ಸಮಾಜ ಸೇವಾ ಶಿಕ್ಷಣವನ್ನು ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಪಡೆಯಬಹುದು: ದಯಾನಂದ ಎಸ್

Upayuktha
0




ಸುರತ್ಕಲ್: ವಿದ್ಯಾರ್ಥಿ ಜೀವನದಲ್ಲೇ ಸಮಾಜ ಸೇವಾ ಶಿಕ್ಷಣವನ್ನು ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಪಡೆಯಬಹುದಾಗಿದೆ ಎಂದು ಸಸಿಹಿತ್ಲು ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ದಯಾನಂದ ಎಸ್ ನುಡಿದರು. 



ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸಸಿಹಿತ್ಲುವಿನಲ್ಲಿ ನಡೆಯುತ್ತಿರುವ ಗೋವಿಂದ ದಾಸ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.



ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಪಿ. ಕೃಷ್ಣಮೂರ್ತಿ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಪರಸ್ಪರ ಅರಿತುಕೊಳ್ಳುವ, ಗೌರವಿಸುವ ಮನೋಭಾವ ಬೆಳೆಯುತ್ತದೆ ಎಂದರು. 



ಹಳೆಯಂಗಡಿ ಲಯನ್ಸ್ ಕ್ಲಬ್‍ನ ಅಧ್ಯಕ್ಷ ದಾಮೋದರ ಎಮ್.ಸಾಲ್ಯಾನ್ ಮಾತನಾಡಿ ಶಾಲಾಭಿವೃದ್ಧಿಗಳಿಗೆ ಅಂತರಾಷ್ಟ್ರೀಯ ಸೇವಾ ಸಂಸ್ಥೆಗಳು ಸಹಕರಿಸುತ್ತಿವೆ ಎಂದರು.



ಗೋವಿಂದ ದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್‍ನ ನಿಕಟಪೂರ್ವ ಅಧ್ಯಕ್ಷ ಎಂ. ರಮೇಶ್ ರಾವ್, ಎಂ.ಆರ್.ಪಿ.ಎಲ್‍ನ ನಿವೃತ್ತ ಮಹಾಪ್ರಭಂದಕಿ (ಪ್ರಶಿಕ್ಷಣ) ವೀಣಾ ಟಿ. ಶೆಟ್ಟಿ, ಉದ್ಯಮಿ ಗೌತಮ್ ಜೈನ್ ಮುಲ್ಕಿ, ಹಳೆ ವಿದ್ಯಾರ್ಥಿ ಸಂಘ ಸಸಿಹಿತ್ಲುವಿನ ಮಾಜಿ ಅಧ್ಯಕ್ಷ ನಾಗೇಶ್ ಡಿ. ಬಂಗೇರ, ಗೋವಿಂದ ದಾಸ ಕಾಲೇಜಿನ ಅಲ್ಯುಮ್ನಿ ಅಸೋಸಿಯೇಶನ್‍ನ ಕಾರ್ಯದರ್ಶಿ ಲೀಲಾಧರ ಶೆಟ್ಟಿ, ಯುವಕ ಮಂಡಲ ಸಸಿಹಿತ್ಲುವಿನ ಉಪಾಧ್ಯಕ್ಷ ಸತೀಶ್ ತಿಂಗಳಾಯ, ಸಸಿಹಿತ್ಲು ಯುವಕ ಮಂಡಲದ ಅಧ್ಯಕ್ಷರಾದ ದಿಲೀಪ್ ಕರ್ಕೇರ, ಯುವಕ ಮಂಡಲದ ಸದಸ್ಯ ಅಮಿತ್ ಶುಭ ಹಾರೈಸಿದರು. 



ಶಿಬಿರಾಧಿಕಾರಿಗಳಾದ ಅಕ್ಷತಾ ವಿ. ಸ್ವಾಗತಿಸಿ ಡಾ. ಭಾಗ್ಯಲಕ್ಷ್ಮೀ ವಂದಿಸಿದರು. ಕಾರ್ಯದರ್ಶಿ ಮನೀಷ್ ಡಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 


ರಾ.ಸೇ.ಯೋ ಘಟಕದ ಕಾರ್ಯದರ್ಶಿಗಳಾದ ಜಿತಿನ್ ಜೆ. ಶೆಟ್ಟಿ, ಹಿತಾ ಉಮೇಶ್, ನಿರ್ಮಿಕಾ ಎನ್ ಸುವರ್ಣ, ಸಹ ಶಿಬಿರಾಧಿಕಾರಿಗಳಾದ ಡಾ. ಪ್ರಶಾಂತ್ ಎಂ.ಡಿ. ಮತ್ತು ವಿನೋದ್ ಶೆಟ್ಟಿ, ಶಾಲಾ ಶಿಕ್ಷಕ ಶರತ್ ಕುಮಾರ್ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಿಂದ ಶಾಲೆಯ ಬಾವಿಕಟ್ಟೆ ನವೀಕರಣ, ಒಣಕಸ ಹಸಿಕಸ ತ್ಯಾಜ ನಿರ್ವಹಣಾ ವ್ಯವಸ್ಥೆ, ಕಂಪೋಸ್ಟ್ ತಯಾರಿಕೆಗೆ ವ್ಯವಸ್ಥೆ, ಸಂವಿಧಾನದ ಬಗ್ಗೆ ಜಾಗೃತಿ ಮುಂತಾದ ಚಟುವಟಿಕೆಗಳು ನಡೆಯಿತು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Advt Slider:
To Top