ಕನಕಗಿರಿ: ಐತಿಹಾಸಿಕ ಕನಗಿರಿ ಉತ್ಸವದಲ್ಲಿ ಮೊದಲನೇ ದಿನ ಬಾರಿ ಜನ ಸೋಮ ಸೇರಿತ್ತು. ಮುಖ್ಯಮಂತ್ರಿಗಳು ಕನಕಗಿರಿ ಉತ್ಸವವನ್ನು ಉದ್ಘಾಟಿಸಿದರು. ನಂತರ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಶಿವ ತಾಂಡವ ನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪುನಃ ಪ್ರಾರಂಭವಾದವು.
ಮಹೇಶ್ ಬಾಬು ಸುರ್ವೆ ನೇತೃತ್ವದ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯಿಂದ ನೃತ್ಯ ನಿರ್ದೇಶಕ ರಾಹುಲ್ ಅವರ ಮಾರ್ಗದರ್ಶನದಲ್ಲಿ ಶಿವ ತಾಂಡವ ಅಗತ್ಯವನ್ನು ಮನಮೋಹಕವಾಗಿ ಪ್ರದರ್ಶಿಸಿ ನೆರೆದಿದ್ದ ಸಹಸ್ರಾರು ಪ್ರೇಕ್ಷಕರ ಮನಸ್ಸನ್ನು ರಂಜಿಸಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಪ್ರಶಂಸೆಗೆ ಪಾತ್ರರಾದರು.
ಶೃತಿ ಹ್ಯಾಟ್ಟಿಯವರ ಸಂಗೀತ ಮಾರೆಪ್ಪ ದಾಸರರವರ ತತ್ವಪದಗಳು ಸದಾಶಿವ್ ಪಾಟೀಲ್ ಅವರ ವಚನ ಸಂಗೀತ ಗೀತಪ್ರಿಯ ಅವರ ಸಮೂಹ ನೃತ್ಯ, ಮಹಮದ್ ಖಿಲ್ಲೆದಾರರ ಜನಪದ ಗಾಯನ, ಅರ್ಜುನ್ ಇಟಿಗೀ ಅವರ ಯುಗಳ ಗಾಯನ, ನಟಿ ಹರ್ಷಿಕಾ ಪೂರ್ಣಚ್ಚೆ ಅವರ ನೃತ್ಯ ವೈಭವ,ರಾಜೇಶ್ ಕೃಷ್ಣನ್ ಅವರ ಸ್ಟಾರ್ ಮ್ಯೂಸಿಕಲ್ ನೈಟ್, ತನಿಷಾ ಕುಪ್ಪಂಡ ಅವರ ನೃತ್ಯ ಕಾಮಿಡಿ ಕಿಲಾಡಿಗಳ ಹಾಸ್ಯ ಕನಕಗಿರಿ ಉತ್ಸವದಲ್ಲಿ ನರೆದಿದ್ದ ಸಹಸ್ರಾರು ಪ್ರೇಕ್ಷಕರನ್ನ ರಂಜಿಸಿದವು...
ಕನಕಗಿರಿ ಉತ್ಸವದ ವೇದಿಕೆಯಲ್ಲಿ ಸುವರ್ಣಗಿರಿ ಕ್ಷೇತ್ರದ ಡಾ.ಚನ್ನಮಲ್ಲ ಮಹಾಸ್ವಾಮೀಜಿ, ಸುಳೇಕಲ್‌ನ ಕಲ್ಮಠದ ಭುವನೇಶ್ವರ ದಿವ್ಯ ಸಾನಿಧ್ಯ ವಹಿಸಿದ್ದರು. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ, ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಹನುಮನಗೌಡ ಪಾಟೀಲ್ , ಸಂಸದ ಕರಡಿ ಸಂಗಣ್ಣ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಜನಾರ್ಧನ್ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯ್ಕ್, ಶರಣಗೌಡ ಪಾಟೀಲ ಬಯ್ಯಾಪುರ, ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ, ಇಕ್ಬಾಲ್ ಅನ್ಸಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಅಜಯ್ ನಾಗಭೂಷಣ್, ಕನಕಗಿರಿ ರಾಜವಂಶಸ್ಥ ರಾಜ ನವೀನ್‌ಚಂದ್ರ ನಾಯಕ ಹುಲಿ ಹೈದರ್, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿ.ಪಂ.ಸಿಇಓ ರಾಹುಲ್ ರತ್ನಂ ಪಾಂಡೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ,ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ,ಕೊಪ್ಪಳ ಉಪ ವಿಭಾಗ ಅಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗತ್ತಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅದ್ಭುತವಾಗಿ ಮನ ಮೋಹಕವಾಗಿ ಧನಂಜಯ್ ಬೆಂಗಳೂರು ಹಾಗೂ ಶೃತಿಯವರು ಜಂಟಿಯಾಗಿ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ