ಧರ್ಮತ್ತಡ್ಕ: ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳು ಧರ್ಮತ್ತಡ್ಕ ಇಲ್ಲಿ ಈ ವರ್ಷ ವೃತ್ತಿ ಜೀವನದಿಂದ ವಿರಮಿಸುತ್ತಿರುವ ಅಧ್ಯಾಪಿಕೆಯರಿಗೆ ವಿದಾಯಕೂಟವನ್ನು ಏರ್ಪಡಿಸಲಾಯಿತು.
ವಿದ್ಯಾಸಂಸ್ಥೆಗಳ ಗೌರವ ಪ್ರಬಂಧಕರಾಗಿರುವ ಶ್ರೀಮತಿ ಶಾರದಾ ಅಮ್ಮ ಸಭಾಧ್ಯಕ್ಷತೆಯನ್ನು ವಹಿಸಿದರು. ಪ್ರಾಂಶುಪಾಲ ಶ್ರೀ ಎನ್ ರಾಮಚಂದ್ರ ಭಟ್ , ಶಾಲಾ ವ್ಯವಸ್ಥಾಪಕ ಶ್ರೀ ಶಂಕರನಾರಾಯಣ ಭಟ್, ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕುಡಾಲ್ ,ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ, ಯು.ಪಿ ಶಾಲಾ ವ್ಯವಸ್ಥಾಪಕಿ ಶ್ರೀಮತಿ ವಿಜಯಶ್ರೀ, ಪಿ.ಟಿ.ಎ ಅಧ್ಯಕ್ಷ ಶ್ರೀ ಅಶೋಕ , ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ,ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ರಾಮಚಂದ್ರ ಭಟ್ ಉಳುವಾನ ಶುಭವನ್ನು ಹಾರೈಸಿದರು.
ಈ ವರ್ಷ ನಿವೃತ್ತಿ ಹೊಂದಲಿರುವ ಹೈಸ್ಕೂಲ್ ಇಂಗ್ಲೀಷ್ ಅಧ್ಯಾಪಿಕೆ ಶ್ರೀಮತಿ ಉಷಾ ಕೆ.ಆರ್ ಹಾಗೂ ಯು.ಪಿ ಶಾಲಾ ಹಿಂದಿ ಅಧ್ಯಾಪಕಿ ಶ್ರೀಮತಿ ಪರಮೇಶ್ವರಿ ಅಮ್ಮ ಇವರಿಗೆ ಹೈಸ್ಕೂಲ್ ,ಹೈಯರ್ ಸೆಕೆಂಡರಿ ಹಾಗೂ ಯು.ಪಿ ಶಾಲಾ ವಿಭಾಗದಿಂದ ಸನ್ಮಾನಿಸಲಾಯಿತು. ಶ್ರೀಮತಿ ಈಶ್ವರಿ.ಡಿ ಹಾಗೂ ಶ್ರೀ ರಾಮಮೋಹನ ಚೆಕ್ಕೆ ಸನ್ಮಾನ ಪತ್ರ ವಾಚಿಸಿದರು. ಸಹೋದ್ಯೋಗಿಗಳು ಹಾಗೂ ಸನ್ಮಾನಿತರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು.ಹೈಸ್ಕೂಲ್ ಮುಖ್ಯೋಪಾಧ್ಯಾಯ ಶ್ರೀ ಈ.ಎಚ್ ಗೋವಿಂದ ಭಟ್ ಸ್ವಾಗತಿಸಿ ಯು.ಪಿ ಮುಖ್ಯೋಪಾಧ್ಯಾಯ ಶ್ರೀ ಮಹಾಲಿಂಗ ಭಟ್ ವಂದಿಸಿದರು.ಶ್ರೀಮತಿ ಈಶ್ವರಿ ಡಿ ಹಾಗೂ ಶ್ರೀಮತಿ ಶ್ವೇತ ಕುಮಾರಿ ಎಂ ಪ್ರಾರ್ಥಿಸಿದರು.ಶ್ರೀ ಶಿವನಾರಾಯಣ ಭಟ್,ಶ್ರೀ ಶಶಿಧರ ಕೆ, ಶ್ರೀ ಪ್ರಶಾಂತ ಹೊಳ್ಳ, ಶ್ರೀ ಶಿವಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ