ಮಂಗಳೂರು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ.ಕ ಜಿಲ್ಲಾ ಘಟಕದಿಂದ ಜಗದ್ಗುರು ಶ್ರೀ ರಾಘವೇಶ್ವರ ಸ್ವಾಮೀಜಿಯವರನ್ನು ಮಂಗಳೂರಿನ ನಂತೂರು ಶ್ರೀ ಭಾರತೀ ವಿದ್ಯಾ ಸಂಸ್ಥೆಯಲ್ಲಿ ಭೇಟಿಯಾಗಿ ಕಾಷಾಯಂಬರ ಸಹಿತ ಗುರುವಂದನಾ ಕಾರ್ಯಕ್ರಮ ಸಲ್ಲಿಸಲಾಯಿತು.
ಶ್ರೀಗಳು ಸಂಘಟನೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಸಂಘಟನೆಯಿಂದ ಯಶಸ್ಸು ಸಾದ್ಯ ಎಂದು ಆಶೀರ್ವಾದಪೂರ್ವಕ ಮಂತ್ರಾಕ್ಷತೆಯನ್ನು ನೀಡಿ ಹರಸಿದರು. ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಮಹೇಶ್ ಕಜೆ, ಜಿಲ್ಲಾ ಪ್ರಧಾನ ಸಂಚಾಲಕ ಭರತಾಂಜಲಿಯ ವಿದ್ವಾನ್ ಶ್ರೀಧರ ಹೊಳ್ಳ, ರಾಜ್ಯ ಸಂಘಟನಾ ಕಾರ್ಯದರ್ಶಿ ಪೊಳಲಿ ಗಿರಿಪ್ರಕಾಶ್ ತಂತ್ರಿ, ರಾಜ್ಯಯುವ ಘಟಕದ ಸಹ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಕೊರಿಯಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀಕರ ದಾಮ್ಲೆ, ಮಹಿಳಾ ಘಟಕದ ಕಾತ್ಯಾಯಿನಿ ಸೀತಾರಾಂ, ಜಿಲ್ಲಾ ಸಂಚಾಲಕರಾದ ಕದ್ರಿ ಕೃಷ್ಣ ಭಟ್,ನ್ಯಾಯವಾದಿ ಪುರುಷೋತ್ತಮ ಭಟ್, ಪದ್ಮಾ ಭಿಡೆ, ಹರ್ಷಕುಮಾರ್ ಕೇದಿಗೆ, ಗಣೇಶ್ ಕಾಶೀಮಟ್, ಎಂ ಟಿ ಭಟ್ ಗೌರವ ಸಲಹೆಗಾರ ಸಿ. ಎ ಆರ್.ಡಿ. ಶಾಸ್ತ್ರಿ ಸಮತಾ ಬಳಗದ ಅಧ್ಯಕ್ಷೆ ವಂದನಾ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ