ವಿಷದ ಬಾಟಲಿ‌ ನುಂಗಿದ್ದ ನಾಗರಹಾವು ರಕ್ಷಣೆ

Upayuktha
0



ಉಡುಪಿ: ಹಾವೊಂದು ವಿಷದ ಬಾಟಲ್​ ನುಂಗಿ ಪರಿಪಾಟಲು ಪಡುತ್ತಿರುವುದನ್ನು ತಪ್ಪಿಸಿ, ಅದನ್ನ ಸಂರಕ್ಷಿಸಿದ ಘಟನೆಯೊಂದು ಉಡುಪಿ ಜಿಲ್ಲೆಯಲ್ಲಿ ನಡೆದಿದೆ. 



ಈ ದೃಶ್ಯ ವೈರಲ್ ಆಗುತ್ತಿದೆ. ಹಸುವಿನ ಮೈ ಮೇಲಿನ ಉಣ್ಣೆಗಳನ್ನು ನಿವಾರಣೆ ಮಾಡಲು ಬಳಸುವ ಔಷಧಿ ಬಾಟಲ್​ವೊಂದನ್ನ ಹಾವು ನುಂಗಿಬಿಟ್ಟಿತ್ತು. ಉಣ್ಣೆಗೆ ಬಳಸುವ ಔಷಧಿ ಬಾಟಲ್​ನಲ್ಲಿ ವಿಷದ ಅಂಶಗಳು ಸಹ ಇರುತ್ತವೆ. ನಾಗರಹಾವು ಈ ಬಾಟಲಿಯನ್ನೆ ನುಂಗಿತ್ತು. 




ಉಡುಪಿಯ ನೀರೆ ಬೈಲೂರಿನಲ್ಲಿ ಇಂತಹದ್ದೊಂದು ದೃಶ್ಯವನ್ನ ಕಂಡ ಸ್ಥಳೀಯ ಜಗದೀಶ್ ಎಂಬವರು ಉಡುಪಿಯ ಉರಗ ಸಂರಕ್ಷಕ ಗುರುರಾಜ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.  



ವಿಚಾರ ತಿಳಿದು ಸ್ಥಳಕ್ಕೆ ಬಂದ ಅವರು, ಹಾವನ್ನು ಹುಡುಕಾಡಿದ್ದಾರೆ. ಅಷ್ಟರಲ್ಲಿ ಹಾವು ಶೌಚಾಲಯದ ನೆಲದಡಿ ಸೇರಿಕೊಂಡಿತ್ತು. ಆ ಬಳಿಕ ಟಾಯ್ಲೆಟ್​ನ ಅಡಿಪಾಯದ ಕಲ್ಲುಗಳನ್ನು ಕಿತ್ತು ಹಾವನ್ನು ಹೊರಕ್ಕೆ ತೆಗೆಯಲಾಗಿದೆ. 



ಬಳಿಕ ಹಿಡಿದು ಅದರ ಹೊಟ್ಟೆ ಸೇರಿದ್ದ ವಿಷದ ಬಾಟಲಿಯನ್ನು ಬಹಳ ಜಾಗರೂಕತೆಯಿಂದ ತಳ್ಳುತ್ತಾ ಹೊರ ತೆಗೆದಿದ್ದಾರೆ. ನೀರೆ ಗ್ರಾಮದ ರಿತೇಶ್ ಎಂಬವರು ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಸ್ಥಳೀಯರ ವಿನಂತಿ ಮೇರೆಗೆ ಹಾವನ್ನು ನೀರೆ ಬೈಲೂರು ಸಮೀಪ ಕಾಡಿಗೆ ಬಿಡಲಾಗಿದೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Advt Slider:
To Top