂಗಾಯತರಿಗೆ ಕೊಡುವುದಿದ್ದರೆ ಯತ್ನಾಳ್ ಗೆ ಕೊಡಬಹುದಿತ್ತು ಎಂದು ತಿಳಿಸಿದರು.


ಒಕ್ಕಲಿಗರಿಗೆ ಕೊಡುವುದಾದರೆ ಸಿ ಟಿ ರವಿ ಇದ್ದರು. ಹಿಂದುಳಿದ ವರ್ಗದವರಿಗೆ ಕೊಡುವುದಾದರೆ ನನಗೆ ಕೊಡಬಹುದಿತ್ತು. ಪಕ್ಷ ಸಂಘಟನೆ ಇವರಿಗೆ ಕೊಡಬಹುದಿತ್ತು. ಆದರೆ ಅದು ಬಿಟ್ಟು ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರು ಎಂದರು.


ನಾನು ಹಿಂದುತ್ವದ ವಿಚಾರದ ಮೇಲೆ ಚುನಾವಣೆ ಮಾಡುತ್ತೇನೆ. ರಾಘವೇಂದ್ರ ಲಿಂಗಾಯತ ಅಂತಾ ಚುನಾವಣೆ ಮಾಡುತ್ತಾರೆ. ಅವರು ಲಿಂಗಾಯತರಿಗೆ ಏನು ಕೊಟ್ಟಿದ್ದಾರೆ. ಅವರಿಗೆ ಮಾತ್ರ ಲಿಂಗಾಯತರು ಸೀಮಿತ ಆಗಿಲ್ಲ. ನಮ್ಮ ಜೊತೆ ಕೂಡಾ ಈ ಸಮಾಜ ಇದೆ. ನಾನು ಪಕ್ಷೇತರ ಅಭ್ಯರ್ಥಿ ಘೋಷಣೆ ಬಳಿಕ ರಾಜ್ಯಾದ್ಯಂತ ಬೆಂಬಲ ಸಿಗುತ್ತಿದೆ ಎಂದರು.


ರಾಜ್ಯದ ವಿವಿಧ ಭಾಗಗಳಿಂದ ಬಂದು ಜನರು ಶಿವಮೊಗ್ಗ ಲೋಕಸಭೆ ಚುನಾವಣೆ ಮಾಡುತ್ತಾರೆ. ನಿನ್ನೆ ಸಭೆಯ ಬಳಿಕ ಉತ್ತಮ ಬೆಂಬಲ ಎಲ್ಲೆಡೆ ಯಿಂದ ಸಿಗುತ್ತಿದೆ. ಅಧಿಕೃತ ಚುನಾವಣೆ ಪ್ರಚಾರ. ಎರಡು ಮೂರು ದಿನದಲ್ಲಿ ಆರಂಭಿಸುತ್ತೇನೆ. ನಿನ್ನೆ ಇಷ್ಟೊಂದು ಜನರು ಸಭೆಯಲ್ಲಿ ಸೇರುತ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ ಎಂದರು.


ದೊಡ್ಡ ಸಂಖ್ಯೆಯಲ್ಲಿ ಜನರು ಬೆಂಬಲಿಗರು ಸೇರಿದ್ದು ನನಗೆ ಪ್ರೇರಣೆ ಆಯ್ತು. ಅವರ ಅಭಿಪ್ರಾಯ ಹಿನ್ನಲೆಯಲ್ಲಿ ನಾನು ಚುನಾವಣೆ ಸ್ಪರ್ಧಿಸುತ್ತಿದ್ದೇನೆ. ನನಗೆ ಚುನಾವಣೆ ನಿಲ್ಲಲು ಮೊದಲಿನಿಂದ ಒತ್ತಡ ಇತ್ತು ಎಂದರಲ್ಲದೆ, ರಾಜ್ಯ ಬಿಜೆಪಿ ಬಿಎಸ್ ವೈ ಮತ್ತು ಅವರ ಕುಟುಂಬದ ಮುಷ್ಠಿಯಲ್ಲಿ ಸಿಲುಕಿದೆ ಎಂದರು.


ಇದನ್ನು ಸರಿ ಮಾಡಲು ಈ ನಿರ್ಧಾರ ತೆಗೆದುಕೊಂಡಿರುವೆ. ನಾನು ಜಗಜ್ಯೋತಿ ಬಸವಣ್ಣನವರ ಅನುಯಾಯಿ ಆಗಿ ಕ್ಷೇತ್ರದಲ್ಲಿ ಮತ ಕೇಳುತ್ತೇನೆ ಎಂದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top