ಅನೈತಿಕತೆಗೆ ಮನ್ನಣೆ, ಭ್ರಷ್ಟಾಚಾರದ ಹೆಚ್ಚಳ: ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಮತ

Upayuktha
0




ಶಂಕರಘಟ್ಟ: ಇಂದು ಶ್ರೀಮಂತರಾಗಲು ಎಲ್ಲರೂ ಬಯಸುತ್ತಾರೆ, ಹಣವಂತರಿಗೆ ಗೌರವ ನೀಡುತ್ತಾರೆ. ಆದರೆ ನೈತಿಕ ಹಾದಿಯಲ್ಲಿ  ಸಿರಿವಂತರಾಗಿದ್ದಾರೆಯೇ ಎಂಬ ಬಗ್ಗೆ ಯಾರಿಗೂ ಗಮನವಿಲ್ಲವಾಗಿರು ವುದು, ಅನೈತಿಕರಿಗೆ ಮನ್ನಣೆ ದೊರೆಯುತ್ತಿರುವುದು ಭ್ರಷ್ಟಾಚಾರ ಸರ್ವತ್ರವಾಗಲು ಕಾರಣ ಎಂದು ನಿವೃತ್ತ ನ್ಯಾಯಮೂರ್ತಿ ಮತ್ತು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.


ಶಿವಮೊಗ್ಗದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತುಕರ್ನಾಟಕರಾಜ್ಯ ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆ ಮಂಡ್ಯ ಜಿಲ್ಲಾ ಘಟಕಗಳು ಜಂಟಿ ಸಹಯೋಗದಲ್ಲಿ ಕುವೆಂಪು ವಿವಿಯ ಬಸವ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ 'ವಿಶ್ವ ಸಾಮಾಜಿಕ ನ್ಯಾಯ ಮತ್ತು ಹೆಣ್ಣುಮಕ್ಕಳ ಹಕ್ಕುಗಳು: ಕಾನೂನು ಅರಿವು' ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ದುರಾಸೆ, ಭ್ರಷ್ಟಾಚಾರ ಮಾಡಿ ಸಂಪತ್ಭರಿತರಾದವರು ಇನ್ನಷ್ಟು ಲಂಚ ಪಡೆಯುವುದು, ಸೋಮಾರಿತನ ಬೆಳೆಸುವುದು, ಅಧಿಕಾರ ಕೊಂಡುಕೊಳ್ಳುವುದು ಸೇರಿದಂತೆಎಲ್ಲ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದರು.


ಈ ಸಂದರ್ಭದಲ್ಲಿ ವಿವಿಯ ಕುಲಪತಿ ಪ್ರೊಎಸ್ ವೆಂಕಟೇಶ್, ಪ್ರಧಾನಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್ ನಾಯಕ್,  ವಿವಿಯ ಕುಲಸಚಿವ ವಿಜಯಕುಮಾರ್ ಹೆಚ್ ಬಿ , ಪರೀಕ್ಷಾಂಗ ಕುಲಸಚಿವ ಎಸ್ ಎಂ ಗೋಪಿನಾಥ್, ಹಣಕಾಸು ಅಧಿಕಾರಿ ಜಿ ಬಂಗಾರಪ್ಪ  ಹಾಜರಿದ್ದರು.


ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಬೀ ಜಿ ಶಿವಮೂರ್ತಿ, ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆಯ ಅಧ್ಯಕ್ಷೆ ರಜನಿರಾಜ್, ಮಹಿಳಾ ಹಕ್ಕುಗಳ ಅರಿವು ಕಾರ್ಯಕರ್ತೆ ಕೀರ್ತನಾ ಮಹಿಳೆಯರು, ವಿದ್ಯಾರ್ಥಿನಿಯರಿಗೆಅಗತ್ಯವಿರುವ ಕಾನೂನಿನ ತಿಳುವಳಿಕೆ, ಹಕ್ಕು, ಸವಲತ್ತು, ಜವಾಬ್ದಾರಿಗಳ ಕುರಿತುಉಪ್ಯನ್ಯಾಸ ನೀಡಿ ಮಾತನಾಡಿದರು.


ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಶಿವಮೊಗ್ಗದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎನ್‌. ಚಂದನ್ ಮಾತನಾಡಿದರು.



ಶಿಕ್ಷಣ ಪಡೆದ ನಂತರ ಅದನ್ನು ಸಾಮಾಜಿಕ ಒಳಿತಿಗಾಗಿ ಳಸುವುದು ಮುಖ್ಯ. ಇಲ್ಲವಾದಲ್ಲಿ ದೇಶದಲ್ಲಿ ನೈಜ ಬದಲಾವಣೆ ಆಗುವುದಿಲ್ಲ. ಯುವಜನರಿಗೆ ಅವಕಾಶಗಳು ದೊರೆಯದೆ ಅನುತ್ಪಾದಕತೆಯತ್ತ ಸಾಗಬೇಕಾಗುತ್ತದೆ. ಧಾರ್ಮಿಕ ವಿಷಯಗಳಿಗಿಂತ ಸಾಮಾಜಿಕ, ಶೈಕ್ಷಣಿಕ ಅಗತ್ಯಗಳು ಮುಖ್ಯವಾದಾಗ ಮಾತ್ರ ಅಭಿವೃದ್ಧಿ ಸಾಧ್ಯ.

- ಎಸ್ ಸಿದ್ಧರಾಜು, ಬೆಂಗಳೂರು ನಗರ  ಉಪ ಪೊಲೀಸ್ ಆಯುಕ್ತ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top