ರಾಘವೇಂದ್ರ ಪ್ರಭು ಕರ್ವಾಲು ಅವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ

Chandrashekhara Kulamarva
0


ಉಡುಪಿ: ವಲಯ 15ರ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೆಸಿಐ ಉಡುಪಿ ಇಂದ್ರಾಳಿ ಘಟಕದಲ್ಲಿ ಭಾನುವಾರ (ಫೆ.25) ನಿಟ್ಟೂರು ಪ್ರಾಥಮಿಕ ಶಾಲಾ ಸಭಾಂಗಣ ಉಡುಪಿಯಲ್ಲಿ "ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್" ಕಾರ್ಯಕ್ರಮ ಜರಗಿತು.


ವೃತ್ತಿಯಲ್ಲಿ ಔಷಧಿ ಕಂಪೆನಿಯಲ್ಲಿ ಏರಿಯಾ ಮೆನೇಜರ್ ಆಗಿರುವ ಇವರು ಪ್ರವೃತ್ತಿಯಲ್ಲಿ 'ಸಮಾಜ ಸೇವಕರು ರಕ್ತದಾನ ವಿಭಾಗದಲ್ಲಿ ಈವರೆಗೆ 70 ಬಾರಿ ರಕ್ತದಾನ ಮಾಡಿದ್ದು, 5 ಶಿಬಿರಗಳನ್ನು ಆಯೋಜನೆ ಮಾಡಿದ್ದಾರೆ. ಇದಕ್ಕಾಗಿ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

ಜೀಸಿಯಲ್ಲಿ Past Zvp ವಲಯ ತರಬೇತಿದಾರರಾಗಿ ಸುಮಾರು 500ಕ್ಕೂ ತರಬೇತಿ ನೀಡಿರುವ ಜೆಸಿ ರಾಘವೇಂದ್ರ ಪ್ರಭು, ಕರ್ವಾಲುರವರಿಗೆ "ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್" ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಅಧ್ಯಕ್ಷರು ಆದ ಜೆಸಿ ಡಾ ಚಿತ್ರಾ ವಿಜಯ್ ನೆಗಳೂರ್, ವಲಯ ಉಪಾಧ್ಯಕ್ಷರಾದ JFD ಜೆಸಿ ವಿಘ್ನೇಶ್ ಪ್ರಸಾದ, IPP JFM ರಿಟಾ ಪಿರೇರಾ, ಲೇಡಿ ಜೆಸಿ ಸಂಯೋಜಕಿ ಜೆಸಿ ವಂದನಾ ಕೃಷ್ಣ, ಜಂಟಿ ಕಾರ್ಯದರ್ಶಿ ಜೆಸಿ ಹರಿಪ್ರಸಾದ್, JJC ರಕ್ಷಿತಾ ಸ್ಥಾಪಕ ಅಧ್ಯಕ್ಷರಾದ ಜೆಸಿ ಶರ್ಲಿ ಮನೋಜ್, ಪೂರ್ವ ಅಧ್ಯಕ್ಷರುಗಳಾದ ಜೆಸಿ ಅಶೋಕ್ ಪೂಜಾರಿ, ಪದಾಧಿಕಾರಿಗಳು ಆದ ಜೆಸಿ ವಿಜಯ್ ನೆಗಳೂರ್, ಜೆಸಿ ರಾಧಾಕೃಷ್ಣ, ಜೇಸಿ ಮಮತಾ, ಜೆಸಿ ಪದ್ಮಸಿನಿ, ಜೆಸಿ ಡಾ ಮುರಳೀಧರ ರಾವ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top