ಶ್ರೀರಾಮ ಕಥಾ ಲೇಖನ ಅಭಿಯಾನ-70: ರಾವಣ ಪಾತ್ರ ಪರಿಚಯ

Upayuktha
0




-ಚಂದ್ರಶೇಖರ್ ಆರ್. ಕೋಲಾರ

ಭಾರತ ದೇಶ ದೈವಜ್ಞಾನಕ್ಕೆ ತವರು ಮನೆ. ಪ್ರಪಂಚ ದೇಶಗಳ ಪೈಕಿ ಮೊಟ್ಟಮೊದಲು ದೈವಜ್ಞಾನ ಹುಟ್ಟಿದ್ದು ಒಂದು ಭಾರತದೇಶದಲ್ಲಿಯೇ, ಭಾರತ ದೇಶ ಜ್ಞಾನಿಗಳಿಗೆ ನಿಲಯವಾದ ದೇಶ. ದೈವಜ್ಞಾನಕ್ಕೆ ಅಧಿಪತಿ ಚಂದ್ರನು ಎಂದುಜ್ಯೋತಿಷ್ಯಶಾಸ್ತ್ರದ ಪ್ರಕಾರ ಹೇಳಬಹುದು. ಆದ್ದರಿಂದ ಎಲ್ಲಿಯಾದರೂ ಜ್ಞಾನಕ್ಕೆ ಗುರುತಾಗಿ ಚಂದ್ರನ ಹೆಸರನ್ನು ಬಳಸುತ್ತಿದ್ದೇವೆ. ಚಂದ್ರನ ಇನ್ನೊಂದು ಹೆಸರು ಇಂದೂ. ಆದ್ದರಿಂದ ಜ್ಞಾನ ಚಿಹ್ನೆಯಾಗಿ ಇಂದೂ ಎನ್ನುವ ಹೆಸರನ್ನು ಭಾರತ ದೇಶಕ್ಕೆ ಕೃತಯುಗದಲ್ಲಿಯೇ ಇಡುವುದು ನಡೆದಿದೆ. ಆದ್ದರಿಂದಲೇ ಭಾರತ ದೇಶವನ್ನು ಇಂದೂ ದೇಶವೆಂದು ಕರೆಯುವುದು ನಡೆದಿದೆ. ಭಾರತ ದೇಶವನ್ನು ಇಂದೂ ದೇಶವೆಂದು ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕೆ ಇನ್ನೊಂದು ಮುಖ್ಯಕಾರಣ ಅಂತ್ಯವಿಲ್ಲದ ಅನಂತವಾದ ವಿಶ್ವದಲ್ಲಿ ದೈವಶಕ್ತಿ ಅಣುಅಣುವು ವ್ಯಾಪಿಸಿದೆ. ಆತನ ಶಕ್ತಿ ಎಲ್ಲಾ ಕಡೆ ಇದ್ದರೂ ಭೂಮಂಡಲದಲ್ಲಿ ಒಂದು ಕಡೆ ಸ್ವಲ್ಪ ಅಧಿಕ ದೈವಶಕ್ತಿ ಕೇಂದ್ರೀಕೃತವಾಗಿದೆ. ಅಂತಹ ಪ್ರತ್ಯೇಕತೆ ಉಳ್ಳ ಸ್ಥಳವೇ ಇಂದೂ ಮಹಾಸಮುದ್ರ, ತ್ರೇತಾಯುಗದಲ್ಲಿ ಭಾರತ ದೇಶದ ಕೆಳಗಡೆ ಅಂದರೆ ಪೂರ್ತಿಯಾಗಿ ದಕ್ಷಿಣ ಭಾಗದಲ್ಲಿ ಶ್ರೀಲಂಕೆಗೆ ಸುಮಾರು ಸುತ್ತಲೂ ಇರುವ ಸಮುದ್ರದಲ್ಲಿ ಆ ದೈವಶಕ್ತಿ ನೆಲೆಗೊಂಡಿರುತ್ತಿತ್ತು. ದೈವಶಕ್ತಿ ಲಂಕೆಯ ಹತ್ತಿರ, ಭಾರತ ದೇಶದ ಕೆಳಗೆ ಸಮುದ್ರದಲ್ಲಿರುವುದ ರಿಂದ ಆ ಸಮುದ್ರಕ್ಕೆ ಇಂದೂ ಮಹಾಸಮುದ್ರ ಎಂಬ ಹೆಸರು ಬಂದಿದೆ. ಕೃತಯುಗದಲ್ಲಿಯೇ ದೈವಜ್ಞಾನವನ್ನು ತಿಳಿದ ಯೋಗಿಗಳು ಜ್ಞಾನ ಸಮುದ್ರವೆಂದು ಆ ಸಮುದ್ರಕ್ಕೆ ಹೆಸರು ಇಡುವುದು ನಡೆದಿದೆ. 


ಇಂದೂ ಮಹಾಸಮುದ್ರದಲ್ಲಿನ ದೈವಶಕ್ತಿಯೇ ಭೂಮಿ ಮೇಲೆ ದೈವಜ್ಞಾನ ಎಂದರೆ ಏನೋ? ಯೋಗ ಅಂದರೆ ಏನೋ? ಕೊನೆಗೆ ಮೋಕ್ಷ ಎಂದರೆ ಏನೋ? ಒಂದು ನಮೂನೆಯನ್ನು ತೋರಿಸಬೇಕೆಂದುಕೊಂಡು ರಾವಣಬ್ರಹ್ಮನ ಜನ್ಮಕ್ಕೆ ಕಾರಣವಾಗಿ, ಆತನಿಗೆ ಅಪಾರ ದೈವಜ್ಞಾನವನ್ನು ಧಾರೆ ಎರೆದು ತ್ರಿಕಾಲಜ್ಞಾನಿ, ಮಹಾಜ್ಞಾನಿ ಬ್ರಹ್ಮನಾಗಿ, ಬ್ರಹ್ಮವಿದ್ಯಾ ನಿಪುಣನಾಗಿ ಪ್ರಜ್ವಲಿಸುವಂತೆ ಮಾಡಿದೆ. ರಾವಣಬ್ರಹ್ಮನು ಲಂಕೆಯ ಚಕ್ರವರ್ತಿಯಾಗಿದ್ದನು. ಆಗ ಲಂಕೆಯು ಭಾರತದ ಭಾಗವಾಗಿತ್ತು, ರಾವಣಬ್ರಹ್ಮನು ಪರಮಾತ್ಮನ ನಿರಾಕಾರಕ್ಕೆ ಗುರ್ತಾದ ಈಶ್ವರ ಲಿಂಗವನ್ನು ಆರಾಧಿಸುತ್ತಿದ್ದನು. ಮೊಟ್ಟಮೊದಲು ಈ ಭೂಮಂಡಲದ ಮೇಲೆ ಸ್ಥಾಪನೆಯಾದ ಮೊದಲ ದೇವಾಲಯ ಈಶ್ವರ ಲಿಂಗ ದೇವಾಲಯ, ಲಂಕೆಯಲ್ಲಿ ಪ್ರಜೆಗಳು ಈಶ್ವರ ಲಿಂಗವನ್ನೇ ಆರಾಧಿಸುತ್ತಿದ್ದರು, ಹೀಗೇ ಅಂದು ಶ್ರೀಲಂಕ ಮತ್ತು ಭಾರತದ ದಕ್ಷಿಣ ಭಾಗ ಆಧ್ಯಾತ್ಮಿಕ ಕೇಂದ್ರವಾಗಿತ್ತು, ತನ್ನ ಪರಿಪಾಲನೆ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಓರಿಸ್ಸಾ ಮತ್ತು ಮಹಾರಾಷ್ಟ್ರಗಳ ವರೆಗೂ ಇತ್ತು, ರಾವಣಬ್ರಹ್ಮನಿಗೆ ಔಷಧ ಗುಣಗಳು ಮತ್ತು ಮಂತ್ರಶಕ್ತಿ ತರಂಗಗಳು ಬೆರೆತಿರುವ ವಿಮಾನವಿತ್ತು. ತನ್ನ ಪುಷ್ಪಕ ವಿಮಾನದಿಂದ ಆಕಾಶದಲ್ಲಿ ಸಂಚರಿಸಿ ತನ್ನ ಆಳ್ವಿಕೆಯಲ್ಲಿನ ಪ್ರಾಂತ್ಯಗಳ ಪ್ರಜೆಗಳಿಗೆ ದೈವಜ್ಞಾನವನ್ನು ಬೋಧಿಸುತ್ತಿದ್ದನು. ಎಲ್ಲಿಯಾದರೂ ಅಧರ್ಮಗಳ ಆಚರಣೆಯನ್ನು ಮಾಡುವವರನ್ನು ಕಂಡರೆ ತಡೆದು ದಂಡಿಸುತ್ತಿದ್ದನು, ಆ ಕಾಲದಲ್ಲಿ ಭಾರತ ದೇಶಕ್ಕೆ ಪೂರ್ತಿ ದಕ್ಷಿಣದ ಕಡೆ ರಾತ್ರಿ ಹೊತ್ತು ಪ್ರಕಾಶಮಾನದ ಬೆಳಕು ಕಾಣಿಸುತ್ತಿತ್ತು. 


ಆ ಬೆಳಕನ್ನು ದೂರದಿಂದ ನೋಡಿದವರು ಲಂಕದಲ್ಲಿ ಯಾವುದೋ ದೊಡ್ಡ ಶಕ್ತಿ ಇದೆಯೆಂದು ಅಂದುಕೊಳ್ಳುತ್ತಿದ್ದರು. ಆದರೆ ಆ ದೊಡ್ಡಶಕ್ತಿ ರಾವಣನೇ ಎಂದು ತಿಳಿಯಲಾರದೇ ಹೋದರು. ಆದರೂ ಅಂದು ದಕ್ಷಿಣ ಭಾರತ ದೇಶದಲ್ಲಿ ಎಲ್ಲರಿಗಿಂತಲೂ ಮೀರಿದ ಜ್ಞಾನಿಗಳಿರುತ್ತಿದ್ದರು. ದೊಡ್ಡ ಜ್ಞಾನಿಗಳಾದವರು ಕೆಲವರು ರಾವಣನು ಸಾಮಾನ್ಯ ಮನುಷ್ಯನಲ್ಲ ಆತನಲ್ಲಿ ದೈವಜ್ಞಾನ ದೈವವು ಒಳಗೊಂಡಿದೆ ಯೆಂದು ತಿಳಿದು ರಾವಣ ಎಂಬ ಹೆಸರಿನ ಕೊನೆಯಲ್ಲಿ ಬ್ರಹ್ಮ ಎಂಬ ಬಿರುದನ್ನು ಸೇರಿಸಿ ರಾವಣಬ್ರಹ್ಮ ಎಂದು ಕರೆಯುತ್ತಿದ್ದರು. ದಕ್ಷಿಣ ಭಾರತ ಪ್ರಾಂತ್ಯದ ರಾಜನಾಗಿದ್ದ ಜನಕನು ಶ್ರೀಲಂಕದ ಕಡೆ ರಾತ್ರಿ ಹೊತ್ತು ಕಾಣಿಸುವ ಬೆಳಕನ್ನು ನೋಡಿ ರಾವಣಬ್ರಹ್ಮನು ದೊಡ್ಡ ಆಧ್ಯಾತ್ಮಿಕ ನಿಪುಣನೆಂದು ತಿಳಿದು ಯಾವ ವಿಧವಾಗಿಯಾದರೂ ರಾವಣಬ್ರಹ್ಮನ ಶಿಷ್ಯನಾಗಬೇಕೆಂದು ಜನಕನು ಅಂದುಕೊಳ್ಳುವುದು ನಡೆಯಿತು. ರಾವಣಬ್ರಹ್ಮನನ್ನು ಗುರುವಾಗಿ ಕೋರಿದವರಲ್ಲಿ ಜನಕನು ಮೊದಲನೆಯವನು. ರಾವಣಬ್ರಹ್ಮನು ತನ್ನ ವಿಮಾನದಲ್ಲಿ ಹೋಗಿ ಜ್ಞಾನವನ್ನು ತಿಳಿಸುವ ಕಡೆ ಜನಕನು ಆ ಪ್ರಾಂತ್ಯಕ್ಕೆ ಹೋಗಿ ಜ್ಞಾನವನ್ನು ತಿಳಿದುಕೊಳ್ಳುತ್ತಿದ್ದನು. ಆ ವಿಧವಾಗಿ ರಾವಣಬ್ರಹ್ಮನ ಜ್ಞಾನವನ್ನು ತಿಳಿಯುವುದರಿಂದ ಜನಕನು ದೊಡ್ಡ ಕರ್ಮಯೋಗಿಯಾಗಿ ಬದಲಾಗಿ ಹೋದನು. ಜನಕನು ಕರ್ಮಯೋಗವನ್ನು ಆಚರಿಸಿ ಆ ಜನ್ಮದಲ್ಲಿಯೇ ಮೋಕ್ಷ ಹೊಂದಿದಂತೆ ಭಗವದ್ಗೀತೆಯಲ್ಲಿ ಕರ್ಮ ಯೋಗ ಅಧ್ಯಾಯದ 25 ನೇ ಶ್ಲೋಕವು ಸಾಕ್ಷಿಯಾಗಿ ಇದೆ. ಆದ್ದರಿಂದ ರಾವಣಬ್ರಹ್ಮನಂತಹ ಗುರು, ಜನಕರಾಜನಂತಹ ಶಿಷ್ಯನು ಇಲ್ಲವೆಂದು ಆ ದಿನ ಹೇಳುತ್ತಿದ್ದರು. 


ರಾವಣಬಹ್ಮನಿಗೆ ಅಂದು ದೇವತೆಗಳು, ಗ್ರಹಗಳು, ಭೂತಗಳು (ಪ್ರಕೃತಿ ಪಾಲಕರು) ನಮಸ್ಕರಿಸುತ್ತಿದ್ದವು. ಅಲ್ಲದೇ ದ್ವಾದಶ ಗ್ರಹಗಳನ್ನೇ ಶಾಶಿಸಿದವನು ರಾವಣಬ್ರಹ್ಮ, ಆದ್ದರಿಂದಲೇ ಅಂದು ಭಗವಾನ್ ರಾವಣಬ್ರಹ್ಮನೆಂದು ಕರೆದಿದ್ದಾರೆ. ಇದೆಲ್ಲಾ ನಿಮಗೆ ಹೊಸದಾಗಿ ವಿಚಿತ್ರವಾಗಿ ಕಂಡರೂ ನೂರಕ್ಕೆ ನೂರು ಪಾಲು ನಡೆದ ಸತ್ಯ. ಪೂರ್ವವು ರಾವಣನು ಕೈಲಾಸ ಪರ್ವತಕ್ಕೆ ಶಿವನ ದರ್ಶನಕ್ಕಾಗಿ ಹೋದಾಗ ಕೈಲಾಸ ಪರ್ವತವನ್ನು ಎತ್ತಿ ತನ್ನ ತಲೆಯ ಮೇಲೆ ಇಟ್ಟುಕೊಂಡ ಹಾಗೆ, ಆಗ ಶಿವನನ್ನು, ಶಿವಧನಸ್ಸನ್ನು ಎತ್ತಿದ ಹಾಗೆ ಬರೆದ ರಚನಕಾರರು ಸೀತೆ ಸ್ವಯಂವರದಲ್ಲಿ ಶಿವಧನಸ್ಸನ್ನು ಎತ್ತಲಿಲ್ಲ ಎನ್ನುವುದು ಅಸತ್ಯ ಅಲ್ಲವೇ? ರಾವಣ ಬ್ರಹ್ಮ ಅರಣ್ಯದಲ್ಲಿ ಸೀತೆಯನ್ನು ತೆಗೆದುಕೊಂಡು ಹೋಗಿರುವ ಮಾತು ವಾಸ್ತವವೇ. ಆ ಒಂದು ಸಂಘಟನೆಯನ್ನು ಆಧಾರ ಮಾಡಿಕೊಂಡು ರಚಿಯಿತರೆಲ್ಲರೂ ರಾವಣನನ್ನು ಎಷ್ಟೋ ದುಷ್ಟನನ್ನಾಗಿ, ಅಜ್ಞಾನಿಯಾಗಿ ಚಿತ್ರೀಕರಿಸಿ ತೋರಿಸಿದ್ದಾರೆ. ಆ ದಿನ ಆತನು ಸೀತೆಯ ಮೇಲೆ ದುರುದ್ದೇಶದಿಂದ ಸೀತೆಯನ್ನು ತೆಗೆದುಕೊಂಡ ಹೋಗಲಿಲ್ಲ, ಸುಮಾರು ಹತ್ತು ತಿಂಗಳ ಕಾಲ ಸೀತೆ ರಾವಣಬ್ರಹ್ಮನ ಸಂರಕ್ಷಣೆಯಲ್ಲಿಯೇ ಇದ್ದಾಳೆ. ಸೀತೆ ತನ್ನ ಹತ್ತಿರ ಇರುವಷ್ಟು ಕಾಲ ಸೀತೆಯನ್ನು ತನ್ನ ಸ್ವಂತ ಮಗಳಂತೆ ರಾವಣಬ್ರಹ್ಮ ನೋಡಿಕೊಳ್ಳುವುದು ನಡೆದಿದೆ ಆಕೆಯ ಸೇವೆಗೆ ಹತ್ತು ಜನ ಹೆಣ್ಣುಮಕ್ಕಳನ್ನು ಏರ್ಪಾಟು ಮಾಡಿಟ್ಟಿದ್ದಾನೆ. ವಾರಕ್ಕೆ ಒಂದು ಸಲ ಸೀತೆಯ ಹತ್ತಿರಕ್ಕೆ ಪತ್ನಿ  ಸಮೇತವಾಗಿ ಹೋಗಿ ಆಕೆಗೆ ಯಾವ ಲೋಪವಿಲ್ಲದಂತೆ ವಿಚಾರಿಸಿ ಬರುತ್ತಿದ್ದನು. ಆಕೆಯನ್ನು ಹಾಗೆ ತರುವುದಕ್ಕೆ ಕಾರಣವನ್ನು ಸಹ ಸೀತೆಗೆ ವಿವರಿಸಿ ಹೇಳಿದ್ದಾನೆ. ತನ್ನ ಮರಣ ರಾಮನ ಕೈಯಲ್ಲಿದೆ ಎಂದು ಸಹ ಹೇಳಿದ್ದಾನೆ. ತ್ರಿಕಾಲ ಜ್ಞಾನಿಯಾದ ರಾವಣಬ್ರಹ್ಮ ತನ್ನ ಮರಣ ಯಾವಾಗ ನಡೆಯುತ್ತದೋ ಸಹ ಮೊದಲೆ ಸೀತೆಗೆ ಹೇಳಿದ್ದಾನೆ. ಸೀತೆಗೆ ರಾವಣಬ್ರಹ್ಮ ಕೆಟ್ಟವನೆಂಬ ಉದ್ದೇಶ ಎಂದಿಗೂ ಇಲ್ಲ. ರಾವಣಬ್ರಹ್ಮ ದೊಡ್ಡ ಜ್ಞಾನಿ, ದೊಡ್ಡ ಯೋಗಿ ಎಂದು ಸೀತೆ ಗುರುತಿಸಿದ್ದಾಳೆ. ಆದ್ದರಿಂದಲೇ ಆತನನ್ನು ಕುರಿತು ಸೀತೆ ಕೆಟ್ಟದಾಗಿ ಎಂದಿಗೂ ಮಾತನಾಡಲಿಲ್ಲ. ಇನ್ನೂ ಸುರಪಾನದ ಬಗ್ಗೆ ಹೇಳುವುದಾದರೆ ಸುರ ಎಂದರೆ ಪೂರ್ವದಲ್ಲಿ ದೇವತೆಗಳು ಕುಡಿಯುವ ಮತ್ತುಪಾನೀಯ ಎಂದು ಎಲ್ಲರಿಗೂ ತಿಳಿಯದಿದ್ದರೂ ಕೆಲವರಿಗಾದರೂ ತಿಳಿದಿದೆ. ಸುರಪಾನ ಎಂದರೆ ಸುರ ಎಂದರೆ ಮತ್ತು, ಪಾನ ಎಂದರೆ ಕುಡಿಯುವುದೆಂದು ಅರ್ಥವಿದೆ. ಮತ್ತುಪಾನೀಯವನ್ನು ಕುಡಿಯುವವರನ್ನು ಸುರರು ಎಂದು ಕರೆಯುತ್ತಿದ್ದರು, ಸುರವನ್ನು ಕುಡಿದವರು ಸುರರು ಆದಾಗ, ಸುರವನ್ನು ಕುಡಿಯದವರು ಅಸುರರಾಗುತ್ತಾರೆ. ಅಂದರೆ ಮತ್ತುಪಾನೀಯವನ್ನು ಕುಡಿಯದವನು. ಆ ದಿನ ರಾವಣಬ್ರಹ್ಮನನ್ನು ಅಸುರನೆಂದು ಪ್ರಕಟಿಸಿದವರೆ, ದೇವತೆಗಳನ್ನು ಸುರರೆಂದು ಹೇಳುವುದು ನಡೆದಿದೆ. ಈ ಲೆಕ್ಕ ಪ್ರಕಾರ ಅಸುರನಾದ ರಾವಣನು ದೊಡ್ಡವನಾ? ಸುರರಾದ ದೇವತೆಗಳು ದೊಡ್ಡವರಾ? ನೀವೇ ಹೇಳಿರಿ. ರಾವಣಬ್ರಹ್ಮನ ಮರಣವೂ ಸಹ ಪ್ರತ್ಯೇಕತೆಯನ್ನು ಹೊಂದಿದೆ, ಮೊದಲೇ ಸಂಪೂರ್ಣ ಜ್ಯೋತಿಷ್ಯಶಾಸ್ತ್ರ ವನ್ನೇ ತಿಳಿದವನು ರಾವಣಬ್ರಹ್ಮ. 


ತನ್ನ 100 ನೇ ವಯಸ್ಸಿನಲ್ಲಿ ಲಂಕೆಯಲ್ಲಿ ಅಯೋಧ್ಯೆ ರಾಮನ ಕೈಯಿಂದಲೇ ನನ್ನ ಮರಣ ಎಂದು ಮೊದಲೇ ತನ್ನ ಪತ್ನಿ ಮಂಡೋದರಿ ದೇವಿಗೆ ತಿಳಿಸಿದ್ದಾನೆ. ರಾಮನು ಲಂಕೆಗೆ ಬಂದು ಯುದ್ಧ ಮಾಡಲು ತಕ್ಕ ಸನ್ನಿವೇಶವನ್ನು ರಾವಣನು ಅದೇ ಕೆಲಸವಾಗಿ ಸೃಷ್ಟಿಸಿದ್ದಾನೆ. ಯುದ್ದದಲ್ಲಿ ರಾಮನು ಹೊಡೆದ ಬಾಣ ರಾವಣನ ಹೊಕ್ಕಳಿಗೆ ಚುಚ್ಚುಕೊಂಡು ರಕ್ತ ಸೋರಿ ಮರಣಿಸುವುದು ನಡೆದಿದೆ. ರಾವಣಬ್ರಹ್ಮನು ಮರಣಹೊಂದಿದಾಗ, ಆತನ ಶರೀರದಿಂದ ಹೊರಬಂದ ಒಂದು ದೊಡ್ಡದಾದ ಬೆಳಕು (ದೈವಶಕ್ತಿ) ಇಂದೂ ಮಹಾಸಮುದ್ರದಲ್ಲಿ ನಿಂತುಹೋಗಿದೆ. ಆ ಶಕ್ತಿಯಿಂದಲೇ ಇಂದು ವಿಜ್ಞಾನಕ್ಕೂ ನಿಲುಕದ ಎಷ್ಟೋ ಅಚ್ಚರಿಗಳು ಇಂದಿಗೂ ನಡೆಯುತ್ತಿವೆ. ಒಟ್ಟಾರೆಯಾಗಿ ಮೊದಲೇ ನಿರ್ಣಯವಾಗಿದ್ದ ಪಥಕದಂತೆ ರಾವಣಬ್ರಹ್ಮ ಲಂಕೆಯಲ್ಲಿ ರಾಮನ ಕೈಯಿಂದಲೇ ಮರಣಸುವುದು ನಡೆದಿದೆ. ಇನ್ನೂ ಭಾರತ ದೇಶದಲ್ಲಿ ಈ ಕೆಳಕಂಡ ರಾಜ್ಯಗಳಲ್ಲಿ ರಾವಣಬ್ರಹ್ಮನನ್ನು ದೇವರಂತೆ ಪೂಜಿಸಿ ಆರಾಧಿಸುತ್ತಾರೆ. ಉದಾ: ಆಂಧ್ರಪ್ರದೇಶದ ಕಾಕಿನಾಡ, ಮಹಾರಾಷ್ಟದ ಗಡ್ಡಿರೋಲಿ ಜಿಲ್ಲಾ ಕೊಡಿಶಾಲಗೂಡೆಂ ಗ್ರಾಮ, ಉತ್ತರಪ್ರದೇಶದ ಇಸ್ರಕ್ ಎಂಬ ಗ್ರಾಮ, ಕಾನ್ಪುರ್, ಗೋಪಾಲನಗರದ ಇತಿಶಾ ಮತ್ತು ಮಧ್ಯಪ್ರದೇಶದ ಮಸ್ರೂರ್ ಇಲ್ಲಿನ ಒಂದು ಪ್ರಾಂತ್ಯವಾದ ಮೌದ್ಗಿಲ್ ಎಂಬ ಗ್ರಾಮದಲ್ಲಿ ಇಂದಿಗೂ ದಸರಾ ಸಂದರ್ಭದಲ್ಲಿ ರಾವಣಬ್ರಹ್ಮನನ್ನು ದೇವರಂತೆ ಪೂಜಿಸುತ್ತಾರೆ. ಈ ಮೇಲೆ ಹೇಳಿರುವ ಕಡೆ ನಾವು ರಾವಣಬ್ರಹ್ಮನ ದೇವಾಲಯಗಳನ್ನು ನೋಡಬಹುದು. 


ನಮ್ಮ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯಲ್ಲಿಯೇ ಎರಡು ಹಳ್ಳಿಗಳಲ್ಲಿ ಸುಗಟೂರು ಮತ್ತು ಸೊಣ್ಣಪ್ಪನಹಟ್ಟಿ ಗ್ರಾಮಗಳಲ್ಲಿ ರಾವಣಬ್ರಹ್ಮನ ಜಾತ್ರಾ ಮಹೋತ್ಸವವನ್ನು ಸುಮಾರು 500 ವರ್ಷಗಳಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿರುತ್ತಾರೆ. ಇಲ್ಲಿಯವರೆಗೂ ಕೆಲವೊಂದು ರಹಸ್ಯವಾದ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊAಡಿದ್ದೇನೆ. ಆದರೆ ಈ ವಿಷಯಗಳು ನನಗೂ ಸಹ ಮೊದಲು ತಿಳಿದಿಲ್ಲ, ನಾನು ನನ್ನ ಗುರುವಾದ ಶ್ರೀಶ್ರೀಶ್ರೀ ಆಚರ‍್ಯ ಪ್ರಬೋಧಾನಂದ ಯೋಗೀಶ್ವರರು ಎಂಬುವವರ ಬಳಿ ಬ್ರಹ್ಮ ವಿಧ್ಯೆಯನ್ನು ಕಲಿಯುತ್ತಿದ್ದೇನೆ. ಅವರು ರಾವಣಬ್ರಹ್ಮ ಬಗ್ಗೆ ಬರೆದ ಬ್ರಹ್ಮ, ರಾವಣಬ್ರಹ್ಮ, ಭಗವಾನ್ ರಾವಣ ಬ್ರಹ್ಮ ಎಂಬ ಗ್ರಂಥದಲ್ಲಿ ಬರೆದ ವಿಚಾರಗಳಲ್ಲಿ ಕೆಲವೊಂದನ್ನು ಮಾತ್ರ ಈ ಲೇಖನದಲ್ಲಿ ಪ್ರಚುರಿಸಲಾಗಿದೆ. ಕೊನೆಯದಾಗಿ ನನ್ನದೊಂದು ಮಾತು, ದೈವವೇ ಮಾನವಾಕಾರದಲ್ಲಿ ಬಂದು ಹುಟ್ಟಿದ ವಿಶ್ವದ ಮೊಟ್ಟಮೊದಲ ದೇಶ ಭಾರತ. ಇತಂಹ ಪ್ರಖ್ಯಾತಿಯನ್ನು ಪಡೆದ ಈ ದೇಶಕಂಡ ಮಹಾನ್ ಜ್ಞಾನಿ, ಮಹಾಮೇಧಾವಿ, ಬ್ರಹ್ಮ ಎಂಬ ಖ್ಯಾತಿಯನ್ನು ಪಡೆದ ಭಗವಾನ್ ರಾವಣಬ್ರಹ್ಮನ ಪ್ರತಿಕೃತಿ ದಹನವನ್ನು ದಸರ ಸಂಧರ್ಭದಲ್ಲಿ ಕೆಲವು ಕಡೆ ಮಾಡುತ್ತಿದ್ದು, ಇದು ನಮಗೆ ಶುಭವಲ್ಲ. ಮುಖ್ಯವಾಗಿ ಇದು ನಮ್ಮ ಆಚರಣೆ ಅಲ್ಲ. ರಾವಣಬ್ರಹ್ಮನ ಪ್ರತಿಕೃತಿ ದಹನವನ್ನು ಮಾಡುವಾಗ ಭೀಕರವಾದ ಸಾವುನೋವುಗಳು ಸಂಭವಿಸಿರುವ ಉದಾಹರಣೆಗಳು ಇವೆ. 

ಜೈ ರಾವಣ ಜೈ ಜೈ ರಾವಣಬ್ರಹ್ಮ...

                                                               

-ಚಂದ್ರಶೇಖರ್ ಆರ್.

ಗ್ರಾಮ ಆಡಳಿತಾಧಿಕಾರಿ, ಕಂದಾಯ ಇಲಾಖೆ

ಶ್ರೀ ಪ್ರಬೋಧ ಕುಟೀರ, ಎನ್.ರಾಮಯ್ಯ ಲೇಔಟ್, 

ಅಂತರಗಂಗೆ ರಸ್ತೆ, ಅಶ್ವಿನಿ ನರ್ಸಿಂಗ್ ಹೋಂ ಹತ್ತಿರ,

ಕೀಲುಕೋಟೆ, ಕೋಲಾರ-563101

ದೂರವಾಣಿ ಸ:9741827901 

                                                     

ಚಂದ್ರಶೇಖರ್.ಆರ್ ವಯಸ್ಸು 35 ವರ್ಷ, ವಾಸ ಕೋಲಾರ ನಗರದ ಕೀಲುಕೋಟೆ, ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ ವೃತ್ತಿ ; ಪ್ರವೃತ್ತಿ ಬಿಡುವಿನ ಸಮಯದಲ್ಲಿ ಆತ್ಮವಿಧ್ಯೆಗೆ ಸಂಬAಧಪಟ್ಟ ಗ್ರಂಥಗಳನ್ನು ಓದುವುದು ಮತ್ತು ರಜಾ ದಿನಗಳಲ್ಲಿ ಭಗವದ್ಗೀತೆಯ ಪ್ರಚಾರ ಮಾಡುವುದು ಅಲ್ಲದೇ ಪ್ರತಿ ಪೌರ್ಣಮಿಯಂದು ಗೀತಾ ಪ್ರವಚನವನ್ನು ಕೇಳಿವುದು, ಸತ್ಸಂಗಗಳಲ್ಲಿ ಪಾಲ್ಗೊಳ್ಳುವುದು. ರಾವಣಬಹ್ಮನ ಬಗ್ಗೆ ವಿಚಾರಗಳನ್ನು ತುಂಬಾ ಆಸಕ್ತಿ, ಅಲ್ಲದೇ ಶ್ರೀಕೃಷ್ಣಪರಮಾತ್ಮ ಗೀತೆಯಲ್ಲಿ ಬೋಧಿಸಿರುವ ಜ್ಞಾನ, ಪ್ರವಕ್ತ ಯೇಸು ರವರು ಬೋಧಿಸಿರುವ ಸುವಾರ್ತೆ ಜ್ಞಾನ, ವೇಮನಯೋಗಿಯ ಪಧ್ಯಗಳು, ಮತ್ತು ತಾತ್ಪರ್ಯ, ವೀರಬ್ರಹ್ಮನವರ ತತ್ವಗಳು ಮತ್ತು ತಾತ್ಪರ್ಯಗಳು, ಹಾಗು ಕುರಾನ್‌ನ ಜ್ಞಾನ ಸಹ ತುಂಬಾ ಇಷ್ಟ. ದೈವಗ್ರಂಥಗಳು ಮತ ಜ್ಞಾನವನ್ನು ಬೋಧಿಸಿಲ್ಲ ಬದಲಿಗೆ ಸಮಸ್ತ ಮಾನವ ಜನಾಂಗಕ್ಕೆ ಮುಕ್ತಿ ಪಥವನ್ನು ತೋರಿಸಿವೆ. ಆದ್ದರಿಂದ ಮತಕ್ಕಿಂತ ಪಥ ಮುಖ್ಯ ಎಂಬುದು ನನ್ನ ಅಭಿಪ್ರಾಯ. 




  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top