ಎಂದೆಂದಿಗೂ ಸಾಂಪ್ರದಾಯಿಕ ನೆಲಮೂಲದ ಸಂಸ್ಕೃತಿ ಉಳಿಯಬೇಕು: ತುಕಾರಾಮ ಪೂಜಾರಿ

Upayuktha
0


ಬಿ.ಸಿ ರೋಡ್: ಅನೇಕ ಚಮತ್ಕಾರಿಕ ಸಂಗತಿಗಳುಳ್ಳ ನಮ್ಮ ನೆಲಮೂಲದ ಸಂಸ್ಕೃತಿ ಅದೆಷ್ಟೋ ವರ್ಷಗಳ ಇತಿಹಾಸವನ್ನು ಹೊಂದಿದೆ. ನಮ್ಮ ಪೂರ್ವಜರ ಪಾಂಡಿತ್ಯ ಹಾಗೂ ಬುದ್ಧಿಮತೆಯಿಂದ ಸಮಾಜಕ್ಕೆ ಹಲವಾರು ಕೊಡುಗೆಗಳು ಸಂದಿದೆ. ಯಾವ ಕಾಲಕ್ಕೂ ಕ್ಷೇಮಕರವಾದ ನಮ್ಮ ಸಾಂಪ್ರದಾಯಿಕ  ಆಚರಣೆಗಳ ಮಹತ್ವವನ್ನರಿತು ಉಳಿಸಿಕೊಂಡು ಮುಂದಿನ ತಲೆಮಾರಿಗೂ ದಾಟಿಸಬೇಕು ಎಂದು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕ  ಹಾಗೂ ಉಪನ್ಯಾಸಕ ತುಕಾರಾಮ ಪೂಜಾರಿ ಹೇಳಿದರು.


ಅವರು ಬಿ.ಸಿ ರೋಡ್ ಸಂಜಯಗಿರಿ, ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ, ತುಳು ವಸ್ತು ಸಂಗ್ರಹಾಲಯ ಹಾಗೂ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಭೇಟಿ ಸಂದರ್ಭದಲ್ಲಿ  ಮಾತನಾಡಿದರು.  


ಕಾರ್ಯಕ್ರಮದಲ್ಲಿ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪ್ರಮೋದ್ ಎಮ್.ಜಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಕಾಲೇಜಿನ ವಿಶೇಷ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ನಾಯಕ್ ವಂದಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top