ಮಂಗಳೂರು: ಭಾರತದ ಪ್ರಮುಖ ಖಾಸಗಿ ಜೀವ ವಿಮಾ ಸಂಸ್ಥೆಗಳಲ್ಲಿ ಒಂದಾದ ಟಾಟಾ ಎಐಎ, ಸಂಪತ್ತು ಗಳಿಸಲು ಬಯಸುವ ಹೂಡಿಕೆದಾರರಿಗೆ ಸತತವಾಗಿ ಹೊಸ ಹೂಡಿಕೆಯ ಅವಕಾಶಗಳನ್ನು ಪರಿಚಯಿಸುತ್ತಲೇ ಬಂದಿದೆ. ಹಲವಾರು ವೈವಿಧ್ಯಮಯ ಥೀಮ್ ಗಳಲ್ಲಿ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಿರುವ ಟಾಟಾ ಎಐಎ 8 ಯುನಿಟ್ ಲಿಂಕ್ಡ್ ಉತ್ಪನ್ನಗಳನ್ನು ಪರಿಚಯಿಸಿದೆ.
ಈ ಉತ್ಪನ್ನಗಳು ಬಹು ಕಾಲಾವಧಿಯಲ್ಲಿ ಉತ್ತಮ ಆದಾಯವನ್ನು ಗಳಿಸಿವೆ, ಸ್ಥಿರವಾಗಿ ಅಪೂರ್ವ ಕಾರ್ಯಕ್ಷಮತೆ ಪ್ರದರ್ಶಿಸಿವೆ. ಈ ಅಪೂರ್ವ ಕಾರ್ಯಕ್ಷಮತೆಯಿಂದ ಈ ಫಂಡ್‌ಗಳಿಗೆ ಹೆಚ್ಚಿನ ರೇಟಿಂಗ್ ದೊರೆತಿದೆ. ಟಾಟಾ ಎಐಎ ಲೈಫ್‌ನ ಎಯುಎಂಗೆ ಜಾಗತಿಕ ಮಾನದಂಡ ಸಂಸ್ಥೆ ಮಾರ್ನಿಂಗ್ ಸ್ಟಾರ್ ರೇಟಿಂಗ್ಸ್* 5 ವರ್ಷದ ಆಧಾರದ ಮೇಲೆ 4 ಸ್ಟಾರ್ ಅಥವಾ 5 ಸ್ಟಾರ್ ರೇಟಿಂಗ್ ನೀಡಿದೆ ಎಂದು ಟಾಟಾ ಎಐಎ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ಹೂಡಿಕೆ ಅಧಿಕಾರಿ (ಸಿಐಓ) ಹರ್ಷದ್ ಪಾಟೀಲ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಟಾಟಾ ಎಐಎಯ ಹೂಡಿಕೆ ತತ್ವವು ಪಾಲಿಸಿದಾರರಿಗೆ ಉನ್ನತ, ಸ್ಥಿರ ಮತ್ತು ಅಪಾಯ-ಹೊಂದಾಣಿಕೆಯ ದೀರ್ಘಾವಧಿಯ ಆದಾಯವನ್ನು ತಲುಪಿಸುವ ಬದ್ಧತೆಯನ್ನು ಹೊಂದಿದೆ. ಅತ್ಯುತ್ತಮ ಸಂಶೋಧನಾ ಪ್ರಕ್ರಿಯೆಯಿಂದ ಸಿದ್ಧವಾದ ಬಾಟಮ್-ಅಪ್ ಸ್ಟಾಕ್-ಪಿಕ್ಕಿಂಗ್ ತಂತ್ರವನ್ನು ಅಳವಡಿಸಿಕೊಂಡಿದ್ದು, ಟಾಟಾ ಎಐಎ ಉತ್ತಮ ಹೂಡಿಕೆ ಅಭ್ಯಾಸಗಳನ್ನು ಪಾಲಿಸುತ್ತಾ ಸ್ಥಿರವಾಗಿ ಉಳಿದಿದೆ ಮತ್ತು ಮಾರುಕಟ್ಟೆ ಚಕ್ರಗಳಿಂದ ವಿಚಲಿತರಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ