ಮಂಗಳೂರು: ಜಿಲ್ಲಾ ಗೃಹರಕ್ಷಕ ದಳ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇಲ್ಲಿ ಹೊಸದಾಗಿ ನೊಂದಾಯಿತರಾದ ಗೃಹರಕ್ಷಕರಿಗೆ ಮಾ.01ರಿಂದ 10 ರವರೆಗೆ ನಡೆಯುವ ವಾರ್ಷಿಕ ಮೂಲ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ನಿನ್ನೆ ಮಧ್ಯಾಹ್ನ ಜಿಲ್ಲಾ ಗೃಹರಕ್ಷಕ ದಳ ಕಛೇರಿ ಮೇರಿಹಿಲ್ ಮಂಗಳೂರು ಇಲ್ಲಿ ನಡೆಯಿತು.
ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಬಿ.ಪಿ. ದಿನೇಶ್ ಕುಮಾರ್ ಇವರು ಜ್ಯೋತಿ ಬೆಳಗಿಸಿ ಮೂಲ ತರಬೇತಿ ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿ, ಸಮವಸ್ತ್ರ ಧರಿಸಿದ ನಂತರ ಶಿಸ್ತಿನಿಂದ ಇಲಾಖೆಯ ನಿಯಮದಂತೆ ಕರ್ತವ್ಯ ನಿರ್ವಹಿಸಬೇಕು, ಗೃಹರಕ್ಷಕರು ಇಲ್ಲಿ ನೀಡುವ ಎಲ್ಲಾ ರೀತಿಯ ತರಬೇತಿಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ಸಮಾಜಕ್ಕಾಗಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು. ಎಲ್ಲರಿಗೂ ಇಂತಹ ಅವಕಾಶ ಸಿಗುವುದಿಲ್ಲ, ಸಿಕ್ಕಿರುವ ಅವಕಾಶವನ್ನು ಉತ್ತಮವಾಗಿ ಪಡೆದುಕೊಳ್ಳಿ ಎಂದು ನುಡಿದರು.
ಸಮಾರಂಭದ ಅಧ್ಯಕ್ಷರಾದ ಜಿಲ್ಲಾ ಸಮಾದೇಷ್ಟ ಡಾ|| ಮುರಲೀ ಮೋಹನ್ ಚೂಂತಾರು ಮಾತನಾಡಿ, ಈ ಹತ್ತು ದಿನದ ತರಬೇತಿಯಲ್ಲಿ ಲಾಠಿ ಡ್ರಿಲ್, ಮಾರ್ಚ್ ಫಾಸ್ಟ್, ಫೈರ್ ಫೈಟಿಂಗ್, ವೈರ್‍ಲೆಸ್ ತರಬೇತಿ ಮುಂತಾದ ತರಬೇತಿ ನೀಡಲಿದ್ದಾರೆ. 10 ದಿನಗಳಲ್ಲಿ ಎಲ್ಲಾ ವಿಚಾರಗಳ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ನೀಡಿದ ಮಾಹಿತಿ ಇದ್ದರೆ ನಿಮಗೆ ಮುಂಬರುವ ದಿನಗಳಲ್ಲಿ ಉತ್ತಮ ಸಮಾಜ ನಿರ್ಮಿಸಲು ಸಹಾಯವಾಗುವುದು. ಗೃಹರಕ್ಷಕರು ಸಮವಸ್ತ್ರ ಧರಿಸಿಕೊಂಡು ಯಾವ ರೀತಿ ಹಿರಿಯ ಅಧಿಕಾರಿಗಳೊಂದಿಗೆ ಗೌರವಿಸಬೇಕು, ಮಾತನಾಡಬೇಕು ಎನ್ನುವುದರ ಬಗ್ಗೆ ಪರಿಜ್ಞಾನ ಇರಬೇಕು. ಈ ಹಿನ್ನೆಲೆಯಲ್ಲಿ ನಿಮಗೆ ಮನದಟ್ಟು ಮಾಡುವ ಉದ್ದೇಶದಿಂದ ಮೂಲ ತರಬೇತಿ ಶಿಬಿರವನ್ನು ಆಯೋಜಿಸಿದ್ದೇವೆ ಎಂದು ನುಡಿದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಗೃಹರಕ್ಷಕದಳದ ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್‍ಶೇರಾ ಅವರು ಸ್ವಾಗತಿಸಿದರು. ಗೃಹರಕ್ಷಕದಳ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ. ಅವರು ಕಾರ್ಯಕ್ರಮ ನಿರೂಪಿಸಿದರು. ಯಶೋದಾ ಇವರು ಪ್ರಾರ್ಥನೆ ಮಾಡಿದರು. ಕಛೇರಿಯ ಅಧೀಕ್ಷಕ ಗೋಪಿನಾಥ್ ಬಿ.ಎನ್. ಇವರು ವಂದನಾರ್ಪಣೆಗೈದರು. ಹಿರಿಯ ಗೃಹರಕ್ಷಕರಾದ ಸುನಿಲ್ ಕುಮಾರ್, ಚಂಪಾ, ಆಶಾ, ಆಶಾಲತಾ, ನಂದಿನಿ, ಜೀವನ್‍ರಾಜ್ ಡಿ’ಸೋಜ, ಜ್ಞಾನೇಶ್ ಕೋಟ್ಯಾನ್, ದಿವಾಕರ್, ಸಂಜಯ್ ಹಾಗೂ 60 ಮಂದಿ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ