ಬಂಗಾರ, ಸೌದಿ ನೋಟು, ಬೆಲೆ ಬಾಳುವ ವಸ್ತು ಕಳವು : ಕಳ್ಳನ ಸೆರೆ

Upayuktha
0



ಶಿವಮೊಗ್ಗ: ಮನೆಗೆ ಬೀಗ ಹಾಕಿ ಸೌದಿ ಅರೇಬಿಯಕ್ಕೆ ಹೋಗಿದ್ದ ಮಹಿಳೆಯ ಮನೆಯಲ್ಲಿ ಬಂಗಾರ, ನಗದು ಮತ್ತು ಸೌದಿಯ ನೋಟು, ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದವನನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.



ಬುಧವಾರ ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠ ಜಿ ಕೆ ಮಿಥುನ್‌ಕುಮಾರ್, ಬಂಧಿತನು ತಿಮ್ಮಾನಗರದ ಸಲೀಮ್ ಬಿನ್ ಅಬ್ದುಲ್ಲಾ (44) ಎನ್ನುವವನಾಗಿದ್ದಾನೆ. ಆರ್‌ಎಂಎಲ್ ನಗರದ ವಾಸಿ ಸಲ್ಮಾನ್ ಬಾನು ಎನ್ನುವವರು ತಮ್ಮ ಗಂಡ ಸೌದಿಯಲ್ಲಿರುವುದರಿಂದ ಮನೆಗೆ ಬೀಗ ಹಾಕಿ 2020 ರ ಮೇ 25ರಂದು ತೆರಳಿದ್ದರು. ಒಂದು ವರ್ಷದ ನಂತರ ಊರಿಗೆ ವಾಪಸಾದಾಗ ಮನೆಯ ಇಂಟರ್‌ಲಾಕ್ ಮುರಿದು 6 ಲಕ್ಷ ರೂ ಮೌಲ್ಯದ ಬಂಗಾರ, 1ಲಕ್ಷ ರೂ ಮೌಲ್ಯದ ಸೌದಿಯ ನೋಟು, ಬೆಲೆಬಾಳುವ ವಾಚು ಸಹಿತ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡುಬಂದಿತ್ತು. ಈ ಬಗ್ಗೆ ಮಹಿಳೆ ದೂರು ನೀಡಿದ್ದರು ಎಂದು ವಿವರಿಸಿದರು.



ಫೆ. 2ರಂದು ಆರೋಪಿಯನ್ನು ಪತ್ತೆ ಮಾಡಿದ್ದು, ಆತನಿಂದ ಕಳ್ಳತನ ಮಾಡಿ ಮುತ್ತೂಟ್ ಫೈನಾನ್ಸ್ ಮತ್ತು ಐಐಎಫ್‌ಎಲ್‌ನಲ್ಲಿ ಗಿರವಿಯಲ್ಲಿಟ್ಟಿದ್ದ 8ಲಕ್ಷ ರೂ ಮೌಲ್ಯದ ಆಭರಣ, 21 ಸಾವಿರ ರೂ ಮೌಲ್ಯದ ವಾಚು, 69 ಸಾವಿರ  ರೂ ಮೌಲ್ಯದ ಸೌದಿ ನೋಟನ್ನು ವಶಪಡಿಸಿಕೊಳ್ಳಲಾಗಿದೆ. ಇನ್ಸ್‌ಪೆಕ್ಟರ್ ರವಿ ಪಾಟೀಲ್ ನೇತೃತ್ವದಲ್ಲಿ ತನಿಖೆ ನಡೆನೆಯುತ್ತಿದೆ. ಕಳ್ಳತನ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು ಎಂದರು. ಪತ್ರಿಕಾಗೋಷ್ಟಿಯಲ್ಲಿ ಎಎಸ್‌ಪಿಗಳಾದ ಅನಿಲ್ ಕುಮಾರ್ ಭೂಮರಡ್ಡಿ, ಕಾರ್ಯಪ್ಪ, ಡಿಎಸ್‌ಪಿ ಬಾಬು ಹಾಜರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top