ಗೋವಿಂದ ದಾಸ ಕಾಲೇಜಿನಲ್ಲಿ ಪುಸ್ತಕ ಪ್ರೀತಿ ಪರಿಚಯ ಸರಣಿ ಕಾರ್ಯಕ್ರಮ

Chandrashekhara Kulamarva
0



ಸುರತ್ಕಲ್:  ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗವು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಪುಸ್ತಕ ಪ್ರೀತಿ ಪರಿಚಯ ಸರಣಿ ಕಾರ್ಯಕ್ರಮದಲ್ಲಿ, ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಹಿತಾ ಉಮೇಶ ರವರು ಪ್ರೊ. ಜಯರಾಜ್ ಅಮೀನ್ ಹಾಗು ವಿ.ವೆಂಕಟೇಶ್ ರವರು ಸಂಪಾದಿಸಿದ  ಅಂಬಿಗರ ಚೌಡಯ್ಯ : ವಚನ ಜಿಜ್ಞಾಸೆ ಎಂಬ ಪುಸ್ತಕವನ್ನು ಪರಿಚಯಿಸಿ ಇಂದಿನ ಕಾಲಘಟ್ಟಕ್ಕೆ  ಅಂಬಿಗ ಚೌಡಯ್ಯನವರ ವಚನಗಳು  ಪ್ರಸ್ತುತವಾಗಿದ್ದು ಅವರ ಚಿಂತನೆಗಳನ್ನು ಅರಿತುಕೊಳ್ಳಬೇಕಾಗಿದೆ ಎಂದರು.  


ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪಿ.ಕೃಷ್ಣಮೂರ್ತಿಯವರು , ಹಿತಾ ಉಮೇಶರವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ಪ್ರವೀಣ, ಪ್ರಾದ್ಯಾಪಕರುಗಳಾದ  ಡಾ. ಭಾಗ್ಯ ಲಕ್ಷ್ಮೀ , ಡಾ.ಆಶಾಲತಾ.ಪಿ,  ಡಾ. ಪ್ರಶಾಂತ ಬಿ,  ದನ್ಯಕುಮಾರ, ಕುಮಾರ ಮಾದರ,  ಪುನಿತಾ, ಶಿಲ್ಪಾರಾಣಿ, ಪ್ರತಿಕ್ಷಾ,  ದಯಾ ಸುವರ್ಣ, ಅಪೇಕ್ಷಾ ಭಂಡಾರಿ, ಗ್ರಂಥಪಾಲಕಿ ಡಾ.ಸುಜಾತಾ ಬಿ, ಗ್ರಂಥಾಲಯದ ಸಿಬ್ಬಂದಿಗಳು  ಉಪಸ್ಥಿತರಿದ್ದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಮಾನಸ ಸ್ವಾಗತಿಸಿ ವಂದಿಸಿದರು.          



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top