ಫಿಜಾ ಬೈ ನೆಕ್ಸಸ್ ನಲ್ಲಿ 25ರಂದು 'ನಾಯಿದ ಬೀಲ' ನಾಟಕ

Upayuktha
0


ಮಂಗಳೂರು: ಹಾಸ್ಯಲಹರಿ ಸೃಷ್ಟಿಸುವ ಮೂಲಕ ಗ್ರಾಹಕ ಸಂತೃಪ್ತಿ ಬಗೆಗಿನ ತನ್ನ ಬದ್ಧತೆಯ ಭಾಗವಾಗಿ ಫಿಜಾ ಬೈ ನೆಕ್ಸಸ್ ಮಾಲ್ ಈ ತಿಂಗಳ 25ರಂದು ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೆ 'ನಾಯಿದ ಬೀಲ' ಎಂಬ ಹಾಸ್ಯನಾಟಕ ಪ್ರದರ್ಶನ ಆಯೋಜಿಸಿದೆ.


ಹೆಸರಾಂತ ಹಾಸ್ಯ ಕಲಾವಿದ ದೇವದಾಸ ಕಾಪಿಕಾಡ್ ಮತ್ತವರ ತಂಡ ಪ್ರಸ್ತುತಪಡಿಸಲಿರುವ ಈ ತುಳು ಹಾಸ್ಯ ನಾಟಕ, ನಿಮಗೂ ನಿಮ್ಮ ಪ್ರೀತಿ ಪಾತ್ರರಿಗೆ, ಸ್ನೇಹಿತರಿಗೆ ಹಾಸ್ಯಭರಿತವಾದ ಮನರಂಜನೆಯನ್ನು ನೀಡುವುದರ ಜೊತೆಗೆ ಅವಿಸ್ಮರಣೀಯವಾದ ವಿನೋದವನ್ನು ತಂದುಕೊಡಲಿದೆ ಎಂದು ಮಾಲ್ ಪ್ರಕಟಣೆ ತಿಳಿಸಿದೆ.


ಈಗಾಗಲೇ ಹಲವು ಯಶಸ್ವಿ ಪ್ರದರ್ಶನಗಳನ್ನು ಕಂಡ ಈ ನಾಟಕದಲ್ಲಿ ತುಳುನಾಡಿನ ಹಲವು ಮಂದಿ ಹಾಸ್ಯಪ್ರತಿಭೆಗಳು ಜನರಿಗೆ ರಸದೌತಣ ಉಣಬಡಿಸಲಿದ್ದಾರೆ. ಈ ವಾರಾಂತ್ಯದ ಮನೋರಂಜನೆ ಪೋಷಕರಿಗೆ ಕುಟುಂಬ ಮತ್ತು ಸ್ನೇಹಿತರನ್ನು ನಗೆಗಡಲಲ್ಲಿ ತೇಲುವಂತೆ ಮಾಡಲಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top