ಆಳ್ವಾಸ್‌ನಲ್ಲಿ ಮಹಿಳಾ ದಿನಾಚರಣೆಯ ಪೂರ್ವಭಾವಿ ಸ್ಪರ್ಧೆ

Upayuktha
0

ಚರ್ಚೆಯಲ್ಲಿ ಸೃಷ್ಟಿ ಶೆಟ್ಟಿ ಪ್ರಥಮ 



ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪೂರ್ವಭಾವಿಯಾಗಿ ವಾರಪೂರ್ತಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ಭಾಗವಾಗಿ ಚರ್ಚೆ, ಛದ್ಮವೇಷ ಹಾಗೂ ಕವನ ರಚನೆ ಸ್ಪರ್ಧೆಗಳು ಆಳ್ವಾಸ್ ಕಾಲೇಜಿನಲ್ಲಿ ನಡೆಯಿತು. 


ಪದವಿ ಪೂರ್ವ ವರೆಗೆ ಹಾಗೂ ಪದವಿ ಮತ್ತು ಮೇಲ್ಪಟ್ಟ ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡರು. 


ಚರ್ಚಾ ಸ್ಪರ್ಧೆಯಲ್ಲಿ ಪ್ರಕೃತಿಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಸೃಷ್ಟಿ ಶೆಟ್ಟಿ ಪ್ರಥಮ, ಆಳ್ವಾಸ್ ಕಾಲೇಜಿನ ಬಿಬಿಎ ವಿದ್ಯಾರ್ಥಿ ಶಶಾಂಕ್ ದ್ವಿತೀಯ ಹಾಗೂ ಶ್ಯಾಮ್ ಪ್ರಸಾದ್ ತೃತೀಯ ಬಹುಮಾನ ಪಡೆದರು.


ಚರ್ಚಾ ಸ್ಪರ್ಧೆಯಲ್ಲಿ ಸೌಂದರ್ಯ ಹಾಗೂ ಕಾಸ್ಮೆಟಿಕ್ಸ್ ಕ್ಷೇತ್ರ ಮಹಿಳೆಯರಿಗೆ ವರದಾನವೇ?, ವಿವಾಹಿತ ಮಹಿಳೆಯರಿಗೆ ವೃತ್ತಿ ಹಾಗೂ ಸಾಂಸಾರಿಕ ಜವಾಬ್ದಾರಿಗಳು, ಚಲನಚಿತ್ರಗಳಲ್ಲಿ ಬಿಂಬಿಸುವ ಮಹಿಳಾ ಚಿತ್ರಣಗಳು ನೈಜತೆ ಸಾರುತ್ತವೆಯೇ? ಹಾಗೂ ಸರ್ಕಾರದ ಮೀಸಲಾತಿ ಹಾಗೂ ಮಹಿಳಾ ಯೋಜನೆಗಳು ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿವೆಯೇ? ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆದವು. 


ಭಾರತೀಯ ಐತಿಹಾಸಿಕ ಮಹಿಳೆಯರನ್ನು ಪ್ರತಿಬಿಂಬಿಸುವ ಛದ್ಮವೇಷ ಸ್ಪರ್ಧೆಯಲ್ಲಿ ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸ್ ಕಾಲೇಜಿನ ಎಂಎಲ್‌ಟಿ ವಿದ್ಯಾರ್ಥಿನಿ ಅಕ್ಷತಾ ಕುಲಾಲ್ ಪ್ರಥಮ, ಜಿಎನ್‌ಎಂ ವಿದ್ಯಾರ್ಥಿನಿ ಜೀವಿಕಾ ದ್ವಿತೀಯ ಹಾಗೂ ಬಿಎಚ್‌ಎ ವಿದ್ಯಾರ್ಥಿನಿ ರಾಜಶ್ರೀ ತೃತೀಯ ಸ್ಥಾನ ಪಡೆದದರು. 


ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆ ಕುರಿತು ಪದವಿ ಪೂರ್ವ ವರೆಗೆ ಹಾಗೂ ಪದವಿ ಮತ್ತು ಮೇಲ್ಪಟ್ಟ ಎರಡು ವಿಭಾಗಗಳಲ್ಲಿ ಕವನ ರಚನೆ ಹಾಗೂ ವಾಚನ ಸ್ಪರ್ಧೆ ನಡೆಯಿತು. 


ಪದವಿ ಪೂರ್ವ ವರೆಗಿನ ವಿಭಾಗದಲ್ಲಿ ಆಳ್ವಾಸ್ ಕೇಂದ್ರೀಯ ಶಾಲೆಯ ರೋಹಿತ್ ಸಂದೀಪ್ ಪ್ರಥಮ, ಇದೇ ಶಾಲೆಯ ಶ್ವೇತಾ ಹಾಗೂ ದೀಕ್ಷಾ ಎಂ.ಬಿ. ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. 


ಪದವಿ ಮತ್ತು ಮೇಲ್ಪಟ್ಟ ವಿಭಾಗದಲ್ಲಿ ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ರಕ್ಷಿತಾ ಎಚ್.ಸಿ., ಆಳ್ವಾಸ್ ಫಿಸಿಯೋಥೆರಪಿ ಕಾಲೇಜಿನ ತೇಜಾಕ್ಷ ದ್ವಿತೀಯ ಹಾಗೂ ಇದೇ ಕಾಲೇಜಿನ ಸ್ಪೂರ್ತಿ ಶೆಟ್ಟಿ ತೃತೀಯ ಸ್ಥಾನ ಪಡೆದರು. 


ಪದವಿ ಪೂರ್ವ ವರೆಗಿನ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಅನನ್ಯಾ ಪ್ರಥಮ ಹಾಗೂ ಸಾಯಿ ಕಾರ್ತಿಕ್ ದ್ವಿತೀಯ ಮತ್ತು ಆಳ್ವಾಸ್ ಕೇಂದ್ರೀಯ ಶಾಲೆಯ ಧ್ರುತಿ ಬಿ.ಎಸ್. ತೃತೀಯ ಸ್ಥಾನ ಪಡೆದರು. 


ಪದವಿ ಮತ್ತು ಮೇಲ್ಪಟ್ಟ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ವಿನೀತ್ ವಾಸ್ ಪ್ರಥಮ, ಆಳ್ವಾಸ್ ಫಿಸಿಯೋಥೆರಪಿ ಕಾಲೇಜಿನ ವಾಂಚಿಬೆನಿ ಎಂ. ಮರ‍್ರಿ ದ್ವಿತೀಯ ಹಾಗೂ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಎಸ್. ಅಶ್ವಿನಿ ತೃತೀಯ ಸ್ಥಾನ ಪಡೆದರು. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top