ಬದಿಯಡ್ಕ: ಬದಿಯಡ್ಕದ ಇಕ್ಕೇರಿ ಶ್ರೀ ಶಂಕರನಾರಾಯಣ ದೇವರ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ರಂಗಸಿರಿ ಸಾಂಸ್ಕೃತಿಕ ವೇದಿಕೆ(ರಿ) ಇದರ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯಿತು. ಯಕ್ಷಗಾನ ಗುರು ಶ್ರೀ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಅವರ ನಿರ್ದೇಶನದಲ್ಲಿ ಸುದರ್ಶನ ವಿಜಯ ಹಾಗೂ ತರಣಿಸೇನ ಕಾಳಗ ಪ್ರಸಂಗಗಳ ಪ್ರದರ್ಶನ ನೀಡಿದರು. ಸುದರ್ಶನ ವಿಜಯ ಪ್ರಸಂಗದಲ್ಲಿ ದೇವೇಂದ್ರನಾಗಿ ಶಶಿಧರ ಕುದಿಂಗಿಲ, ದೇವೇಂದ್ರ ಬಲಗಳಾಗಿ ಶ್ರೇಯಾ ಹಾಗೂ ಸುಕೃತಾ, ಶತ್ರುಪ್ರಸೂದನನಾಗಿ ಶರತ್, ರಾಕ್ಷಸ ಬಲಗಳಾಗಿ ಮೋಕ್ಷಾ ಹಾಗೂ ವಿಷ್ಣು,ಈಶ್ವರನಾಗಿ ಶ್ರಾವ್ಯಾ, ವಿಷ್ಣುವಾಗಿ ಮೇಘನಾ ಕುಡಾಣ, ಲಕ್ಷ್ಮಿಯಾಗಿ ಶರಣ್ಯಾ, ಸುದರ್ಶನನಾಗಿ ಅಭಿಜ್ಞಾ ಭಟ್ ಬೊಳುಂಬು ಪಾತ್ರಗಳಿಗೆ ಜೀವ ತುಂಬಿದರು.
ತರಣಿಸೇನ ಕಾಳಗದಲ್ಲಿ ತರಣಿ ಸೇನನಾಗಿ ವಿದ್ಯಾ ಆನಂದ್ ಕೆಕ್ಕಾರು, ಶ್ರೀರಾಮನಾಗಿ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ, ವಿಭೀಷಣನಾಗಿ ಶಶಿಧರ ಕುದಿಂಗಿಲ ಹಾಗೂ ಸರಮೆಯಾಗಿ ಸುಧಾ ಪಾತ್ರಗಳಲ್ಲಿ ಪ್ರಬುದ್ಧತೆ ಮೆರೆದರು.
ಭಾಗವತರಾಗಿ ದಯಾನಂದ ಕೋಡಿಕ್ಕಲ್, ಚೆಂಡೆ ಮದ್ದಳೆಗಳಲ್ಲಿ ಸುದರ್ಶನ ಕಲ್ಲೂರಾಯ, ಕೃಷ್ಣಮೂರ್ತಿ ಎಡನಾಡು ಹಾಗೂ ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಉತ್ತಮ ಹಿಮ್ಮೇಳ ಸಾಥಿ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ