ಊಟ ಆಗುವವರೆಗೆ "ಅರವಿಂದ ಕೇಜ್ರಿವಾಲ್‌ರ ಮಾತನ್ನು ನಾನು ಅನು'ಮೋದಿ'ಸುತ್ತೇನೆ" ಅಂತ ಹೇಳಿ ದೆಹಲಿಯಲ್ಲಿ ಎಲ್ಲ ಗಂಡಸರು ಊಟ ಮಾಡ್ತಾ ಇದಾರಂತೆ!! ಮೋದಿ ಹೆಸರನ್ನು ಹೇಳಿದ ಹಾಗೂ ಆಯ್ತು, ವಿರೋಧಿಸಿದ ಹಾಗೂ ಆಯ್ತು. ಊಟವೂ ಆಯ್ತು!!!
**
ಅರವಿಂದ ಕೇಜ್ರಿವಾಲ್ ಮನೆಯಲ್ಲೇ ಈಗ ದೊಡ್ಡ ಸಮಸ್ಯೆ ಆಗಿದೆ!!
"ಮೋದಿ ಹೆಸರು ಎತ್ತಿದರೆ ಗಂಡನಿಗೆ ಊಟ ಕೊಡಬೇಡಿ" ಅಂತ ಹೇಳುವಾಗಲೂ ಮೊದಲ ಶಬ್ದ 'ಮೋದಿ' ಅಂತ ಇದ್ದುದರಿಂದ ಮಿಸಸ್ ಕೇಜ್ರಿವಾಲ್ ಗಂಡನಿಗೆ ಊಟ ಬಡಿಸಿಲ್ಲ!!!
**
"ನಿಮಗೆ ಇವತ್ತು ಊಟ ಇಲ್ಲ"
"ಯಾಕೆ? ನಾನು 'ಮೋದಿ' ಹೆಸರು ಹೇಳಿಲ್ವಲ್ಲ!!?"
"ಈಗ ಹೇಳಿದ್ರಲ್ಲ!!. ಮೋದಿ ಹೆಸರು ಹೇಳಿಲ್ವಲ್ಲ ಅಂತ ಹೇಳುವಾಗ ಮೋದಿ ಹೆಸರು ಹೇಳಿದ್ರಲ್ಲ!!. ಊಟ ಇಲ್ಲ"
**
ಲಾಗಾಯ್ತಿನಿಂದಲೂ, ಪ್ರಮೋದ್‌ನ ಅಪ್ಪ ಮಗನನ್ನು 'ಪ್ರಮೋದಿ' ಅಂತ ಕರೆಯುತ್ತಿರುವುದು .
ಮಗನ ಹೆಸರಲ್ಲಿ 'ಮೋದಿ' ಇದ್ದ ಕಾರಣ ಮೂರು ದಿನ ಆಯ್ತು, ಪ್ರ'ಮೋದಿ' ಅಪ್ಪನಿಗೆ ಊಟ ಇಲ್ಲ!!!
*
ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರಧಾನಿ ಹೆಸರು ಹೇಳಿ ದಿಕ್ಕಾರ ಕೂಗಿದ್ದಕ್ಕೆ, ಕೇಜ್ರಿವಾಲ್‌ರ ಸೂಚನೆಯಂತೆ, ಕಾರ್ಯಕರ್ತರ ಮನೆಯಲ್ಲಿ ಗಂಡಸರಿಗೆ ಊಟ ಬಡಿಸುತ್ತಿಲ್ಲವಂತೆ!!
"ಮೈ ಖಾವೂಂಗಾ, ಲೇಕಿನ್ ನಹಿ ಖಾನಾದೂಂಗಾ" ಅಂತ ಆಪ್ ಪತ್ನಿಯಂದಿರು ತಾವು ಮಾತ್ರ ಡಬಲ್ ಎಂಜಿನ್‌ಗೆ ಫ್ಯೂಯಲ್ ತುಂಬಿಸಿದಂತೆ, ಬಡಿಸಿಕೊಂಡು ಊಟ ತಿಂತಿದಾರಂತೆ!!!
**
ಹೆಂಡತಿ : "ಇವತ್ತು ಊಟಕ್ಕೆ ಪಾಯಸ, ಒಬ್ಬಟ್ಟು, ರಸಾಯನ ಎಲ್ಲ ಇದೆ, ನೀವೇ ಬಡಿಸಿಕೊಂಡು ಊಟ ಮಾಡಿ, ನಾನು ಕೊಡೋ ಹಾಗಿಲ್ಲ.
ಆಗಿದ್ದಿಷ್ಟೆ, ಬೆಳಗ್ಗೆ ಗಂಡ ಗಟ್ಟಿಯಾಗಿ ಪೇಪರ್ ಓದಿದ್ದು!!
*
"ರೀ, ಏನೂಂದ್ರೆ, ಮಗಳು ಫೋನಲ್ಲಿದಾಳೆ, ಭಾರತದ ಪ್ರಧಾನಿ ಯಾರು ಅಂತ ಉತ್ತರ ಬೇಕಂತೆ!!"
ಗಂಡ ಉತ್ತರಿಸಿದ.
ಹೆಂಡತಿ ಬ್ಲಾಂಕ್ ಕಾಲ್‌ನ ಫೋನ್‌ನ್ನು ಟೇಬಲ್ ಮೇಲಿಟ್ಟು, ಧಾರವಾಹಿ ನೋಡ್ತಾ ಕುಳಿತಳು. (ಮಗಳಿರುವ ಹಾಸ್ಟಲ್‌ನಲ್ಲಿ ಮೊಬೈಲ್ ಬಳಕೆ ನಿಷೇಧಿಸಿದ್ದು ಗಂಡನಿಗೆ ಮರೆತು ಹೋಗಿದ್ದು ಅವತ್ತಿನ ದುರಂತ!!)
ಮೂರು ದಿನದಿಂದ, ಒಂದಲ್ಲ ಒಂದು ರೀತಿಯಿಂದ ಶಿವಾರಾತ್ರಿ ಮುಂದುವರೆದಿದೆ!!!
ಹರೋ ಹರ.
**
ಮಧ್ಯಾಹ್ನ ಹನ್ನೆರಡು ಮೂವತ್ತು!!
ಮನೆಯ ಬಿಗ್ ಬಾಸ್ ಯಜಮಾನಿ ಗಂಡನನ್ನು ಪ್ರಶ್ನಿಸಿದಳು? ಇವತ್ತಿನ ಟಾಸ್ಕ್ ಜನರಲ್ ನಾಲೆಜ್ ಕ್ವಿಜ್.
"ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಬಾಗಿಯಾಗಿದ್ದಾರೆ ಎಂದು ಆರೋಪ ಹೊತ್ತಿರುವ ವ್ಯಕ್ತಿ ಯಾರು?"
ಲೇಡಿ ಬಾಸ್ ಮನೆಯಲ್ಲಿ ಗಂಡನ ಸ್ಥಾನ ಪಡೆದ ಸದಸ್ಯ "ನೀರವ್ 'ಮೋದಿ'" ಎಂದ.
ಲೌಡ್ ಸ್ಪೀಕರ್ ಸೌಂಡ್‌ನಲ್ಲಿ, ಬೇಸ್ ವಾಯಿಸಲ್ಲಿ ಅಡಿಗೆ ಮನೆಯಿಂದ ಬಂದ ಉತ್ತರ "ಅಭಿನಂದನೆಗಳು, ನೀವು ವಿಜೇತರಾಗಿದ್ದೀರಿ. ಆದರೆ ಕ್ರೇಜಿ ನಿಯಮದಂತೆ ನಿಮಗೆ ಈ ದಿನ ಈ ಬಿಗ್‌ಬಾಸ್ ಮನೆಯಲ್ಲಿ ಊಟ ಇರುವುದಿಲ್ಲ"
**
- ಅರವಿಂದ ಸಿಗದಾಳ್, ಮೇಲುಕೊಪ್ಪ.
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ