ಬೆಂಗಳೂರಿನ ವಿಜಯನಗರದ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಶ್ರುತಿ ಗಾಯನ ಸೇವೆ

Upayuktha
0

 



ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಬೆಂಗಳೂರಿನ ವಿಜಯನಗರದ ಹತ್ತಿರ ಇರುವ ಸರಸ್ವತಿನಗರದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಫೆಬ್ರವರಿ 17ರಂದು ಏರ್ಪಡಿಸಿದ್ದ ಹರಿನಾಮ ಸಂಕೀರ್ತನೆ ಕಾರ್ಯಕ್ರಮದಲ್ಲಿ  ಶ್ರುತಿ ಕಾರಕೋಡ್ಲು ಅವರು ನವವಿಧ ಭಕ್ತಿಯ ಕೃತಿಗಳಾದ "ನಮ್ಮಮ್ಮ ಶಾರದೆ" ,"ಕಥಾ ಶ್ರವಣ ಮಾಡು", "ರಾಮ ನಾಮವ ನೆನೆ ಮನವೇ", "ಶಿವ ಶಿವ ಎನ್ನಿರೋ", "ರಾಮ ಮಂತ್ರವ ಜಪಿಸೋ", "ಸ್ಮರಣೆ ಒಂದೇ ಸಾಲದೆ", "ಎಂಥವನೆಂಥವನೇ ರಂಗಯ್ಯ", "ಇಕೋ ನೋಡೆ ರಂಗನಾಥನ ಪುಟ್ಟ ಪಾದವ", "ಹನುಮಂತ ದೇವ ನಮೋ" "ದಾಸನ ಮಾಡಿಕೋ ಎನ್ನ", "ಎಂಥಾ ಪುಣ್ಯವೇ ಗೋಪಿ", "ಯಾರೆನೆಂದರೂ ಹರಿ", "ವಿಠಲಾ ಸಲಹೋ ಸ್ವಾಮಿ", "ಶೋಬಾನ ಶೋಭಾನವೇ"  ಮತ್ತು "ಮನ್ನಾರು ಕೃಷ್ಣಗೆ ಮಂಗಳ" ಎಂಬ  ಕೃತಿಯೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ  ಆಶ್ರಿತ್ ಕೃಷ್ಣ ಮತ್ತು ಮೃದಂಗ ವಾದನದಲ್ಲಿ  ಸುಬ್ಬರಾವ್ ಅವರು ಸಾಥ್ ನೀಡಿದರು.



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top