ಶೇಷಾದ್ರಿಪುರದ ರಾಯರ ಮಠದಲ್ಲಿ ಗುರುಗಳ 428ನೇ ವರ್ಧಂತಿ - ಲಕ್ಷ ಪುಷ್ಪಾರ್ಚನೆ

Upayuktha
0


ಬೆಂಗಳೂರು
: ಪರಮಪೂಜ್ಯ ಶ್ರೀ  ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶೇಷಾದ್ರಿಪುರದ ಪ್ಲಾಟ್ ಫಾರಂ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾರ್ಚ್ 16,  ಶ್ರೀ ರಾಘವೇಂದ್ರ ಗುರುಸಾರ್ವಭೌಮರ  428ನೇ ಜನ್ಮದಿನೋತ್ಸವದ ಪ್ರಯುಕ್ತ ಬೆಳಿಗ್ಗೆ ಫಲ-ಪಂಚಾಮೃತ ಅಭಿಷೇಕ, ಗುರುಗಳ ಅಷ್ಟೋತ್ತರ ಪಾರಾಯಣ, ವಾಯುಸ್ತುತಿ ಪಾರಾಯಣ, ವಿಷ್ಣುಸಹಸ್ರನಾಮ ಪಾರಾಯಣ, ವಿಧವಿಧವಾದ ಹೂಗಳಿಂದ ಲಕ್ಷ ಪುಷ್ಪಾರ್ಚನೆ, ಶ್ರೀ ಉಡುಪಿ ಕೃಷ್ಣಾಚಾರ್ಯರಿಂದ "ಶ್ರೀಮದ್ಭಾಗವತ" ಪ್ರವಚನದ ಮಂಗಳ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿತರಣೆ  ಜರುಗಿದವು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಸುಷ್ಮಾ ಶ್ರೇಯಸ್ ಅವರು ತಮ್ಮ ಸಂಗಡಿಗರೊಂದಿಗೆ ಹರಿದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.




إرسال تعليق

0 تعليقات
إرسال تعليق (0)
To Top