ಸಾರ್ಥಕ ಸಮಾಜಸೇವೆಗೆ ಶ್ರೇಷ್ಠ ಪುರಸ್ಕಾರ

Upayuktha
0

ನಿತ್ಯಾನಂದ ಒಳಕಾಡು, ವಿಶು ಶೆಟ್ಟಿಗೆ ಅಯೋಧ್ಯಾ ಮಂಡಲೋತ್ಸವ ರಜತಕಲಶ ಪ್ರದಾನ 



ಅಯೋಧ್ಯೆ: ರಾಮರಾಜ್ಯದ ಪರಿಕಲ್ಪನೆಯಲ್ಲಿ ದೀನದಲಿತರ, ಅನಾಥ ಜನರ ಪಶು ಪಕ್ಷಿ ಪ್ರಾಣಿಗಳ ಶುಶ್ರೂಷೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಉಡುಪಿಯ ಇಬ್ಬರು ಸಾಮಾಜಿಕ ಧುರೀಣರಿಗೆ ಅಯೋಧ್ಯಾ ಮಂಡಲೋತ್ಸವ ಪುರಸ್ಕಾರದ ಮೂಲಕ ಶ್ರೇಷ್ಠ ಗೌರವ ಪ್ರಾಪ್ತಿಯಾಗಿದೆ.


ನಿತ್ಯಾನಂದ ಒಳಕಾಡು ಮತ್ತು ವಿಶು ಶೆಟ್ಟಿ ಅಂಬಲಪಾಡಿಯವರಿಗೆ ಅಯೋಧ್ಯಾ ರಾಮಮಂದಿರ ಟ್ರಸ್ಟಿಗಳಾದ ಶ್ರೀ ಪೇಜಾವರ ಶ್ರೀಗಳು ತಮ್ಮ‌ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀರಾಮ ದೇವರ ಮಂಡಲೋತ್ಸವದಲ್ಲಿ ಶುಕ್ರವಾರ ನಡೆದ ಉತ್ಸವದಲ್ಲಿ ಶ್ರೀರಾಮ ದೇವರಿಗೆ ಅಭಿಷೇಕ ಮಾಡಿದ ತಲಾ ಒಂದು ಕೆಜಿ ತೂಕದ ಒಂದು ಲಕ್ಷ ಮೌಲ್ಯದ ರಜತ ಕಲಶವನ್ನು ನೀಡಿ ಈರ್ವರ ಸಾಮಾಜಿಕ ಕಾರ್ಯಗಳನ್ನು ಅಭಿನಂದಿಸಿ ಸಂಮಾನಿಸಿದ್ದಾರೆ.


ಶ್ರೀಗಳು ಇವರೀರ್ವರನ್ನೂ ಶ್ರೀಮಠದ  ವೆಚ್ಚದಲ್ಲೇ ವಿಮಾನದಲ್ಲಿ ಅಯೋಧ್ಯೆಗೆ ಬರಮಾಡಿಕೊಂಡು ಪುರಸ್ಕರಿಸಿ ಅವರ ಸಮಾಜಕಾರ್ಯಗಳನ್ನು ಕೊಂಡಾಡಿದ್ದಾರೆ.


ರಾಮಮಂದಿರವಾಗಿದೆ ಇನ್ನು ರಾಮರಾಜ್ಯವಾಗಬೇಕು ಅದಕ್ಕಾಗಿ ಎಲ್ಲರೂ ದೀನಜನರ ಸೇವೆ ಗೋಸೇವೆಗಳಿಗೆ ಮುಂದಾಗಿ ಎಲ್ಲರ ಕ್ಷೇಮ ಸಮಾಜದ ಸುಖ ಸಮೃದ್ಧಿಗಾಗಿ ಶ್ರಮಿಸಿಬೇಕೆಂದು ಎಲ್ಲೆಡೆ ಕರೆನೀಡುತ್ತಿರುವ ಶ್ರೀಗಳು, ಆ ಕಾರ್ಯಗಳನ್ನೇ ದಶಕಗಳಿಂದ ನಿಸ್ಮೃಹವಾಗಿ ನಡೆಸುತ್ತಿರುವ ಒಳಕಾಡು ಮತ್ತು ವಿಶು ಶೆಟ್ಟರನ್ನು ಸಂಮಾನಿಸಿರುವುದು.‌ ಅತ್ಯಂತ ವಿಶೇಷವಾಗಿದೆ. ಉಡುಪಿ ಲಯ ಇಬ್ಬರು ಸಾಮಾಜಿಕ ಮುಖಂಡರ ಸೇವಾ ಕಾರ್ಯಗಳಿಗೆ ಅಯೋಧ್ಯೆಯಲ್ಲಿ ಪುರಸ್ಕಾರ ದೊರೆತಿರುವುದು ಉಡುಪಿಗೇ ಸಂದ ಗೌರವವೂ ಆಗಿದೆ.


ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ರಘುಪತಿ ಭಟ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಅಂತಾರಾಷ್ಟ್ರೀಯ ಖ್ಯಾತಿಯ  ವಯಲಿನ್ ಮಾಂತ್ರಿಕ ಡಾ ಎಲ್ ಸುಬ್ರಮಣಿಯಮ್, ಶ್ರೀಗಳ ಆಪ್ತರಾದ ವಾಸುದೇವ ಭಟ್ ಪೆರಂಪಳ್ಳಿ, ಶ್ರೀನಿವಾಸ ಪ್ರಸಾದ್, ವಿಷ್ಣುಮೂರ್ತಿ ಆಚಾರ್ಯ, ಕೃಷ್ಣಭಟ್ ಮೊದಲಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top