ಅವಕಾಶದ ಸದ್ಬಳಕೆ ಮಾಡಿ : ವಿವೇಕ್ ಆಳ್ವ

Upayuktha
0

ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ‘ಪ್ರಶಸ್ತಿ ದಿನ’



ಮೂಡುಬಿದಿರೆ: ಜೀವನದಲ್ಲಿ ಸಿಗುವ ಪ್ರತಿ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವುದು ನಮ್ಮ ಮೊದಲ ಆಯ್ಕೆ ಆಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.


ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯು ಶುಕ್ರವಾರ ಕನ್ನಡ ಮಾಧ್ಯಮ ಸಭಾಂಗಣದಲ್ಲಿ ಹಮ್ಮಿಕೊಂಡ ‘ಪ್ರಶಸ್ತಿ ದಿನ 2023-24' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಪೆನ್ಸಿಲ್ ನಿಂದ ಗೀಚಲುಬಹುದು ಅಂತೆಯೇ ಅತ್ಯುತ್ತಮವಾಗಿ ಬರೆಯಬಹುದು. ಅದನ್ನು ಗೀಚುವ ಬದಲು ಬರವಣಿಗೆಯಲ್ಲಿ ಬಳಸಬೇಕಾದುದ್ದು ಮಾತ್ರ ನಮ್ಮ ಆಯ್ಕೆ ಎಂದರು.   


ಹುಟ್ಟುಹಬ್ಬದ ಸಂಭ್ರಮಕ್ಕೆ ಕೇಕ್ ಕತ್ತರಿಸುವ ಬದಲು, ಗಿಡಗಳನ್ನು ತರಿಸುವ ಮತ್ತು ಅದನ್ನು ಬೆಳೆಸಲು, ಗುರುತಿಸಲು ಕಲಿಯುವ ಎಂದು ಹೇಳಿದ ಅವರು ಮಕ್ಕಳನ್ನು ಪ್ರೋತ್ಸಾಹಿಸಿದರು.


ಆಳ್ವಾಸ್ ಶಾಲೆಗಳ ಆಡಳಿತಾಧಿಕಾರಿ ಪ್ರೀತಮ್ ಕುಂದರ್, ಸಹಾಯಕ ಆಡಳಿತಾಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ, ಆಳ್ವಾಸ್ ಕಿಂಡರ್ ಗಾರ್ಡನ್   ಆಡಳಿತಾಧಿಕಾರಿ ನಿತೇಶ್ ಮಾರ್ನಾಡ್, ಶಾಲೆಯ ಮುಖ್ಯಶಿಕ್ಷಕಿ ರಂಜಿಕಾ ರೈ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಇದ್ದರು.


ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 


ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಆಯಿಷಾ ನಿರೂಪಿಸಿದರು. ಅದ್ವಿತ್ ಕುಮಾರ್ ಸ್ವಾಗತಿಸಿ, ಪಿಯೂಷ್ ವಂದಿಸಿದರು.   



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top