ಶಿಶಿಲ ಬಸದಿಗೆ ಡಿ. ವೀರೇಂದ್ರ ಹೆಗ್ಗಡೆ ಭೇಟಿ

Upayuktha
0


ಉಜಿರೆ
: ಧರ್ಮಸ್ಥಳದ ಧರ್ಮಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸೋಮವಾರ ಶಿಶಿಲ ಗ್ರಾಮದಲ್ಲಿರುವ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.



ಆಡಳಿತ ಮಂಡಳಿಯವರೊಂದಿಗೆ ವಿಚಾರಿಸಿ, ಬಸದಿಯ ಪ್ರಶಾಂತ ಪರಿಸರ ಮತ್ತು ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.



ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಡಾ. ಕೆ. ಜಯಕರ್ತಿ ಜೈನ್, ವಿಜಯಕುಮಾರ್, ಯುವರಾಜ ಪೂವಣಿ, ಫಣಿರಾಜ ಜೈನ್, ಜಿನರಾಜ ಪೂವಣಿ, ನಾಗಕನ್ನಿಕಾ, ಶಕುಂತಲಾ, ವತ್ಸಲಾ, ಅಪರ್ವ, ವಿಮಲಾ, ಮಂಜುಳಾ, ಚಂಪಾ ಮೊದಲಾದವರು ಉಪಸ್ಥಿತರಿದ್ದರು.



ಬಸದಿಯ ವಾರ್ಷಿಕೋತ್ಸವದ ಅಂಗವಾಗಿ ತೋರಣಮುಹರ್ತ, ವಿಮಾನಶುದ್ಧಿ, ಚತರ್ವಿಂಶತಿ ತೀರ್ಥಂಕರರ ಆರಾಧನೆ, ಉತ್ಸವ, ಲಕ್ಷಹೂವಿನ ಪೂಜೆ ಮೊದಲಾದ ಧರ್ಮಿಕ ವಿಧಿ-ವಿಧಾನಗಳು ನಡೆದವು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top