ಸುರತ್ಕಲ್ : ಉದಯರಾಗ ಸಂಗೀತ ಕಾರ್ಯಕ್ರಮದ ಪರಿಕಲ್ಪನೆ ಅನನ್ಯವಾದುದು. ಶಾಸ್ತ್ರೀಯ ಸಂಗೀತ ದೈವಿಕ ಕಲೆಯಾಗಿದ್ದು ಸಂಗೀತ ಸೇವೆಯಿಂದ ದೈವಾನುಗ್ರಹ ಪ್ರಾಪ್ತವಾಗುತ್ತದೆ ಎಂದು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಮೊಕ್ತೇಸರ ವೇದಮೂರ್ತಿ ಐ. ರಮಾನಂದ ಭಟ್ ನುಡಿದರು.
ಅವರು ಸುರತ್ಕಲ್ ಫ್ಲೈ ಓವರ್ ಕೆಳಗಡೆ ಮಣಿ ಕೃಷ್ಣಸ್ವಾಮಿ ಅಕಾಡಮಿ (ರಿ) ಮತ್ತು ನಾಗರಿಕ ಸಲಹಾ ಸಮಿತಿ ಸುರತ್ಕಲ್‍ಗಳ ಸಹಯೋಗದೊಂದಿಗೆ ನಡೆದ 50ನೇ ಉದಯರಾಗ ಕಾರ್ಯಕ್ರಮ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳಾಧಾರಿತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ 26ನೇ ಮಂಜುನಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಸರಿತಾ ಶಶಿಧರ್ ಶುಭ ಹಾರೈಸಿದರು.ಮಣಿಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಶಾಸ್ತ್ರೀಯ ಸಂಗೀತದ ಆಸಕ್ತಿ ವರ್ಧಿಸಿದ್ದು ಉದಯೋನ್ಮುಖ ಕಲಾವಿದರಿಗೆ ಹೆಚ್ಚಿನ ಅವಕಾಶ ಲಭ್ಯವಾಗತ್ತಿದೆ. ಪಿ. ನಿತ್ಯಾನಂದ ರಾವ್‍ರ ಶಾಸ್ತ್ರೀಯ ಸಂಗೀತ ಸೇವೆ ವಿಶಿಷ್ಟವಾದದ್ದು ಎಂದರು.
ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್, ಕೃಷ್ಣ ಕುಮಾರಿ ಮತ್ತು ವಿಭ ರಾವ್ ಅವರನ್ನು ಸನ್ಮಾನಿಸಲಾಯಿತು. ನಾಗರಿಕ ಸಲಹಾಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್ ಅಭಿನಂದನಾ ನುಡಿಗಳನ್ನಾಡಿದರು. ಯುವಕಲಾಮಣಿ ಶ್ರೇಯಾ ಕೊಳತ್ತಾಯ ಸುರತ್ಕಲ್, ಶೋಭಿತಾ ಭಟ್, ಕಿನ್ನಿಗೋಳಿ, ಆಶ್ವೀಜ ಉಡುಪ, ಕಿನ್ನಿಗೋಳಿಯವರಿಂದ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ನಡೆಯಿತು. ವಯಲಿನ್‍ನಲ್ಲಿ ತನ್ಮಯೀ ಉಪ್ಪಂಗಳ, ಪುತ್ತೂರು, ಮೃದಂದಲ್ಲಿ ಅಚಿಂತ್ಯ ಕೃಷ್ಣ ಪುತ್ತೂರ, ಖಂಜೀರದಲ್ಲಿ ಕಾರ್ತಿಕ್ ಭಟ್ ಸಹಕರಿಸಿದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಪಿ.ಪುರುಷೋತ್ತಮ ರಾವ್, ರಘುರಾಮ ರಾವ್ ಬೈಕಂಪಾಡಿ, ಉಮೇಶ್ ಇಡ್ಯಾ, ವಾಸುದೇವ ಶ್ಯಾನುಭಾಗ್, ಲೋಕಯ್ಯ ಶೆಟ್ಟಿ, ಜ್ಯೋತಿ ಪಿ. ಶೆಟ್ಟಿ, ಯೋಗೀಶ್ ಕುಳಾಯಿ, ರಮೇಶ್ ರಾವ್, ಕೃಷ್ಣ ಶೆಟ್ಟಿ, ಸಾವಿತ್ರಿ ರಮೇಶ್ ಭಟ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ